Big Blow To Pakistan: ಮತ್ತೊಮ್ಮೆ FATF ಬೂದು ಪಟ್ಟಿಯಲ್ಲಿಯೇ ಉಳಿದ ಪಾಕಿಸ್ತಾನ
Big Blow To Pakistan - ಪ್ರಸ್ತುತ, ಪಾಕಿಸ್ತಾನವು (Pakistan) ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF)ನ ಬೂದು ಪಟ್ಟಿಯಲ್ಲಿ ಉಳಿಯಲಿದೆ. ಈ ಸುದ್ದಿ ಪಾಕಿಸ್ತಾನಿ ಮಾಧ್ಯಮಗಳಿಂದ ಹೊರಬಂದಿದೆ.
ಇಸ್ಲಾಮಾಬಾದ್: Big Blow To Pakistan - ಪ್ರಸ್ತುತ, ಪಾಕಿಸ್ತಾನವು (Pakistan) ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF)ನ ಬೂದು ಪಟ್ಟಿಯಲ್ಲಿ ಉಳಿಯಲಿದೆ. ಈ ಸುದ್ದಿ ಪಾಕಿಸ್ತಾನಿ ಮಾಧ್ಯಮಗಳಿಂದ ಹೊರಬಂದಿದೆ. ಸಭೆಯಲ್ಲಿ ಭಾಗಿಯಾಗಿರುವ ಐದು ದೇಶಗಳ ಪೈಕಿ ನಾಲ್ಕು ದೇಶಗಳು ಭಯೋತ್ಪಾದನೆ ಕುರಿತು ಪಾಕಿಸ್ತಾನ ಕೈಗೊಂಡ ಕಾರ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿವೆ. ಈ ಸಭೆಯಲ್ಲಿ ಭಾಗಿಯಾಗಿರುವ ಚೀನಾ ತನ್ನ 'ಐರನ್ ಬ್ರದರ್' ಪಾಕಿಸ್ತಾನವನ್ನು ಉಳಿಸಲು ತೀವ್ರ ಪ್ರಯತ್ನ ಮಾಡುತ್ತಿದೆ. ಇದೇ ವೇಳೆ ಭಾರತ ಈ ವೇದಿಕೆಯನ್ನು ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು ಬಳಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದೆ.
Pakistan) ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ (Shah Mehamood Qureshi) ಭಾರತ ತನ್ನ ರಾಜಕೀಯ ಹಿತಾಸಕ್ತಿಗಳನ್ನು ಪೂರೈಸಲು FATF ವೇದಿಕೆಯನ್ನು ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಇದು ತಾಂತ್ರಿಕ ವೇದಿಕೆಯಾಗಿದ್ದು, ಇದನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಬಾರದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ- Nuclear Plant Leakage Alert! ಮತ್ತೆ ಸಂಚು ರೂಪಿಸುತ್ತಿದೆಯೇ China? Corona ಬಳಿಕ ಇದೀಗ Nuclear Disaster ಅಪಾಯ!
FATFನ ಉಳಿದ ಒಂದು ಕ್ರಿಯಾಯೋಜನೆಯನ್ನು ಜಾರಿಗೆ ತರಲು ಪಾಕಿಸ್ತಾನಕ್ಕೆ ಕನಿಷ್ಠ ಎರಡರಿಂದ ಮೂರು ತಿಂಗಳು ಬೇಕಾಗುತ್ತದೆ. ಹೀಗಾಗಿ ಮುಂದೆಯೂ ಕೂಡ ಪಾಕಿಸ್ತಾನಕ್ಕೆ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF), ವಿಶ್ವಬ್ಯಾಂಕ್ ಮತ್ತು ಯುರೋಪಿಯನ್ ಒಕ್ಕೂಟದಿಂದ ಹಣಕಾಸಿನ ನೆರವು ಪಡೆಯುವುದು ಕಷ್ಟವಾಗಲಿದೆ. ಹೀಗಾಗಿ ಮೊದಲೇ ಆರ್ಥಿಕವಾಗಿ ಕಂಗಾಲಾಗಿರುವ ಪಾಕಿಸ್ತಾನದ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಇತರ ದೇಶಗಳೂ ಕೂಡ ಪಾಕಿಸ್ತಾನಕ್ಕೆ ಆರ್ಥಿಕ ನೆರವು ಒದಗಿಸುವುದುದನ್ನು ನಿಲ್ಲಿಸುವ ಸಾಧ್ಯತೆ ಇದೆ. ಏಕೆಂದರೆ, ಯಾವುದೇ ದೇಶವು ಆರ್ಥಿಕವಾಗಿ ಅಸ್ಥಿರವಾದ ದೇಶದಲ್ಲಿ ಹೂಡಿಕೆ ಮಾಡಲು ಬಯಸುವುದಿಲ್ಲ.
ಇದನ್ನೂ ಓದಿ-ಅಸಿಯಾನ್ ರಾಷ್ಟ್ರಗಳ ರಕ್ಷಣಾ ಸಚಿವರ ಸಭೆ ಉದ್ದೇಶಿಸಿ ರಾಜನಾಥ್ ಸಿಂಗ್ ಭಾಷಣ
2018 ರ ಜೂನ್‌ನಲ್ಲಿ ಪಾಕಿಸ್ತಾನವನ್ನು FATFನ ಬೂದು ಪಟ್ಟಿಗೆ ಸೇರಿಸಲಾಗಿದೆ. ಅಕ್ಟೋಬರ್ 2018 ಮತ್ತು ಫೆಬ್ರವರಿ 2019 ರಲ್ಲಿ ನಡೆಸಲಾಗಿರುವ ಪರಿಶೀಲನಾ ಸಭೆಯಲ್ಲಿಯೂ ಕೂಡ ಪಾಕಿಸ್ತಾನಕ್ಕೆ ಪರಿಹಾರ ಸಿಕ್ಕಿರಲಿಲ್ಲ. ಎಫ್‌ಎಟಿಎಫ್‌ನ ಶಿಫಾರಸುಗಳ ಮೇಲೆ ಕಾರ್ಯನಿರ್ವಹಿಸಲು ಪಾಕಿಸ್ತಾನ ವಿಫಲವಾಗಿದೆ. ಇದೆ ಅವಧಿಯಲ್ಲಿ ಪಾಕಿಸ್ತಾನದಲ್ಲಿರುವ ಉಗ್ರಸಂಘಟನೆಗಳಿಗೆ ವಿದೇಶಗಳಿಂದ ಹಾಗೂ ಸ್ಥಳೀಯ ಮಟ್ಟದಲ್ಲಿ ಭಾರಿ ಆರ್ಥಿಕ ನೆರವು ಹರಿದುಬಂದಿದೆ.
ಇದನ್ನೂ ಓದಿ-Male Pregnancy: ಇನ್ಮುಂದೆ ಪುರುಷರೂ ಕೂಡ ಗರ್ಭಧರಿಸಬಹುದಂತೆ, ತಲೆಕೆಟ್ಟ ಚೀನಾ ವಿಜ್ಞಾನಿಗಳಿಂದ ವಿಲಕ್ಷಣ ಆವಿಷ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.