ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸಿದ ಕೆನಡಾದ ಸಿಖ್ ಕಾರ್ಯಕರ್ತರು: ಭಾರತದಲ್ಲಿ ವ್ಯಕ್ತವಾದ ಆಕ್ರೋಶ
ಕೆನಡಾದ ಒಂಟಾರಿಯೋದ ಬ್ರಾಂಪ್ಟನ್‌ನಲ್ಲಿ ನಡೆದ ಪೆರೇಡ್ ಒಂದರಲ್ಲಿ ಸಿಖ್ ಕಾರ್ಯಕರ್ತರು 1984ರಲ್ಲಿ ನಡೆದ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸುತ್ತಿದ್ದರು.ಭಾರತದ ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ಕೆನಡಾ ಸರ್ಕಾರ ಇಂತಹ ಟ್ಯಾಬ್ಲೋವನ್ನು ಪೆರೇಡ್‌ನಲ್ಲಿ ನಡೆಸಲು ಅನುಮತಿ ನೀಡಿದ್ದಕ್ಕಾಗಿ ತೀವ್ರವಾಗಿ ಖಂಡಿಸಿದ್ದಾರೆ. ಭಾರತದಲ್ಲಿನ ಕೆನಡಾದ ರಾಯಭಾರಿಯೂ ಈ ಘಟನೆಗೆ ಅಸಮಾಧಾನ ವ್ಯಕ್ತಪಡಿಸಿದರು.
ಗುರುವಾರ, ಭಾರತದ ವಿದೇಶಾಂಗ ಸಚಿವರು ಕೆನಡಾ ಸರ್ಕಾರ ಪೆರೇಡ್‌ನಲ್ಲಿ 1984ರಲ್ಲಿ ತನ್ನ ಅಂಗರಕ್ಷಕರಿಂದ ಕೊಲೆಯಾದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಕೇತಿಸುವ ಟ್ಯಾಬ್ಲೋಗೆ ಅನುಮತಿ ನೀಡಿದ್ದನ್ನು ವಿರೋಧಿಸಿದರು. ಇದನ್ನು ಸಿಖ್ ಪ್ರತ್ಯೇಕತಾವಾದಿಗಳಿಂದ ನಡೆದ ಹಿಂಸೆಯ ವೈಭವೀಕರಣ ಎಂಬಂತೆ ಬಿಂಬಿಸಲಾಯಿತು.
ವಿದೇಶಾಂಗ ಸಚಿವರಾದ ಎಸ್ ಜೈಶಂಕರ್ ಅವರು ನವದೆಹಲಿಯಲ್ಲಿ ಮಾಧ್ಯಮದವರೊಡನೆ ಮಾತನಾಡುತ್ತಾ, ಈ ಘಟನೆ ಕೆನಡಾದಲ್ಲಿ ಪ್ರತ್ಯೇಕತಾವಾದಿಗಳಿಗೆ, ಉಗ್ರವಾದಿಗಳಿಗೆ, ಮತ್ತು ಹಿಂಸಾಚಾರಕ್ಕೆ ಪ್ರಚಾರ ನೀಡಿದಂತಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಘಟನೆ ಕೆನಡಾಗೆ ಮತ್ತು ದ್ವಿಪಕ್ಷೀಯ ಸಂಬಂಧಕ್ಕೆ ಉತ್ತಮವಲ್ಲ ಎಂದು ಅಭಿಪ್ರಾಯ ಪಟ್ಟರು.
ಭಾರತದಲ್ಲಿನ ಕೆನಡಾದ ರಾಯಭಾರಿ ಸಿಖ್ ಪ್ರತಿನಿಧಿಗಳು ಒಂಟಾರಿಯೋದ ಬ್ರಾಂಪ್ಟನ್‌ನಲ್ಲಿ ನಡೆಸಿದ ಮೆರವಣಿಗೆಯನ್ನು ಅತ್ಯಂತ ಕಠಿಣವಾಗಿ ಖಂಡಿಸಿದರು. ಈ ಮೆರವಣಿಗೆಯ ಸಂದರ್ಭದಲ್ಲಿ, ಇಂಧಿರಾ ಗಾಂಧಿಯವರ ಬಿಳಿ ಬಣ್ಣದ, ರಕ್ತದ ಕಲೆಗಳನ್ನು ಹೊಂದಿರುವ ಸೀರೆ ಉಟ್ಟಿರುವ ಪ್ರತಿಕೃತಿಯನ್ನು ನಿರ್ಮಿಸಿ, ಅದರ ಮುಂದೆ ಇಬ್ಬರು ಟರ್ಬನ್ ಹಾಕಿರುವ ಬಂದೂಕುಧಾರಿಗಳು ನಿಂತಿರುವಂತೆ ಚಿತ್ರಸಲಾಗಿತ್ತು. ಇಂದಿರಾ ಗಾಂಧಿಯವರು ಭಯದಿಂದ ಕೈ ಮೇಲೆತ್ತಿರುವಂತೆ ತೋರಿಸಲಾಗಿತ್ತು. ಆ ದೃಶ್ಯದ ಹಿಂದೆ "ರಿವೆಂಜ್" ಎಂದು ಬರೆಯಲಾಗಿತ್ತು.
ಭಾರತದಲ್ಲಿನ ಕೆನಡಾದ ರಾಯಭಾರಿ ಕ್ಯಾಮರಾನ್ ಮ್ಯಾಕ್‌ಕೇ ಅವರು ಕೆನಡಾದಲ್ಲಿ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯನ್ನು ಸಂಭ್ರಮಿಸಿದ್ದರ ಕುರಿತು ಟ್ವಿಟರ್ ಮೂಲಕ ಆಘಾತ ಮತ್ತು ಅಪನಂಬಿಕೆ ವ್ಯಕ್ತಪಡಿಸಿದರು.
"ನಾನು ಕೆನಡಾದಲ್ಲಿ ಯಾವುದೇ ರೀತಿಯ ದ್ವೇಷ ಹಬ್ಬಿಸುವ ಮತ್ತು ಹಿಂಸೆಯನ್ನು ಪ್ರಚೋದಿಸುವ ವರ್ತನೆಗಳನ್ನು ಖಂಡಿಸುತ್ತೇನೆ. ಇಂತಹ ಘಟನೆಗಳನ್ನು ಒಪ್ಪಲು ಸಾಧ್ಯವಿಲ್ಲ" ಎಂದಿದ್ದಾರೆ.
ಪ್ರತ್ಯೇಕ ಖಲಿಸ್ತಾನ ಎಂಬ ಸ್ವತಂತ್ರ ದೇಶಕ್ಕಾಗಿ ಹೋರಾಟ ನಡೆಸುತ್ತಿದ್ದ ಸಿಖ್ ಪ್ರತ್ಯೇಕತಾವಾದಿ ಹೋರಾಟಗಾರರನ್ನು ಹೊರಹಾಕಲು ಸಿಖ್ಖರ ಪರಮ ಪವಿತ್ರವಾದ ಸ್ವರ್ಣ ಮಂದಿರದ ಮೇಲೆ ನಡೆಸಿದ ಸೇನಾ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಇಂದಿರಾ ಗಾಂಧಿಯವರನ್ನು ಅವರ ಅಂಗರಕ್ಷಕರೇ 1984ರಲ್ಲಿ ಹತ್ಯೆ ಮಾಡಿದ್ದರು.
ದೇವಾಲಯದ ಅಪವಿತ್ರಗೊಳಿಸುವಿಕೆ ಜಗತ್ತಿನಾದ್ಯಂತ ಇರುವ ಸಿಖ್ಖರನ್ನು ಆಕ್ರೋಶಗೊಳಿಸಿತು. ಆ ದಾಳಿಯಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯ ಅಂದಾಜು ಸಾಕಷ್ಟು ವಿಭಿನ್ನವಾಗಿದ್ದು, ಭಾರತ ಸರ್ಕಾರ ಘಟನೆಯಲ್ಲಿ ಕೆಲವು ನೂರು ಜನರು ಸಾವಿಗೀಡಾಗಿದ್ದಾರೆ ಎಂದಿದ್ದರೆ, ಸಿಖ್ ಸಂಘಟನೆಗಳು ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದಿವೆ.
ಪಂಜಾಬ್ ಹೊರತುಪಡಿಸಿದರೆ, ಭಾರತದ ಹೊರಗೆ ಕೆನಡಾದಲ್ಲಿ ಸಿಖ್ ಸಮುದಾಯ ಅತಿಹೆಚ್ಚು ಜನಸಂಖ್ಯೆ ಹೊಂದಿದೆ
ಕಳೆದ ಕೆಲ ತಿಂಗಳುಗಳಿಂದ, ಭಾರತ ಕೆನಡಾದ ರಾಯಭಾರಿಯ ಬಳಿ ಕೆನಡಾದಲ್ಲಿನ ಖಲಿಸ್ತಾನಿ ಪರ ಚಳುವಳಿಗಾರರಿಂದ ಭಾರತೀಯ ರಾಯಭಾರ ಕಚೇರಿಗಳ ಮೇಲೆ ದಾಳಿ ನಡೆಯುವ ಕುರಿತು ತನ್ನ ಆತಂಕ ವ್ಯಕ್ತಪಡಿಸಿತ್ತು.
ಭಾರತ ಮತ್ತು ಕೆನಡಾ ನಡುವಿನ ವ್ಯವಹಾರ ಸಂಬಂಧವನ್ನು ಭಾರತೀಯ ದೃಷ್ಟಿಯಿಂದ ನೋಡುವುದಾದರೆ, 100 ಬಿಲಿಯನ್ ಡಾಲರ್ ಆಗಿದೆ. ಇದರಲ್ಲಿ 70 ಬಿಲಿಯನ್ ಡಾಲರ್ ಕೆನಡಾದ ಹೂಡಿಕೆಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.