ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ರಾ ಮಾಜಿ ಸಂಸದ ಶಿವರಾಮೇಗೌಡ!?

Shivaramegowda: ಮಂಡ್ಯ ರಾಜಕೀಯದಲ್ಲಿ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಸಂಚಲನ ಮೂಡಿಸಿದ್ದಾರೆ.  ಮಾಜಿ ಸಂಸದ ಶಿವರಾಮೇಗೌಡರು ಮತ್ತೆ ಬಿಜೆಪಿಯತ್ತ ಮುಖ ಮಾಡ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.  

Written by - Chetana Devarmani | Last Updated : Jun 11, 2022, 12:34 PM IST
  • ಮಂಡ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಮಾಜಿ ಸಂಸದ
  • ಜೆಡಿಎಸ್-ಕಾಂಗ್ರೆಸ್ ಗೆ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡುವ ಸುಳಿವು
  • ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ರಾ ಮಾಜಿ ಸಂಸದ ಶಿವರಾಮೇಗೌಡ?
ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ರಾ ಮಾಜಿ ಸಂಸದ ಶಿವರಾಮೇಗೌಡ!? title=
ಮಾಜಿ ಸಂಸದ ಶಿವರಾಮೇಗೌಡ

ಮಂಡ್ಯ: ಸದ್ಯ ಎಲ್ಲೆಲ್ಲೂ ಪದವೀಧರ ಕ್ಷೇತ್ರ ಚುನಾವಣೆಯ ಕಾವು ಜೋರಾಗಿದೆ. ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಆಯಾ ಪಕ್ಷದ ನಾಯಕರು ಭರ್ಜರಿ ಪ್ರಚಾರಗಳನ್ನು ನಡೆಸುತ್ತಿದ್ದಾರೆ. ಈ ಎಲ್ಲದರ ಮಧ್ಯೆ  ಮಂಡ್ಯ ರಾಜಕೀಯದಲ್ಲಿ ಮಾಜಿ ಸಂಸದ ಎಲ್. ಆರ್. ಶಿವರಾಮೇಗೌಡ ಸಂಚಲನ ಮೂಡಿಸಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನೀಡುವ ಸುಳಿವು ಕೊಟ್ಟಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡರು ಮತ್ತೆ ಬಿಜೆಪಿಯತ್ತ ಮುಖ ಮಾಡ್ತಾರಾ ಎಂಬ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:ಪಠ್ಯಪುಸ್ತಕದಲ್ಲಿ ಇತಿಹಾಸ ತಿರುಚಿದ ಕಾಂಗ್ರೆಸ್ ನಾಯಕರ ಜ್ಞಾನಹರಣವಾಗುತ್ತಿದೆ: ಬಿಜೆಪಿ

ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರು ಕೆಲವು ತಿಂಗಳುಗಳ ಹಿಂದೆ ಜೆಡಿಎಸ್‌ನಿಂದ ಉಚ್ಛಾಟನೆಗೊಂಡಿದ್ದರು. ಉಚ್ಚಾಟನೆಗೊಂಡ ಬಳಿಕ ಮುಂದಿನ ಚುನಾವಣೆಯಲ್ಲಿ ಪಕ್ಷೇತರವಾಗಿ‌ ಸ್ಪರ್ಧಿಸಲು ನಿರ್ಧರಿಸಿದ್ದರು ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಆದರೆ ಇದೀಗ ಬಿಜೆಪಿಯ ಎಲ್ಲ ಕಾರ್ಯಕ್ರಮಗಳಲ್ಲಿ ಶಿವರಾಮೇಗೌಡರು ಕಾಣಿಸಿಕೊಳ್ಳುತ್ತಿದ್ದಾರೆ. ಕಮಲ ಪಾಳಯದಲ್ಲಿ ಇದ್ದಕ್ಕಿದ್ದಂತೆ ಆಕ್ಟಿವ್‌ ಆಗಿರುವ ಶಿವರಾಮೇಗೌಡರ ಈ ನಡೆ ಮುಂಬರುವ ವಿಧಾನಸಭಾ ಚುನಾವಣೆಗೆ ಅವರ ಪೂರ್ವ ತಯಾರಿ ಎಂಬ ಪ್ರಶ್ನೆಯನ್ನು ಹುಟ್ಟಿಹಾಕುವಂತಿದೆ. 

2023ರ ಚುನಾವಣೆಯತ್ತ ಶಿವರಾಮೇಗೌಡರು ಗಮನಹರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಪದವೀಧರ ಕ್ಷೇತ್ರ ಚುನಾವಣೆಯ ಹಿನ್ನೆಲೆ ನಾಗಮಂಗಲದಲ್ಲಿ ಬಿಜೆಪಿ ಅಭ್ಯರ್ಥಿ ಪರ ಶಿವರಾಮೇಗೌಡರು ಮತಯಾಚನೆ ಮಾಡಿದ್ದಾರೆ. ಸಚಿವರಾದ ನಾರಾಯಣಗೌಡ ಮತ್ತು ಗೋಪಾಲಯ್ಯ ಜೊತೆ ಶಿವರಾಮೇಗೌಡರು ಸಹ ಮತಯಾಚನೆ ಮಾಡಿದ್ದು, ತೀವ್ರ ಕುರೂಹಲಕ್ಕೆ ಕಾರಣವಾಗಿದೆ. 

ಮುಂದಿನ‌ ಎಂಎ‌ಲ್‌ಎ ಚುನಾವಣೆಗೆ ನಾಗಮಂಗಲದಿಂದ ಬಿಜೆಪಿಯಿಂದ ಸ್ಪರ್ಧೆ ಶಿವರಾಮೇಗೌಡ ಮಾಡ್ತಾರಾ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವಂತಾಗಿದೆ. ದಿವಂಗತ ಜಿ. ಮಾದೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. 

ಇದನ್ನೂ ಓದಿ:ಸೆಕ್ಸ್‌ಗೆ ಸಪೋರ್ಟ್ ಮಾಡಿಲ್ಲ ಅಂತಾ ಕೊಂದೇಬಿಟ್ಟ: ಸಲಿಂಗಕಾಮಿಗಳ ಸರಸ ಕೊಲೆಯಲ್ಲಿ ಅಂತ್ಯ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News