Afghanistan Bomb Blast: ಉತ್ತರ ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯೊಂದರಲ್ಲಿ ಬುಧವಾರ (ನವೆಂಬರ್ 30) ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ತಾಲಿಬಾನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಮಾಂಗನ್ ಪ್ರಾಂತ್ಯದ ರಾಜಧಾನಿ ಐಬಕ್ನಲ್ಲಿರುವ ಅಲ್ ಜಿಹಾದ್ ಮದರಸಾದಲ್ಲಿ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಈ ಕುರಿತಂತೆ ಆಸ್ಪತ್ರೆಯ ವೈದ್ಯರನ್ನು ಉಲ್ಲೇಖಿಸಿ ವರದಿ ಮಾಡಿರುವ ಎಎಫ್ಪಿ ಸುದ್ದಿ ಸಂಸ್ಥೆ, ಮಧ್ಯಾಹ್ನದ ಪ್ರಾರ್ಥನೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಯಿಸಿದ್ದು, 16 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. 


ಇದನ್ನೂ ಓದಿ- ಮಂಜುಗಡ್ಡೆಯಲ್ಲಿ ಹೂತಿದ್ದ 48,500 ವರ್ಷಗಳಷ್ಟು ಹಳೆಯ 'ವೈರಸ್' ಗೆ ಪುನರ್ಜನ್ಮ...!


ರಾಜಧಾನಿ ಕಾಬೂಲ್ನಿಂದ ಉತ್ತರಕ್ಕೆ 200 ಕಿಲೋಮೀಟರ್ (130 ಮೈಲಿ) ದೂರದಲ್ಲಿರುವ ಐಬಕ್ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿ ದವರಲ್ಲಿ ಹೆಚ್ಚಿನವರು ಯುವಕರೇ ಎಂದು ಐಬಕ್ನ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.


ಇದನ್ನೂ ಓದಿ- ಚೀನಾ ಮತ್ತು ಬ್ರಿಟನ್ ಸುವರ್ಣ ಯುಗ ಮುಗಿಯಿತು ಎಂದು ಯುಕೆ ಪಿಎಂ ಹೇಳಿದ್ದೇಕೆ?


ಇನ್ನು ಈ ಘಟನೆ ಕುರಿತಂತೆ ಮಾಹಿತಿ ನೀಡಿರುವ ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ನಫಿ ಟಕೋರ್, ಉತ್ತರ ಸಮಾಂಗನ್ ಪ್ರಾಂತ್ಯದ ರಾಜಧಾನಿ ಐಬಕ್ ನಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಈ ದುರ್ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದು, ಎರಡು ಡಜನ್ಗೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.