ಬೀಜಿಂಗ್: ಪಾಕಿಸ್ತಾನಕ್ಕೆ ಅಮೇರಿಕಾ ನೀಡುತ್ತಿರುವ ಹಣಕಾಸು ಸಹಾಯವು ಭಯೋತ್ಪಾದನೆ ಹರಿದು ಹೋಗುತ್ತದೆ ಎಂದು ಆರೋಪಿಸಿದ್ದ  ಅಧ್ಯಕ್ಷ ಟ್ರಂಪ್ ಹೇಳಿಕೆಯನ್ನು ಚೀನಾ ತಿರಸ್ಕರಿಸಿದೆ.ಆ ಮೂಲಕ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ.
 
ಈ ಕುರಿತಾಗಿ ಪ್ರತಿಕ್ರಯಿಸಿರುವ  ಚೀನಾ ಪಾಕಿಸ್ತಾನವು  ಭಯೋತ್ಪಾದನೆ ವಿರುದ್ಧದ ಹೋರಾಟಕ್ಕಾಗಿ ಹಲವು ಪ್ರಯತ್ನಗಳನ್ನು ಮಾಡಿದೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ತ್ಯಾಗ ಮಾಡಿದೆ. ಅಲ್ಲದೆ  ಜಾಗತಿಕ ಭಯೋತ್ಪಾದನೆಯ ನಿಯಂತ್ರಣದಲ್ಲಿ ಪಾಕ್ ಮಹತ್ತರವಾದ  ಕೊಡುಗೆಯನ್ನು ನೀಡಿದೆ ಎಂದು  ಚೀನಾದ  ಅಂತಾರಾಷ್ಟ್ರೀಯ ವಿದೇಶಾಂಗ ಇಲಾಖೆಯ ವಕ್ತಾರ ಗೆಂಗ್ ಶುಂಗ್ ಹೇಳಿದ್ದಾರೆ. 



COMMERCIAL BREAK
SCROLL TO CONTINUE READING

ಚೀನಾ ಮತ್ತು ಪಾಕಿಸ್ತಾನ ಎಲ್ಲ ರೀತಿಯಲ್ಲೂ ಸಹ ಪಾಲುದಾರರಾಗಿದ್ದು,ಆದ್ದರಿಂದ ಪರಸ್ಪರ  ಎಲ್ಲ ಸರ್ವತೋಮುಖ ಸಹಕಾರವನ್ನು ಉತ್ತೇಜಿಸಲು ನಾವು ಸಿದ್ಧರಾಗಿರುವೆವು ಎಂದು ತಿಳಿಸಿದ್ದಾರೆ.



ಮಂಗಳವಾರದಂದು  ಟ್ರಂಪ್ ರವರು ಪಾಕಿಸ್ತಾನಕ್ಕೆ ತನ್ನ ಹಣಕಾಸಿನ ಸಹಾಯದ ಕುರಿತು ಮಾತನಾಡುತ್ತಾ  ಕಳೆದ 15 ವರ್ಷಗಳಲ್ಲಿ ಅಮೆರಿಕಾವು ಪಾಕಿಸ್ತಾನಕ್ಕೆ 33 ಬಿಲಿಯನ್ ಡಾಲರ್ ಗಳಷ್ಟು ಧನಸಹಾಯವನ್ನು ನೀಡಿದೆ. ಆದರೆ ನಮಗೆ ಪ್ರತಿಯಾಗಿ ಕೇವಲ ಸುಳ್ಳನ್ನು ನೀಡಿದ್ದಾರೆ ಎಂದು ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಚೀನಾ ಇದನ್ನು ಸಾರಾಸಗಟಾಗಿ ತಳ್ಳಿಹಾಕಿ ಪಾಕಿಸ್ತಾನದ ಬೆಂಬಲಕ್ಕೆ ನಿಂತಿದೆ.