Mansion of Free Love: ಬ್ರೆಜಿಲಿಯನ್ ಖ್ಯಾತ  ಮಾಡೆಲ್ ಮತ್ತು  ಆರ್ಥರ್ ಉರ್ಸೊಗೆ ಎಂಟು ಮದದಿಯರಿದ್ದಾರೆ, ಆತನ ಎಲ್ಲಾ ಪತ್ನಿಯರು ಅವನೊಂದಿಗೆ ವಾಸಿಸುತ್ತಾರೆ. ಆರ್ಥರ್ ಉರ್ಸೊ 7500 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಅರಮನೆಯನ್ನು ನಿರ್ಮಿಸುತ್ತಿದ್ದಾನೇ, ಅವರು ಎಲ್ಲಾ ಹೆಂಡತಿಯರು ವೈಭವದಿಂದ ಬದುಕಬೇಕು ಎಂಬ ಉದ್ದೇಶದಿಂದ ಆತ ಈ ಅರಮನೆಯನ್ನು ನಿರ್ಮಿಸುತ್ತಿದ್ದು, ಅದಕ್ಕೆ 'ಮ್ಯಾನ್ಷನ್ ಆಫ್ ಫ್ರೀ ಲವ್' ಎಂದು ಹೆಸರಿಸಿದ್ದಾನೆ.


COMMERCIAL BREAK
SCROLL TO CONTINUE READING

ಏಕಕಾಲಕ್ಕೆ 9 ಮದುವೆಗಳನ್ನು ಮಾಡಿಕೊಂಡು ಸಂಚಲನ ಮೂಡಿಸಿದ್ದ ಆರ್ಥರ್ ಉರ್ಸೊ
ವೃತ್ತಿಯಲ್ಲಿ ಮಾಡೆಲ್ ಮತ್ತು ಇನ್ಫ್ಲುಯೆಂಜರ್ ಆಗಿರುವ ಆರ್ಥರ್ ಉರ್ಸೊ, 2021 ರಲ್ಲಿ ಏಕಕಾಲದಲ್ಲಿ 9 ಹುಡುಗಿಯರನ್ನು ಮದುವೆಯಾಗುವ ಮೂಲಕ ಭಾರಿ ಸಂಚಲನವನ್ನು ಮೂಡಿಸಿ ಹೆಡ್ಲೈನ್ ಗಿಟ್ಟಿಸಿದ್ದ. ಆದರೆ, ನಂತರ ಆರ್ಥರ್ ಪತ್ನಿಯರಲ್ಲಿ ಒಬ್ಬಳು ವಿಚ್ಛೇದನ ಪಡೆದುಕೊಂಡಿದ್ದಾಳೆ, ಏಕೆಂದರೆ ಆಕೆ ತನ್ನ ಗಂಡನನ್ನು ಬೇರೆ ಯಾವುದೇ ಮಹಿಳೆಯೊಂದಿಗೆ ಹಂಚಿಕೊಳ್ಳಲು ಇಷ್ಟಪಡಲಿಲ್ಲ ಎನ್ನಲಾಗಿದೆ.

ಆರ್ಥರ್ನ ಈ ಮದುವೆಗಳಿಗೆ ಕಾನೂನು ಮಾನ್ಯತೆ ಇಲ್ಲ
ಆದರೆ, ಆರ್ಥರ್ ಒ ಉರ್ಸೊ ಮಾಡಿಕೊಂಡಿರುವ ಈ ವಿವಾಹಗಳು ಅಧಿಕೃತವಾಗಿ ಕಾನೂನುಬದ್ಧವಾಗಿಲ್ಲ, ಏಕೆಂದರೆ ಬ್ರೆಜಿಲ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದು ಕಾನೂನಿಗೆ ವಿರುದ್ಧವಾಗಿದೆ. ಆದರೆ, ಆರ್ಥರ್ ತನ್ನ ಜೀವನದಲ್ಲಿ ತುಂಬಾ ಉತ್ಸುಕನಾಗಿದ್ದಾನೆ ಮತ್ತು ಅವನ ಹೆಂಡತಿಯರು ಸಹ ಅವನೊಂದಿಗೆ ತುಂಬಾ ಸಂತೋಷವಾಗಿದ್ದಾರೆ.


ಇದನ್ನೂ ಓದಿ-Rat Driving Car: ಕಾರು ಓಡಿಸುವ ಇಲಿಗಳು! ಈ ವಿಶ್ವವಿದ್ಯಾಲಯದಲ್ಲಿ ನೀಡಲಾಗ್ತಿದೆ ವಿಶೇಷ ತರಬೇತಿ


ಈಗ ಆರ್ಥರ್ ಕುಟುಂಬಕ್ಕೆ ಬೆದರಿಕೆಗಳು ಬರುತ್ತಿವೆ
ಆರ್ಥರ್ ಒ ಉರ್ಸೊನ ಈ ಜೀವನಶೈಲಿ ಹಲವರ ಕೆಂಗಣ್ಣಿಗೆ ಗುರಿಯಾಗಿದೆ ಮತ್ತು ಆತ ತೊಂದರೆಗಳನ್ನು ಎದುರಿಸುತ್ತಿದ್ದಾನೆ. ಆರ್ಥರ್ ಮನೆಯ ಗೋಡೆಯೊಂದರಲ್ಲಿ ಯಾರೋ ರಾಕ್ಷಸ ಎಂದು ಬರೆದಿದ್ದಾರೆ. ಅವರ ಮನೆಯ ಗೋಡೆಯ ಮೇಲೆ, 'ದೈತ್ಯ ಗಾತ್ರದ  ಕುಟುಂಬ, ದೂರ ಹೋಗು, ನಾವು ನಿಮ್ಮನ್ನು ಸ್ವಾಗತಿಸುವುದಿಲ್ಲ' ಎಂದು ಬರೆಯಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್ಥರ್, ಗೋಡೆಯ ಮೇಲೆ ಈ ರೀತಿ ಬರೆಯಲಾದ ದಿನ ತುಂಬಾ ನಿರಾಶಾದಾಯಕವಾಗಿತ್ತು. ನಮಗೆ ಶಾಂತಿ ಬೇಕು. ಬೆಳಗ್ಗೆ ನಿರ್ಮಾಣ ತಂಡ ಬಂದ ನಂತರ ಗೇಟ್ ತೆರೆದಾಗ ಗೋಡೆಯ ಮೇಲೆ ಯಾರೋ ಇಂತಹ ಸಂದೇಶ ಬರೆದಿರುವುದು ಗೊತ್ತಾಯಿತು' ಎಂದು ಹೇಳಿದ್ದಾರೆ.


ಯುಎಸ್ ನೊಂದಿಗೆ 3 ಬಿಲಿಯನ್ ಡಾಲರ್ ಮೌಲ್ಯದ ಡ್ರೋನ್ ಒಪ್ಪಂದಕ್ಕೆ ಮುಂದಾದ ಭಾರತ


ಪ್ರೀತಿಗಾಗಿ ಮಾಡಲಾದ ವೇಳಾಪಟ್ಟಿ
ಆರ್ಥರ್ ಓ ಉರ್ಸೋಗೆ ಎಲ್ಲಾ ಮಡದಿಯರಿಗೆ ಸಮಯ ನೀಡುವುದು ಸುಲಭವಲ್ಲ ಮತ್ತು ಇದಕ್ಕಾಗಿ ಅವರು 'ಸೆಕ್ಸ್ ರೋಟಾ'ವನ್ನು ಸಿದ್ಧಪಡಿಸಿದ್ದಾರೆ. ಅದರ ಆಧಾರದ ಮೇಲೆ, ಅವನು ತನ್ನ ಹೆಂಡತಿಯರೊಂದಿಗೆ ಸಮಯ ಕಳೆಯುತ್ತಾನೆ ಮತ್ತು ವೇಳಾಪಟ್ಟಿಯ ಆಧಾರದ ಮೇಲೆ ಅವರನ್ನು ಪ್ರೀತಿಸುತ್ತಾನೆ. ಆರ್ಥರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯನಾಗಿದ್ದಾನೆ ಮತ್ತು ತನ್ನ ಹೆಂಡತಿಯರ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.