Nuclear Plant Leakage Alert! ಮತ್ತೆ ಸಂಚು ರೂಪಿಸುತ್ತಿದೆಯೇ China? Corona ಬಳಿಕ ಇದೀಗ Nuclear Disaster ಅಪಾಯ!

LEAKAGE IN CHINA'S NUCLEAR PLANT: ಚೀನಾದ ಪರಮಾಣು ಇಂಧನ ಪ್ಲಾಂಟ್ ನಲ್ಲಿ ಸೋರಿಕೆಯ ವರದಿಯಾಗಿದೆ. ಈ ಕುರಿತು ಫ್ರಾನ್ಸ್ ನ ಕಂಪನಿಯೊಂದು ಅಮೆರಿಕಾದ ಸಹಾಯ ಕೋರಿದ್ದು, ಅಮೇರಿಕಾ ತನಿಖೆಯಲ್ಲಿ ತೊಡಗಿದೆ.

Written by - Nitin Tabib | Last Updated : Jun 14, 2021, 02:30 PM IST
  • ಚೀನಾದ ನ್ಯೂಕ್ಲೀಯರ್ ಪ್ಲಾಂಟ್ ನಲ್ಲಿ ಸೋರಿಕೆ
  • ಈ ಕುರಿತು ಅಮೆರಿಕಾಗೆ ಪತ್ರ ಬರೆದ ಫ್ರಾನ್ಸ್ ಕಂಪನಿ.
  • ಪ್ರಸ್ತುತ ಅಮೇರಿಕಾ ಈ ಪ್ರಕರಣದ ತನಿಖೆಯನ್ನು ಆರಂಭಿಸಿದೆ.
Nuclear Plant Leakage Alert! ಮತ್ತೆ ಸಂಚು ರೂಪಿಸುತ್ತಿದೆಯೇ China? Corona ಬಳಿಕ ಇದೀಗ Nuclear Disaster ಅಪಾಯ! title=
Leakage In China's Nuclear Plant (File Photo)

ವಾಷಿಂಗ್ಟನ್: Leakage In China's Nuclear Plant - ಕೊರೊನಾ ವೈರಸ್ (Coronavirus) ಅನ್ನು ಉತ್ಪತ್ತಿಸಿ ಅದನ್ನು ವಿಶ್ವಾದ್ಯಂತ ಹರಡಿದ ಆರೋಪ ಎದುರಿಸುತ್ತಿರುವ ಚೀನಾ (China), ಈಗಾಗಲೇ ವಿಶ್ವದ ಹಲವು ಬಲಿಷ್ಠ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಯಾಕೆ ಈ ಕುರಿತು ಹಲವಾರು ಅಧ್ಯಯನಗಳು ಈಗಾಗಲೇ ಪ್ರಕಟಗೊಂಡಿದ್ದು, ಈ ಮಾರಣಾಂತಿಕ ವೈರಸ್ ವುಹಾನ್ ಲ್ಯಾಬ್ (Wuhan Lab) ನಿಂದಲೇ ಸೋರಿಕೆಯಾಗಿದೆ ಎಂಬುದರ ಕುರಿತು ಸಂಕೇತ ನೀಡುತ್ತಿವೆ. ಇಷ್ಟಾದರೂ ಕೂಡ ಚೀನಾ ಪಾಠ ಕಲಿಯುವ ಮಾತೆ ಎತ್ತುತ್ತಿಲ್ಲ. ಏಕೆಂದರೆ ಇದೀಗ ಚೀನಾದ ಅಣು ಸ್ಥಾವರವೊಂದರಲ್ಲಿ ಭಾರಿ ತಪ್ಪು ನಡೆದಿರುವ ಕುರಿತು ವರದಿಯಾಗಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಚೀನಾದ ಪರಮಾಣು ವಿದ್ಯುತ್ ಸ್ಥಾವರದಲ್ಲಿ ಸೋರಿಕೆಯ ಚರ್ಚೆಯಾಗುತ್ತಿದೆ. ಇದಾದ ಬಳಿಕ ಜಾಗೃತೆಯ ಹೆಜ್ಜೆಯನ್ನಿಟ್ಟಿರುವ ಅಮೇರಿಕಾ (US) ಈ ಕುರಿತು ತನಿಖೆ ಆರಂಭಿಸಿದೆ.

ಪ್ರಕರಣ ಬೆಳಕಿಗೆ ಬಂದಿದ್ದಾದರೂ ಹೇಗೆ?
CNN ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಅಮೇರಿಕಾ ಸರ್ಕಾರ ಕಳೆದ ಒಂದು ವಾರದಿಂದ ಇದರ ತನಿಖೆಯಲ್ಲಿ ತೊಡಗಿದೆ ಎನ್ನಲಾಗಿದೆ. ಚೀನಾದ ಗುವಾಂಗ್ದೊಮ್ಸ್ ಪ್ರಾಂತ್ಯದಲ್ಲಿರುವ ತಾಯಿಶಾನ್ ನ್ಯೂಕ್ಲೀಯರ್ ಪವರ್ ಪ್ಲಾಂಟ್ (Taishan Nuclear Power Plant)ನಲ್ಲಿ ಫ್ರಾನ್ಸ್ ನ ಕಂಪನಿಯಾಗಿರುವ ಫ್ರೆಮಾಟಾಮ್ ಕೂಡ ಪಾಲುದಾರಿಕೆ ಹೊಂದಿದೆ. ಈ ಕಂಪನಿ ಪ್ಲಾಂಟ್ ನಲ್ಲಿ ಎನರ್ಜಿ ಲೀಕೆಜ್ ಕಾರಣ ರೇಡಿಯಾಲಾಜಿಕಲ್  ಅಪಾಯ ಎದುರಾಗಿರುವ ಕುರಿತು USಗೆ ವರದಿ ಈಡಿದೆ. ಈ ಲೀಕೆಜ್ ಅನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಅಧಿಕಾರಿಗಳು, ಪ್ಲಾಂಟ್ ಹೊರಗಡೆ ಇರುವ ವಿಕಿರಣದ ಪರಧಿಯನ್ನು ಹೆಚ್ಚಿಸಿದೆ. ಹೆಚ್ಚಿನ ಪ್ರಮಾಣದಲ್ಲಿ ವಿಕಿರಣ ಹೊರಸೂಚಿಸಿದರೂ ಕೂಡ ಅದನ್ನು ಯಾರು ಪ್ರಶ್ನಿಸಬಾರದು ಎಂಬುದೇ ಇದರ ಹಿಂದಿನ ಉದ್ದೇಶವಾಗಿದೆ. ಆದರೆ, ಈ ಪ್ಲಾಂಟ್ ಸ್ಥಗಿತಗೊಳ್ಳಲಿದೆ ಎಂಬ ಭಯ ಫ್ರೆಂಚ್ ಕಂಪನಿಗೆ ಕಾಡುತ್ತಿದೆ. 

ಫ್ರಾನ್ಸ್ ಜೊತೆಗೆ ಚೀನಾ ಸರ್ಕಾರವನ್ನು ಸಂಪರ್ಕಿಸಲಾಗಿದೆ
ಆದರೆ,  ಪರಮಾಣು ಸ್ಥಾವರದಲ್ಲಿನ ಪರಿಸ್ಥಿತಿ ಇನ್ನೂ ನಿಯಂತ್ರಣದಲ್ಲಿದೆ ಎಂದು ಬಿಡೆನ್ ಆಡಳಿತ (Biden Administration)  ಭಾವಿಸಿದೆ ಮತ್ತು ಇದು ಸ್ಥಾವರದಲ್ಲಿ ಕೆಲಸ ಮಾಡುವ ಜನರಿಗೆ ಮತ್ತು ಚೀನಾದ ನಾಗರಿಕರಿಗೆ ಯಾವುದೇ ಅಪಾಯ ಇಲ್ಲ ಎನ್ನಲಾಗಿದೆ. ಯುಎಸ್ ಆಡಳಿತವು ಈ ವಿಷಯವನ್ನು ಇನ್ನೂ ಅಪಾಯಕಾರಿ ಎಂದು ಪರಿಗಣಿಸದಿದ್ದರೂ ಕೂಡ ಅಲ್ಲಿನ  ರಾಷ್ಟ್ರೀಯ ಭದ್ರತಾ ಮಂಡಳಿ ಕಳೆದ ಸುಮಾರು ಒಂದು ವಾರದಿಂದ ಸಭೆಗಳನ್ನು ನಡೆಸುತ್ತಿದೆ. ಇದರೊಂದಿಗೆ ಫ್ರಾನ್ಸ್ ಸರ್ಕಾರ ಮತ್ತು ಇಂಧನ ಇಲಾಖೆಯ ತಜ್ಞರೊಂದಿಗೆ ಈ ವಿಷಯದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಸೋರಿಕೆ ಮುಂದುವರಿದರೆ ಅಥವಾ ಹೆಚ್ಚಾದರೆ ಪರಿಸ್ಥಿತಿ ತುಂಬಾ ಗಂಭೀರವಾಗಬಹುದು ಎಂಬುದು ಯುಎಸ್ ಅಧಿಕಾರಿಗಳು ಅಭಿಪ್ರಾಯವಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಅಮೇರಿಕ ಚೀನಾ ಸರ್ಕಾರದ ಅಧಿಕಾರಿಗಳ ಜೊತೆಗೂ ಕೂಡ ಸಂಪರ್ಕ ಸಾಧಿಸಿದ್ದಾರೆ ಎನ್ನಲಾಗಿದೆ. ಆದರೆ ಇದುವರೆಗೆ ಉಭಯ ದೇಶಗಳ ನಡುವಿನ ಮಾತುಕತೆ ಯಾವ ಹಂತಕ್ಕೆ ತಲುಪಿದೆ ಎಂಬುದು ಮಾತ್ರ ತಿಳಿದುಬಂದಿಲ್ಲ.

ಇದನ್ನೂ ಓದಿ-Coronavirus New Strain: Chinaದಲ್ಲಿ ನೂತನ ಕೊರೊನಾ ರೂಪಾಂತರಿಯ ಆತಂಕ, ಜನರನ್ನು ಮನೆಯಲ್ಲಿ ಬಂಧಿಸಲು ಡ್ರೋನ್ ನಿಯೋಜನೆ

ಫ್ರಾನ್ಸ್ ನೆರವು ಕೇಳಿದ್ಯಾಕೆ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಮೆರಿಕಾದ ನಿವೃತ್ತ ಪರಮಾಣು ವಿಜ್ಞಾನಿ ಚೆರಿಲ್ ರಾಫರ್, 'ಚೀನಾ ಯಾವಾಗಲೂ ಎಲ್ಲವೂ ಸರಿಯಾಗಿದೆ ಎಂದು ನಟಿಸಲು ಪ್ರಯತ್ನಿಸುತ್ತಿದ್ದರೂ, ಫ್ರಾನ್ಸ್ , ಅಮೆರಿಕಾದ ಬಳಿ ಇಂತಹ ಸಹಾಯವನ್ನು ಕೇಳುವುದು ಅಸಾಧಾರಣ ಪ್ರಕರಣವಲ್ಲ. ಏಕೆಂದರೆ ಯಾವ ದೇಶದಿಂದ ತಾವು ಸಹಾಯ ಕೋರುತ್ತಿದ್ದೇವೆ ಎಂಬುದು ಅವರಿಗೆ ತಿಳಿದಿದೆ ಮತ್ತು ಅಮೆರಿಕಾದ ಬಳಿ ಸಹಾಯ ಮಾಡುವ ವಿಶೇಷ ಸಾಮರ್ಥ್ಯವಿದೆ' ಎಂದಿದ್ದಾರೆ. ಫ್ರೆಂಚ್ ಕಂಪನಿ ಫ್ರಾಮಾಟೋಮ್ (Framatome) 2009 ರಲ್ಲಿ ಚೀನಾದಲ್ಲಿ ತೈಶಾನ್ ಪ್ಲಾಂಟ್ ನಿರ್ಮಾಣವನ್ನು ಆರಂಭಿಸಿತ್ತು. ಇದರ ನಂತರ, 2018-19 ವರ್ಷದಿಂದ ಇಲ್ಲಿ ವಿದ್ಯುತ್ ಉತ್ಪಾದನೆಯ ಕಾರ್ಯ ಆರಂಭಗೊಂಡಿದೆ.

ಇದನ್ನೂ ಓದಿ- G-7 Summit 2021: 'ಸಣ್ಣ ಸಮೂಹ ವಿಶ್ವದ ಕಳೆಬರಹ ನಿರ್ಧರಿಸಲು ಸಾಧ್ಯವಿಲ್ಲ', ಕ್ರಮಕ್ಕೆ ಹೆದರಿ G-7 ಸಮೂಹಕ್ಕೆ ಚೀನಾ ಧಮ್ಕಿ!

ಪ್ರಸ್ತುತ ಅಮೇರಿಕಾ ಹಾಗೂ ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಅಷ್ಟೊಂದು ಸರಿಯಾಗಿಲ್ಲ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಎಕೆಂದರೆ G-7 ಶೃಂಗಸಭೆಯಲ್ಲಿ ಅಮೇರಿಕಾ ಚೀನಾದ ವಿರುದ್ಧ ಗುಂಪುಗಾರಿಕೆಗೆ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದು, ಈ ಪ್ರಯತ್ನದಲ್ಲಿ ಅದು ಬಹುತೇಕ ಯಶಸ್ವಿಯಾಗಿದೆ. 

ಇದನ್ನೂ ಓದಿ-ಬಾವಲಿಗಳಲ್ಲಿ ಹೊಸ ಕೊರೊನಾ ಪತ್ತೆ ಹಚ್ಚಿದ ಚೀನಾ ಸಂಶೋಧಕರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News