Trending News: ಕೆಲವು ಪ್ರದೇಶಗಳಲ್ಲಿ ಕಠಿಣ ನಿಯಮಗಳಿರುವ ಕಾರಣ ನೀವು ಬೇಕಾಬಿಟ್ಟಿ ಬಟ್ಟೆ ಧರಿಸುವುದು ಸಾಧ್ಯವಿಲ್ಲ. ಆದರೆ ಬ್ರೆಜಿಲ್ ನಲ್ಲಿ ಓರ್ವ ಯುವತಿಯ ಜೊತೆಗೆ ನಡೆದ ಘಟನೆಯನ್ನು ಕೇಳಿದರೆ, ಅಂತಹ ಘಟನೆ ನಡೆಯುವುದು ತೀರಾ ವಿರಳ ಎಂದು ನೀವೂ ಹೇಳಬಹುದು. ಅಲ್ಲಿನ ಓರ್ವ 21 ವಯಸ್ಸಿನ ಇಂಫ್ಲೂಯೇನ್ಸರ್ ಕೆರೋಲೆ ಚಾವೇಸ್ ತನ್ನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ತನ್ನ ಜೊತೆಗೆ ನಡೆದ ಘಟನೆಯ ಕುರಿತು ಮಾಹಿತಿ ನೀಡಿದ್ದು, ತುಂಡುಡುಗೆ ಧರಿಸಿದ ಕಾರಣ ಅಲ್ಲಿನ ಒಂದು ಸೂಪರ್ ಮಾರ್ಕೆಟ್ ಆಕೆಯ ಮೇಲೆ ನಿಷೇಧ ವಿಧಿಸಿತ್ತು ಎಂದು ಹೇಳಿಕೊಂಡಿದ್ದಾಳೆ. ಸೂಪರ್ ಮಾರ್ಕೆಟ್ ಆಡಳಿತ ಆಕೆ ಕಾಣಿಸುತ್ತಾಳೆ ಆಕೆಯನ್ನು ಹೊಡೆದೋಡಿರುವ ಫರ್ಮಾನು ಹೊರಡಿಸಿತ್ತು ಎಂದು ಆಕೆ ಹೇಳಿದ್ದಾಳೆ.

COMMERCIAL BREAK
SCROLL TO CONTINUE READING

ಸಾಮಾಜಿಕ ಮಾಧ್ಯಮ ವೇದಿಕೆಯ ಮೇಲೆ ಕಥೆ ಬರೆದುಕೊಂಡ ಕೆರೋಲೆ ಚಾವೇಸ್
ಅಡಲ್ಟ್ ಸೈಟ್ ಆಗೀರುವ ಒನ್ಲಿಫ್ಯಾನ್ಸ್ ಮೇಲೆ ಫೋಟೋ-ವಿಡಿಯೋಗಳನ್ನು ಹಂಚಿಕೊಂಡು ಹಣ ಗಳಿಕೆ ಮಾಡುವ ಬ್ರೆಜಿಲ್ ನ ಈ 21 ವಯಸ್ಸಿನ ಇಂಫ್ಲೂಯೇನ್ಸರ್ ಕೆರೋಲೆ ಚಾವೇಸ್, ತುಂಡುಡುಗೆ ಧರಿಸಿ ಅಗತ್ಯ ವಸ್ತುಗಳ ಖರೀದಿಗೆ ಸೂಪರ್ ಮಾರ್ಕೆಟ್ ಗೆ ಹೋಗುತ್ತಿದ್ದಳು. ಆದರೆ, ಆಕೆಯ ತುಂಡುಡುಗೆ ಧರಿಸುವಿಕೆ ಸೂಪರ್ ಮಾರ್ಕೆಟ್ ಸಿಬ್ಬಂದಿ ಹಾಗೂ ಮಾಲೀಕರಿಗೆ ಅಷ್ಟೊಂದು ಹಿಡಿಸಲಿಲ್ಲ ಮತ್ತು ಅವರು ಆಕೆಯ ಮೇಲೆ ನಿಷೇಧ ವಿಧಿಸಿದರು. 

ಕೆರೋಲ್ ಚಾವೇಸ್ ಕುರಿತು ಮಾಲ್ ಮಾಲೀಕರು ಹೇಳಿದ್ದೇನು?
ಈ ಕುರಿತು ಸ್ಪಷ್ಟನೆ ನೀಡಿರುವ ಮಾಲ್ ಮಾಲೀಕರು, ಕೆರೋಲ್ ಚಾವೇಸ್ ಧರಿಸುವ ಬಟ್ಟೆಗಳು ಎಷ್ಟೊಂದು ಚಿಕ್ಕದಾಗಿರುತ್ತಿದ್ದವು ಎಂದರೆ, ಅದರಿಂದ ಮಾಲ್ ಗೆ ಬರುವ ಇತರ ಗ್ರಾಹಕರಿಗೆ ಇಬ್ಬಂದಿಯಾಗುತ್ತಿತ್ತು ಎಂದಿದ್ದಾರೆ. ಹೀಗಿರುವಾಗ ಅನೇಕ ಗ್ರಾಹಕರು ತಲೆ ತಗ್ಗಿಸಿ ಶಾಪಿಂಗ್ ಮಾಡುವ ಪರಿಸ್ಥಿತಿ ಎದುರಾಗಿತ್ತು. ಈ ಕಾರಣದಿಂದ ಶಾಪಿಂಗ್ ಮಾಲ್ ಆಕೆಯನ್ನು ಮಾಲ್ಗೆ ಬರದಂತೆ ತಡೆಯುವ ನಿರ್ಣಯ ಕೈಗೊಂಡಿತು ಎಂದು ಅವರು ಹೇಳಿದ್ದಾರೆ. ಓರ್ವ ಯುವತಿಯ ಕಾರಣ ಮಾಲ್ ಗೆ ಬರುವ ಇತರೆ ಗ್ರಾಹಕರಿಗೆ ತೊಂದರೆಯಾವುದು ಅವರಿಗೆ ಇಷ್ಟವಿರಲಿಲ್ಲ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ-Dangerous Dates 2023: ವರ್ಷ 2023ರ ಈ 6 ದಿನಾಂಕಗಳು ಮನುಷ್ಯರ ಪಾಲಿಗೆ ಖತರ್ನಾಕ್ ಸಾಬೀತಾಗಲಿವೆ, ಬೆಚ್ಚಿಬೀಳಿಸುವ ಭವಿಷ್ಯವಾಣಿ!

ಅಷ್ಟಕ್ಕೂ ಕೆರೋಲ್ ಧರಿಸಿದ ದಿರಿಸಾದರು ಎಂತಹದಿತ್ತು?
ಇನ್ಸ್ಟಾಗ್ರಾಮ್ ನಲ್ಲಿ ತನ್ನ ಕಥೆ ಹೇಳಿಕೊಂಡ ಕೆರೋಲ್ ಚಾವೇಸ್, ಶಾಪಿಂಗ್ ಮಾಲ್ ನಲ್ಲಿನ ತನ್ನ ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾಳೆ. ಈ ಫೋಟೋಗಳಲ್ಲಿ ಕೆರೋಲ್ ಒಂದು ಡೇನಿಮ್ ಶಾರ್ಟ್ಸ್, ಒಂದು ಬಿಳಿಬಣ್ಣದ ಕ್ರಾಪ್ ಟಾಪ್ ಹಾಗೂ ಹವಾಯಿ ಚಪ್ಪಲ್ ಧರಿಸಿದ್ದಾಳೆ. ಕೈಯಲ್ಲಿ ಟ್ರಾಲಿ ಹಿಡಿದುಕೊಂಡು ಆಕೆ ಶಾಪಿಂಗ್ ಮಾಡುತ್ತಿದ್ದಾಳೆ. ಈ ಫೋಟೋ ಹಂಚಿಕೊಂಡು ಬರೆದುಕೊಂಡಿರುವ ಕೆರೋಲೆ ' ಇದೀಗ ತಾನೇ ನಾನು ಶಾಪಿಂಗ್ ಮುಗಿಸಿಕೊಂಡು ಶಾಪಿಂಗ್ ಮಾಲ್ ನಿಂದ ತಾನು ಬಂದಿರುವೆ ಮತ್ತು ಅಲ್ಲಿ ನನಗೆ ತುಂಡು ಬಟ್ಟೆ ಧರಿಸಿದ್ದಕ್ಕಾಗಿ ಬೆದರಿಸಲಾಗಿದೆ. ಕೆಲವರು ನನ್ನನ್ನು ದುರುಗುಟ್ಟಿಕೊಂಡು ನೋಡಿದರೆ, ಉಳಿದವರು ಆಲೋಚನೆ ಮಾಡಿದರು' ಎಂದು ಹೇಳಿಕೊಂಡಿದ್ದಾಳೆ.


ಇದನ್ನೂ ಓದಿ-Sperm Donation: 550 ಮಕ್ಕಳಿಗೆ ಈತ ತಂದೆ! ಹಲವು ಬಾರಿ ಸ್ಪರ್ಮ್ ಡೊನೇಟ್ ಮಾಡಿದ ಈತನಿಗೆ ಈಗ ಕೋರ್ಟ್ ಹೇಳಿದ್ದೇನು ಗೊತ್ತಾ?

ಕೆರೋಲ್ ಹಂಚಿಕೊಂಡಿರುವ ಈ ಕಥೆ ಹಾಗೂ ಫೋಟೋ ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ನೀವು ಈ ರೀತಿ ಬಟ್ಟೆ ಧರಿಸಿ ಹೋಗಬಾರದಿತ್ತು ಎಂದು ಸಲಹೆಗಳನ್ನು ನೀಡಿದರೆ, ಉಳಿದವರು ನೀವು ನಿಮ್ಮ ಲೈಫ್ ನಲ್ಲಿ ಹೇಗೆ ಇದ್ದರೂ, ಪಬ್ಲಿಕ್ ಪ್ಲೇಸ್ ನಲ್ಲಿ ಈ ರೀತಿಯ ಬಟ್ಟೆಯನ್ನು ಧರಿಸಿ ನೀವು ಹೋಗಬಾರದು ಎಂದು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.