ಢಾಕಾ: ಮಯನ್ಮಾರ್ ಬಳಿ ಬಾಂಗ್ಲಾದೇಶದ ಗಡಿಯಲ್ಲಿ  ರೋಹಿಂಗ್ಯಾ ಸಮುದಾಯದ ಬಂಗಾಳಕೊಲ್ಲಿಗೆ ಸಾಗುತ್ತಿದ್ದ ದೋಣಿ ಮುಳುಗಿ ಐವರು ಮೃತಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಕ್ಸಿನ್ಹುವ ಸುದ್ದಿ ಸಂಸ್ಥೆಯ ವರದಿಯ ಪ್ರಕಾರ, ಹಲವಾರು ಜನರು ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ. 


ಈ ನಡುವೆ ಬಾಂಗ್ಲಾದೇಶದಲ್ಲಿ ರೋಹಿಂಗ್ಯಾ ನಿರಾಶ್ರಿತರ ಸಂಖ್ಯೆ 5,37,000 ಕ್ಕೆ ಏರಿದೆ ಎಂದು ವಿಶ್ವಸಂಸ್ಥೆಯು ತಿಳಿಸಿದೆ.


ಈ ಬಿಕ್ಕಟ್ಟು ಆಗಸ್ಟ್ 25 ರಂದು ಪ್ರಾರಂಭವಾಯಿತು. ರೋಹಿಂಗ್ಯ ಮುಸ್ಲಿಮರೊಂದಿಗೆ ಸಂಬಂಧ ಹೊಂದಿದ್ದ ಬಂಡಾಯ ಗುಂಪು ಪೊಲೀಸರು ಮತ್ತು ಮಿಲಿಟರಿ ಹುದ್ದೆಗಳ ಮೇಲೆ ಸರಣಿ ದಾಳಿಯನ್ನು ನಡೆಸಿತು.


ಇದಕ್ಕೆ ಪ್ರತಿಕ್ರಿಯೆಯಾಗಿ, ಮ್ಯಾನ್ಮಾರ್ ಸೈನ್ಯವು ನಡೆಸಿದ ದೊಡ್ಡ-ಪ್ರಮಾಣದ ಕಾರ್ಯಾಚರಣೆಯ ಕಾರಣ ರೋಹಿಂಗ್ಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಪಲಾಯನಗೊಳ್ಳಲು ಕಾರಣವಾಯಿತು.