'Economy ಸರಿಯಾದ ದಾರಿಯಲ್ಲಿ ಸಾಗಬೇಕಾದರೆ, ಆದಷ್ಟು ಹೆಚ್ಚು ಮದ್ಯಪಾನ ಮಾಡಿ' ಸರ್ಕಾರದ ವಿಚಿತ್ರ ಫರ್ಮಾನು

Alcohol Competition In Japan:ಜಪಾನ್ ನಲ್ಲಿ ಮದ್ಯಪಾನ ಸೇವನೆ ಕಡಿಮೆಯಾಗಿದ್ದರಿಂದ ಸರ್ಕಾರದ ಆದಾಯದಲ್ಲಿ ಕೊರತೆ ಎದುರಾಗಿದೆ. ಇದರಿಂದಾಗಿ ಯುವಜನರಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಸರ್ಕಾರ ವಿಶೇಷ ಸ್ಪರ್ಧೆಯನ್ನು ಆರಂಭಿಸಿದ್ದು, 20 ರಿಂದ 39 ವಯಸ್ಸಿನೊಳಗಿನ ಯುವಕರಿಗೆ ಮದ್ಯದ ಜನಪ್ರೀಯತೆಯನ್ನು ಮರಳಿ ತರಲು ಪ್ರಸ್ತಾವನೆಗಳೊಂದಿಗೆ ಬರಲು ಸೂಚಿಸಲಾಗಿದೆ.  

Written by - Nitin Tabib | Last Updated : Aug 21, 2022, 05:58 PM IST
  • ಜಪಾನ್ ನಲ್ಲಿ ಮದ್ಯಪಾನ ಸೇವನೆ ಕಡಿಮೆಯಾಗಿದ್ದರಿಂದ ಸರ್ಕಾರದ ಆದಾಯದಲ್ಲಿ ಕೊರತೆ ಎದುರಾಗಿದೆ.
  • ಇದರಿಂದಾಗಿ ಯುವಜನರಲ್ಲಿ ಮದ್ಯಪಾನವನ್ನು ಉತ್ತೇಜಿಸಲು ಸರ್ಕಾರ ವಿಶೇಷ ಸ್ಪರ್ಧೆಯನ್ನು ಆರಂಭಿಸಿದ್ದು,
  • 20 ರಿಂದ 39 ವಯಸ್ಸಿನೊಳಗಿನ ಯುವಕರಿಗೆ ಮದ್ಯದ ಜನಪ್ರೀಯತೆಯನ್ನು ಮರಳಿ ತರಲು ಪ್ರಸ್ತಾವನೆಗಳೊಂದಿಗೆ ಬರಲು ಸೂಚಿಸಲಾಗಿದೆ.
'Economy ಸರಿಯಾದ ದಾರಿಯಲ್ಲಿ ಸಾಗಬೇಕಾದರೆ, ಆದಷ್ಟು ಹೆಚ್ಚು ಮದ್ಯಪಾನ ಮಾಡಿ' ಸರ್ಕಾರದ ವಿಚಿತ್ರ ಫರ್ಮಾನು title=
Alcohol Consumption In Japan

Alcohol Competition in Japan: ಜಪಾನ್‌ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ವಾಸ್ತವದಲ್ಲಿ, ಜಪಾನ್‌ನ ಆರ್ಥಿಕ ವ್ಯವಸ್ಥೆಯು ತುಂಬಾ ಹದಗೆಟ್ಟಿದೆ. ಆದಾಯ ಹೆಚ್ಚಿಸಿಕೊಳ್ಳಲು ಸರ್ಕಾರ ಮದ್ಯಪಾನ ಮಾಡುವಂತೆ ಪ್ರೇರೇಪಿಸುತ್ತಿದೆ. ವಿಶ್ವಾದ್ಯಂತದ ಸರ್ಕಾರಗಳು ಒಂದೆಡೆ ಯುವಕರಲ್ಲಿ ಆಲ್ಕೊಹಾಲ್ ಚಟವನ್ನು ಕಡಿಮೆ ಮಾಡಲು ಗಂಭೀರ ಪ್ರಯತ್ನಗಳನ್ನು ಮಾಡುತ್ತವೆ, ಆದರೆ ಜಪಾನ್ ತನ್ನ ಯುವಕರಲ್ಲಿ ಕಡಿಮೆಯಾಗಿರುವ ಮದ್ಯಪಾನ ಅಭ್ಯಾಸದಿಂದ ತೊಂದರೆಗೀಡಾಗಿದೆ. ಜಪಾನಿನ ಜನರ ಮದ್ಯಪಾನ ಮಾಡುವ ಪ್ರವೃತ್ತಿ ನಿರಂತರವಾಗಿ ಕುಸಿಯುತ್ತಿದೆ. ಮದ್ಯದ ಸೇವನೆ ಕಡಿಮೆಯಾಗುತ್ತಿರುವುದರಿಂದ ಜಪಾನ್‌ನ ಆದಾಯ ಕೂಡ ಕುಸಿದಿದೆ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಿನ ಸರ್ಕಾರ ಚಿಂತೆಗೀಡಾಗಿದೆ. ಹೆಚ್ಚು ಹೆಚ್ಚು ಮದ್ಯ ಸೇವಿಸುವಂತೆ ಅದು ಜನರನ್ನು ಪ್ರೇರೇಪಿಸುತ್ತಿದೆ.

'ದಿ ಸೇಕ್ ವಿವಾ' ಸ್ಪರ್ಧೆ
ಇದಕ್ಕಾಗಿ ಸರ್ಕಾರ ಆರಂಭಿಸಿರುವ ಅಭಿಯಾನದ ಹೆಸರು 'ದಿ ಸೇಕ್ ವಿವಾ', ಜಪಾನ್‌ನ ರಾಷ್ಟ್ರೀಯ ತೆರಿಗೆ ಏಜೆನ್ಸಿ ನಡೆಸುವ ಈ ಸ್ಪರ್ಧೆಯಲ್ಲಿ, 20-39 ವರ್ಷ ವಯಸ್ಸಿನವರು ವಿಚಿತ್ರ ಕೆಲಸ ಮಾಡಬೇಕಾಗಲಿದೆ. ಜಪಾನ್‌ನಲ್ಲಿ ಆಲ್ಕೋಹಾಲ್‌ನ ಜನಪ್ರಿಯತೆಯನ್ನು ಮರುಕಳಿಸಲು ಪ್ರಸ್ತಾಪಗಳೊಂದಿಗೆ ಬರಲು ಈ ಜನರನ್ನು ಕೋರಲಾಗಿದೆ. ಈ ಸ್ಪರ್ಧೆಯು ಸೆಪ್ಟೆಂಬರ್ 9 ರವರೆಗೆ ನಡೆಯಲಿದೆ. 1995ರಲ್ಲಿ ಜಪಾನ್‌ನಲ್ಲಿ ವಾರ್ಷಿಕವಾಗಿ 100 ಲೀಟರ್‌ನಷ್ಟಿದ್ದ ಮದ್ಯ ಸೇವನೆ 2020ರಲ್ಲಿ 75 ಲೀಟರ್‌ಗೆ ಇಳಿದಿದೆ. ಅಂದರೆ, ಜಪಾನ್‌ನ ಜನರು 1995 ಕ್ಕಿಂತ 2020 ರಲ್ಲಿ ಕಡಿಮೆ ಆಲ್ಕೊಹಾಲ್ ಸೇವಿಸುತ್ತಿದ್ದಾರೆ.

ಮದ್ಯದ ಆದಾಯದ ಮೇಲೆ ಪರಿಣಾಮ ಬೀರುತ್ತಿದೆ
1980 ರ ದಶಕದಲ್ಲಿ, ಜಪಾನ್‌ನಲ್ಲಿ ಆಲ್ಕೋಹಾಲ್ ನಿಂದ ಬರುವ ಒಟ್ಟು ಆದಾಯದ ಶೇ.5 ರಷ್ಟಿತ್ತು. 2011 ರಲ್ಲಿ ಇದು ಶೇ.3 ಕ್ಕೆ ಇಳಿಕೆಯಾಗಿದ್ದು, 2020 ರಲ್ಲಿ ಅದು ಕೇವಲ ಶೇ.1.7 ಕ್ಕೆ ತಲುಪಿದೆ. ಜಪಾನ್ ಈಗಾಗಲೇ 290 ಬಿಲಿಯನ್ ಪೌಂಡ್‌ಗಳ ಕೊರತೆಯಲ್ಲಿದೆ. 1980ಕ್ಕೆ ಹೋಲಿಸಿದರೆ ಜಪಾನ್ £110 ಶತಕೋಟಿಗೂ ಹೆಚ್ಚು ಆದಾಯದ ನಷ್ಟವನ್ನು ಎದುರಿಸುತ್ತಿದೆ.

ಇದನ್ನೂ ಓದಿ-ಹಿಂದೂ ದೇವಾಲಯದ ಹೊರಭಾಗದಲ್ಲಿದ್ದ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸ

ವೃದ್ಧಾಪ್ಯದಲ್ಲಿ ಮದ್ಯಪಾನದಿಂದ ದೂರವಿರುವುದು
ಜಪಾನ್‌ಗೆ ಎದುರಾಗಿರುವ ಮತ್ತೊಂದು ಬಿಕ್ಕಟ್ಟು ಎಂದರೆ ಅಲ್ಲಿನ ಜನಸಂಖ್ಯೆಯ ಮೂರನೇ ಒಂದು ಭಾಗ ಅಥವಾ ಸುಮಾರು ಶೇ. 30 ರಷ್ಟು ಜನರು 65 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ವೃದ್ಧಾಪ್ಯದಲ್ಲಿ, ಆರೋಗ್ಯಕರ ಜೀವನಕ್ಕೆ ಪ್ರಾಮುಖ್ಯತೆ ನೀಡಲು ಜಪಾನಿಯರು ಮದ್ಯಪಾನದಿಂದ ದೂರ ಉಳಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಯುವಜನರನ್ನು ಮದ್ಯಪಾನದತ್ತ ಆಕರ್ಷಿಸಲು ಮತ್ತು ಅವರಲ್ಲಿ ಮದ್ಯಸೇವನೆ ಉತ್ತೇಜಿಸಲು ಅಲ್ಲಿನ ಸರ್ಕಾರ ಹೊಸ ಮಾರ್ಗಗಳನ್ನು ರೂಪಿಸುತ್ತಿದೆ. ಆಲ್ಕೋಹಾಲ್ ಸೇವನೆಯನ್ನು ಹೆಚ್ಚಿಸಲು ಮೆಟಾವರ್ಸ್‌ನಿಂದ ಕೃತಕ ಬುದ್ಧಿಮತ್ತೆಯವರೆಗಿನ ಪ್ರತಿಯೊಂದು ಆಧುನಿಕ ತಂತ್ರಜ್ಞಾನದ ವಿಚಾರಗಳನ್ನು ಹಂಚಿಕೊಳ್ಳಲು ಜಪಾನಿನ NTA ಯುವಜನರನ್ನು ಕೋರಿದೆ.

ಇದನ್ನೂ ಓದಿ-ಭಾರತದ ಅನಿಯಂತ್ರಿತ ಶಸ್ತ್ರಾಸ್ತ್ರ ಸಂಗ್ರಹ ಪ್ರಾದೇಶಿಕ ಶಾಂತಿ, ಸ್ಥಿರತೆಗೆ ಧಕ್ಕೆ ತರುತ್ತದೆ : ಪಾಕಿಸ್ತಾನ

ತೆರಿಗೆ ಏಜೆನ್ಸಿಯ ಈ ನಿರ್ಧಾರದಿಂದ ಸಿಡಿಮಿಡಿಗೊಂಡ ಆರೋಗ್ಯ ಸಚಿವಾಲ 
ಜಪಾನ್‌ನಲ್ಲಿ, NTA ಯ ಈ ಪಂತವು ಹಿಂದಕ್ಕೆ ಹೋಗುತ್ತಿರುವಂತೆ ತೋರುತ್ತಿದೆ. ವಿಶ್ವಾದ್ಯಂತ ಟೀಕೆಗಳ ಜೊತೆಗೆ, ಸರ್ಕಾರದ ಈ ನಿರ್ಧಾರವು ಜಪಾನ್‌ನಲ್ಲಿಯೂ ಟೀಕೆಗೆ ಒಳಗಾಗುತ್ತಿದೆ. ಈ ಯೋಜನೆಯಿಂದ ಸರ್ಕಾರ ಯುವಕರ ಕೆಂಗಣ್ಣಿಗೆ ಗುರಿಯಾಗಿದ್ದು, ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದಾರೆ. ಮದ್ಯ ಸೇವನೆಗೆ ಉತ್ತೇಜನ ನೀಡುವ ಮೂಲಕ ಯಾವುದೇ ದೇಶ ಪ್ರಗತಿ ಹೊಂದಲು ಸಾಧ್ಯವಿಲ್ಲ ಎನ್ನುತ್ತಾರೆ ಅಲ್ಲಿನ ಯುವಕರು. ಅಷ್ಟೇ ಅಲ್ಲ, ಆರ್ಥಿಕತೆಯಲ್ಲಿ ಆಲ್ಕೊಹಾಲ್ ಚಟದಿಂದ ಉತ್ಪಾದಕತೆಯ ಮೇಲೆ ದೀರ್ಘಾವಧಿಯ ಪರಿಣಾಮಗಳ ಬಗ್ಗೆ ಯುವಕರು ಸರ್ಕಾರವನ್ನು ಎಚ್ಚರಿಸುತ್ತಿದ್ದಾರೆ. ತೆರಿಗೆ ಏಜೆನ್ಸಿಯ ಈ ನಿರ್ಧಾರದಿಂದ ಜಪಾನಿನ ಆರೋಗ್ಯ ಸಚಿವಾಲಯವೂ ಕೂಡ ಸಿಡಿಮಿಡಿಗೊಂಡಿದೆ ಎಂದು ವರದಿಯಾಗಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News