Bomb Threat Indian Airspace: ಭಾರತ ಸೇರಿದಂತೆ ಹಲವು ದೇಶಗಳ ಪಾಲಿಗೆ ಸೋಮವಾರ. 3 ಅಕ್ಟೋಬರ್ 2022. ಸಾಮಾನ್ಯ ದಿನದಂತಿತ್ತು. ಆದರೆ ದಿಢೀರನೇ ಬಂದ ಸುದ್ದಿಯೊಂದು 4 ದೇಶಗಳಲ್ಲಿ ಭಾರಿ ಸಂಚಲನ ಮೂಡಿಸಿದೆ. ಇರಾನ್‌ನಿಂದ ಚೀನಾಕ್ಕೆ ತೆರಳುತ್ತಿದ್ದ ಪ್ರಯಾಣಿಕ ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿ ಇದಾಗಿತ್ತು. ಈ ಸುದ್ದಿಯನ್ನು ಲಾಹೋರ್ ಎಟಿಸಿ ನೀಡಿದೆ. ಆ ಸಮಯದಲ್ಲಿ ಮಹಾನ್ ಏರ್‌ಲೈನ್ಸ್ ವಿಮಾನವು ಭಾರತೀಯ ವಾಯುಪ್ರದೇಶದಲ್ಲಿತ್ತು. ಅಲರ್ಟ್ ಬಂದ ತಕ್ಷಣ ಭಾರತೀಯ ಭದ್ರತಾ ಏಜೆನ್ಸಿಗಳು ಅಲರ್ಟ್ ಆಗಿದ್ದು, ಪರಿಸ್ಥಿತಿ ನಿಭಾಯಿಸುವ ಬಗ್ಗೆ ಚರ್ಚೆ ಆರಂಭವಾಗಿದೆ. ವಿಮಾನವು ಭಾರತೀಯ ವಾಯುಪ್ರದೇಶದಲ್ಲಿದ್ದ ಕಾರಣ, ಭದ್ರತಾ ಅಧಿಕಾರಿಗಳು ಯಾವುದೇ ಅಪಾಯವನ್ನು ತೆಗೆದುಕೊಂಡಿಲ್ಲ. ಎರಡು ವಾಯುಪಡೆಯ ವಿಮಾನಗಳನ್ನು ತಕ್ಷಣವೇ ಹರಾಟ ನಡೆಸಲು ಆದೇಶಿಸಲಾಯಿತು ಮತ್ತು ಅವರು ಈ ಇರಾನ್ ವಿಮಾನಕ್ಕೆ ಮುತ್ತಿಗೆ ಹಾಕಿದ್ದಾರೆ ಮತ್ತು ಅದನ್ನು ಭಾರತೀಯ ವಾಯುಪ್ರದೇಶದಿಂದ ಸುರಕ್ಷಿತವಾಗಿ ಹೊರಗೆ ತಂದಿದ್ದಾರೆ.


COMMERCIAL BREAK
SCROLL TO CONTINUE READING

>> ಇರಾನ್‌ನ ಟೆಹ್ರಾನ್‌ನಿಂದ ವಿಮಾನ ಹಾರಾಟ ಕೈಗೊಂಡಿತ್ತು. ಅದು ಚೀನಾದ ಗುವಾಂಗ್‌ಝೌನಲ್ಲಿ ಇಳಿಯಬೇಕಿತ್ತು. ವಿಮಾನವು ಪಾಕಿಸ್ತಾನದ ವಾಯುಪ್ರದೇಶದ ಮೂಲಕ ಭಾರತದ ವಾಯುಪ್ರದೇಶವನ್ನು ಪ್ರವೇಶಿಸಿದೆ.


>> ಆಗ ಲಾಹೋರ್ ಎಟಿಸಿ ಬಾಂಬ್ ಬಗ್ಗೆ ಮಾಹಿತಿ ನೀಡಿದ್ದು ದೆಹಲಿಯ ಭದ್ರತಾ ಏಜೆನ್ಸಿಗಳು ತಕ್ಷಣಕ್ಕೆ ಎಚ್ಚೆತ್ತುಕೊಂಡಿವೆ. ಈ ವಿಮಾನ ದೆಹಲಿಯಲ್ಲಿ ಇಳಿಯಲು ಅನುಮತಿಯನ್ನೂ ಕೋರಿತ್ತು. ಆದರೆ ದೆಹಲಿಯಲ್ಲಿ ಇಳಿಯಲು ಅದಕ್ಕೆ ಅವಕಾಶ ನೀಡಲಾಗಿಲ್ಲ.


>> ವಿಮಾನದ ಪೈಲಟ್ ಗಳನ್ನು ಜೈಪುರಕ್ಕೆ ಹೋಗುವಂತೆ ಕೋರಲಾಯಿತು. ಆದರೆ ಪೈಲಟ್ ಅದನ್ನು ಮಾಡಲು ನಿರಾಕರಿಸಿದರು, ನಂತರ ವಿಮಾನವು ಚೀನಾಕ್ಕೆ ಹೊರಟಿತು. ವಿಮಾನವು ಚೀನಾವನ್ನು ಪ್ರವೇಶಿಸಿದಾಗ, ಭದ್ರತಾ ಏಜೆನ್ಸಿಗಳು ಅಲ್ಲಿಯೂ ಸಂಪೂರ್ಣ ಕಟ್ಟುನಿಟ್ಟನ್ನು ಪಾಲಿಸುತ್ತಿವೆ ಎಂಬುದು ಸ್ಪಷ್ಟವಾಗಿದೆ.


>> ಭಾರತೀಯ ವಾಯುಪಡೆಯ Su-30MKI ಯುದ್ಧ ವಿಮಾನಗಳು ಜೋಧ್‌ಪುರ ಮತ್ತು ಪಂಜಾಬ್ ಏರ್‌ಬೇಸ್‌ನಿಂದ ವಿಮಾನವನ್ನು ರಕ್ಷಿಸಲು ಹೊರಟಿವೆ.

>> ಮಾಹಿತಿ ಪಡೆದ ನಂತರ ಯುದ್ಧ ವಿಮಾನಗಳು ಟೇಕಾಫ್ ಆಗಿವೆ ಎಂದು ವಾಯುಪಡೆ ಮೂಲಗಳು ತಿಳಿಸಿವೆ. ಈ ಸಮಯದಲ್ಲಿ, SOP ಅಡಿಯಲ್ಲಿ ಸುರಕ್ಷಿತ ಅಂತರವನ್ನು ಅನುಸರಿಸಲಾಗಿದೆ.


>> ಆದಾಗ್ಯೂ, ಬೆದರಿಕೆಯನ್ನು ನಿರ್ಲಕ್ಷಿಸುವಂತೆ ಇರಾನಿನ ಏಜೆನ್ಸಿಗಳು ಕೇಳಿಕೊಂಡಿವೆ, ಇದಾದ ಬಳಿಕ ವಿಮಾನಕ್ಕೆ ಚೀನಾದ ಕಡೆಗೆ ತನ್ನ ಹಾರಾಟವನ್ನು ಮುಂದುವರಿಸಲು ಅನುಮತಿಸಲಾಗಿದೆ.


ಇದನ್ನೂ ಓದಿ-ಶೀಘ್ರದಲ್ಲಿ ಟ್ವಿಟ್ಟರ್ ನಲ್ಲಿಯೂ ಕೂಡ ನಿಮ್ಮ ಪೋಸ್ಟ್ ಎಡಿಟ್ ಮಾಡಬಹುದು..! ಹೇಗೆ ಅಂತೀರಾ?


>> ಆದರೆ ವಿಮಾನವನ್ನು ಭಾರತೀಯ ವಾಯುಪ್ರದೇಶದಿಂದ ಹೊರಹೋಗುವವರೆಗೆ ಬೆಂಗಾವಲು ಒದಗಿಸಲಾಗಿದೆ. ಇದೀಗ ಅದು ಭಾರತೀಯ ವಾಯುಪ್ರದೇಶದಿಂದ ಹೊರ ಹೋಗಿದೆ. ವಿಮಾನದಲ್ಲಿ ಬಾಂಬ್ ಇದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.


ಇದನ್ನೂ ಓದಿ-ಯುದ್ಧದಲ್ಲಿ ಕಾಲು ಕಳೆದುಕೊಂಡ ಯೋಧನಿಂದ ಪ್ರೇಮ ನಿವೇದನೆ: ಆದ್ರೆ ಹುಡುಗಿ ಮಾಡಿದ್ದೇನು ಗೊತ್ತಾ? ಶಾಕ್ ಆಗ್ತೀರ


>> Filghtradar24 ರ ಮಾಹಿತಿಯ ಪ್ರಕಾರ, ಇರಾನಿನ ವಿಮಾನವು ದೆಹಲಿ-ಜೈಪುರ ವಾಯುಪ್ರದೇಶದಲ್ಲಿ ಸ್ವಲ್ಪ ಸಮಯದವರೆಗೆ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದೆ ಮತ್ತು ನಂತರ ಅದು ಭಾರತೀಯ ವಾಯುಪ್ರದೇಶದಿಂದ ಹೊರಗೆ ಹೋಗುತ್ತಿರುವುದು ಕಂಡುಬಂದಿದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.