ನವದೆಹಲಿ: ಇಸ್ಲಾಮಿ ಆಂದೋಲನ್ ಬಾಂಗ್ಲಾದೇಶ (ಐಎಬಿ), ಜಮಿಯತ್ ಉಲಾಮಾ-ಎ-ಇಸ್ಲಾಂ ಬಾಂಗ್ಲಾದೇಶ ಮತ್ತು ಇಸ್ಲಾಮಿ ಓಕ್ಯಾಜೋಟೆಯ ಹಲವಾರು ರಾಜಕೀಯ ಪಕ್ಷಗಳು ಮತ್ತು ಇಸ್ಲಾಮಿಸ್ಟ್‌ಗಳು ಶುಕ್ರವಾರ ಮಧ್ಯಾಹ್ನ ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಬಿಜೆಪಿ ನಾಯಕರು ನೀಡಿರುವ ಹೇಳಿಕೆಗಳ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಿವೆ. 


COMMERCIAL BREAK
SCROLL TO CONTINUE READING

ಪ್ರತಿಭಟನೆಯಲ್ಲಿ ಭಾಗವಹಿಸಿದ ಈ ಸಂಘಟನೆಗಳು ಭಾರತೀಯ ಉತ್ಪನ್ನಗಳನ್ನು ಬಹಿಷ್ಕ್ರರಿಸುವಂತೆ ಎಲ್ಲರಿಗೂ ಕರೆ ನೀಡಿವೆ. ಇದೆ ವೇಳೆ ಪಾಕಿಸ್ತಾನ ಪರ ರಾಜಕೀಯ ಪಕ್ಷಗಳೂ ಪ್ರತಿಭಟನೆ ನಡೆಸಿದವು.


ಇದನ್ನೂ ಓದಿ: ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ರಾ ಮಾಜಿ ಸಂಸದ ಶಿವರಾಮೇಗೌಡ!?


ಐಎಬಿ ಮುಖ್ಯಸ್ಥ ಮತ್ತು ಚಾರ್ಮೊನೈ ಪಿರ್, ಮತ್ತು  ಸೈಯದ್ ರೆಜಾಲ್ ಕರೀಮ್ ಅವರು ಮುಂದಿನ ಸಾಮೂಹಿಕ ಪ್ರತಿಭಟನೆಯನ್ನು ಮುನ್ನಡೆಸಲಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.


ಬೈತುಲ್ ಮುಕರಮ್‌ನಲ್ಲಿರುವ ರಾಷ್ಟ್ರೀಯ ಮಸೀದಿಯ ದಕ್ಷಿಣ ಗೇಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ, ಐಎಬಿ ನಾಯಕರು ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ ಕಡೆಗೆ ಸಾಮೂಹಿಕ ಮೆರವಣಿಗೆಯನ್ನು ನಡೆಸುವುದಾಗಿ ಹೇಳಿದ್ದಾರೆ.ಪ್ರವಾದಿಯವರ ಬಗ್ಗೆ ಹೇಳಿಕೆ ನೀಡಿದವರ ವಿರುದ್ಧ ಸಂಸತ್ತಿನಲ್ಲಿ ಪ್ರತಿಭಟನಾ ನಿರ್ಣಯ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.