ಪಾಕಿಸ್ತಾನದೊಡನೆ ಹೆಚ್ಚುತ್ತಿರುವ ಚೀನಾದ ನೌಕಾಬಂಧ: ಯಾವಾಗ ಭಾರತ ಇದಕ್ಕೆ ಪ್ರತಿಕ್ರಿಯಿಸಲಿದೆ?
China increasing naval engagement with Pakistan: ವಿಶ್ಲೇಷಕರು ಪ್ರಸ್ತುತ ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಇನ್ನಷ್ಟು ಸಹಕಾರ ಹೊಂದಿ, ಆ ಮೂಲಕ ಹಿಂದೂ ಮಹಾಸಾಗರ ಪ್ರದೇಶದಲ್ಲಿ ತನ್ನ ಉಪಸ್ಥಿತಿಯನ್ನು ಇನ್ನಷ್ಟು ವಿಸ್ತರಿಸಬೇಕೆಂದು ಬಯಸುತ್ತಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಎರಡೂ ರಾಷ್ಟ್ರಗಳು ಭಾರತವನ್ನು ಹತೋಟಿಯಲ್ಲಿಡುವ ಬಯಕೆ ಹೊಂದಿವೆ.
China increasing naval engagement with Pakistan: ಚೀನಾ ಪಾಕಿಸ್ತಾನಿ ಸೇನೆಗೆ ಆಯುಧಗಳನ್ನು ಮಾರಾಟ ಮಾಡುವ ಮೂಲಕ, ಸೈನಿಕರಿಗೆ ತರಬೇತಿ ಒದಗಿಸುವ ಮೂಲಕ ಸಹಕಾರ ನೀಡಬೇಕೆಂದು ಉದ್ದೇಶಿಸಿದ್ದು, ಈ ಕ್ರಮ ಭಾರತವನ್ನು ಕೋಪಗೊಳ್ಳುವಂತೆ ಮಾಡುವ ಸಾಧ್ಯತೆಗಳಿವೆ. ಭಾರತಕ್ಕೆ ತನ್ನ ವಿರೋಧಿ ರಾಷ್ಟ್ರವಾದ ಪಾಕಿಸ್ತಾನಕ್ಕೆ ಮಿಲಿಟರಿ ಸಹಾಯ ಒದಗಿಸುವುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ.
ಚೀನಾದ ರಕ್ಷಣಾ ಸಚಿವ ಲಿ ಶಾಂಗ್‌ಫು ಅವರು ಪಾಕಿಸ್ತಾನದ ನೌಕಾಪಡೆಗಳ ಮುಖ್ಯಸ್ಥರಿಗೆ ನಮ್ಮ ಎರಡು ರಾಷ್ಟ್ರಗಳ ನೌಕಾಪಡೆಗಳು ತಮ್ಮ ಪರಸ್ಪರ ಸಹಕಾರವನ್ನು ಇನ್ನಷ್ಟು ವಲಯಗಳಿಗೆ ವಿಸ್ತರಿಸಬೇಕು, ಆ ಮೂಲಕ ತಮ್ಮ ಪ್ರದೇಶಗಳನ್ನು ಸುರಕ್ಷಿತವಾಗಿಡಬೇಕು ಎಂದು ಕರೆ ನೀಡಿದ್ದರು.
ಲಿ ಶಾಂಗ್‌ಫು ಅವರು ಪಾಕಿಸ್ತಾನಿ ನೌಕಾಪಡೆ ಮುಖ್ಯಸ್ಥ, ಅಡ್ಮಿರಲ್ ಮುಹಮ್ಮದ್ ಅಮ್ಜದ್ ಖಾನ್ ನಿಯಾಜಿ ಅವರನ್ನು ಸೋಮವಾರ ಬೀಜಿಂಗ್‌ನಲ್ಲಿ ಭೇಟಿಯಾಗಿದ್ದರು. ತಮ್ಮ ಎರಡು ರಾಷ್ಟ್ರಗಳ ಸಂಬಂಧಕ್ಕೆ ಅವುಗಳ ಮಿಲಿಟರಿ ಸಂಬಂಧವೂ ಅತ್ಯಂತ ಮುಖ್ಯವಾದದ್ದು ಎಂದು ಅವರು ಅಭಿಪ್ರಾಯ ಪಟ್ಟಿದ್ದರು.
ಲಿ ಶಾಂಗ್‌ಫು ಅವರು ನಿಯಾಜಿಯವರೊಡನೆ ಸಂವಹನ ನಡೆಸುತ್ತಾ, ಎರಡೂ ರಾಷ್ಟ್ರಗಳು ತಮ್ಮ ಪ್ರದೇಶಗಳ ರಕ್ಷಣೆಗೆ ಜೊತೆಯಾಗಿ ಕಾರ್ಯಾಚರಿಸಬೇಕು ಎಂದಿದ್ದು, ಸಹಕಾರ ಮತ್ತು ಸಹಭಾಗಿತ್ವಗಳನ್ನು ಹೊಸ ಕ್ಷೇತ್ರಗಳಿಗೂ ವಿಸ್ತರಿಸಬೇಕೆಂದು ಅಭಿಪ್ರಾಯ ಪಟ್ಟಿದ್ದರು.
ಇದನ್ನೂ ಓದಿ: ಇಮ್ರಾನ್ ಖಾನ್‍ನಿಂದ 6 ಸಾವಿರ ಕೋಟಿ ಹಗರಣ- ಶಹಬಾಜ್ ಷರೀಫ್ ವಾಗ್ದಾಳಿ
ತಮ್ಮ ಪ್ರದೇಶಗಳನ್ನು ಸುರಕ್ಷಿತವಾಗಿಡಲು ಮತ್ತು ಸ್ಥಿರವಾಗಿಡಲು ಪಾಕಿಸ್ತಾನಿ ನೌಕಾಪಡೆ ಚೀನಾದೊಡನೆ ಕಾರ್ಯಾಚರಿಸಲು ಸಿದ್ಧವಾಗಿದೆ ಎಂದು ನಿಯಾಜಿ ಪ್ರತಿಕ್ರಿಯಿಸಿದ್ದಾರೆ.
ಚೈನೀಸ್ ಸೆಂಟ್ರಲ್ ಮಿಲಿಟರಿ ಕಮಿಷನ್ನಿನ ಉಪಾಧ್ಯಕ್ಷರು ಹಾಗೂ ಚೀನಾದ ಅತ್ಯುನ್ನತ ಪದವಿಯ ಸೇನಾ ನಾಯಕ ಜಾಂಗ್ ಯೂಕ್ಸಿಯಾ ಅವರು ಕೆಲವು ದಿನಗಳ ಹಿಂದಷ್ಟೇ ಚೀನಾ ಪಾಕಿಸ್ತಾನಿ ಸೇನೆಯೊಡನೆ ಇನ್ನಷ್ಟು ಸಾಮೀಪ್ಯ ಹೊಂದಿ ಕಾರ್ಯಾಚರಿಸಲು ಸಿದ್ಧವಿದೆ ಎಂದಿದ್ದರು.
ಅಮೆರಿಕಾದ ಥಿಂಕ್ ಟ್ಯಾಂಕ್ ಸಂಸ್ಥೆ ರ್ಯಾಂಡ್ ಕಾರ್ಪೋರೇಷನ್ ಹಿರಿಯ ತಜ್ಞರಾದ ತಿಮೋತಿ ಹೀಥ್ ಅವರು ಚೀನಾ ಮತ್ತು ಪಾಕಿಸ್ತಾನಗಳು ಒಂದಾಗಿ ಕೆಲಸ ಮಾಡಲು ಆರಂಭಿಕ ಹಂತವೆಂದರೆ ಆಯುಧ ವ್ಯಾಪಾರ ಎಂದಿದ್ದಾರೆ.
ಚೀನಾ ಹಿಂದೂ ಮಹಾಸಾಗರದಲ್ಲಿ ತನ್ನ ವ್ಯಾಪಾರ ಮಾರ್ಗಗಳನ್ನು ಸುರಕ್ಷಿತವಾಗಿಡಲು ಪಾಕಿಸ್ತಾನವನ್ನು ಮಹತ್ವದ ಸಹಯೋಗಿ ಎಂದು ಪರಿಗಣಿಸುತ್ತದೆ. ಆದ್ದರಿಂದ ಚೀನಾ ಪಾಕಿಸ್ತಾನಿ ಸೇನೆಗೆ ಆಯುಧಗಳನ್ನು ಮಾರಾಟ ಮಾಡಿ, ಆ ಸೇನೆಯನ್ನು ಆಧುನೀಕರಿಸಲು, ತರಬೇತಿ ನೀಡಲು, ವಿನಿಮಯ ನಡೆಸಲು ಅಪಾರ ಆಸಕ್ತಿ ಹೊಂದಿದೆ. ಇದಕ್ಕೆ ಪ್ರತಿಯಾಗಿ, ಪಾಕಿಸ್ತಾನ ತನ್ನ ನೌಕಾಪಡೆಯನ್ನು ಆಧುನೀಕರಿಸಿ, ಭಾರತವನ್ನು ಹೆದರಿಸಲು ಬಯಸುತ್ತದೆ ಎಂದು ಹೀಥ್ ಅಭಿಪ್ರಾಯ ಪಡುತ್ತಾರೆ.
"ಪಾಕಿಸ್ತಾನದೊಡನೆ ಸಹಕಾರ ಹೊಂದಿ, ಪಾಕಿಸ್ತಾನದ ನೌಕಾಪಡೆಯನ್ನು ಆಧುನೀಕರಿಸಲು ನೆರವಾಗುವುದರಿಂದ ಚೀನಾಗೂ ಹಿಂದೂ ಮಹಾಸಾಗರದಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಲು, ಗ್ವಾದರ್ (ಪಾಕಿಸ್ತಾನ) ನಂತಹ ಪ್ರಮುಖ ಬಂದರುಗಳಲ್ಲಿ ಪ್ರವೇಶ ಪಡೆಯಲು ಅನುಕೂಲವಾಗುತ್ತದೆ" ಎಂದು ಚೀನಾದ ವಿದೇಶಾಂಗ ಸಚಿವರು ತಿಳಿಸಿದ್ದಾರೆ. ಇಂತಹಾ ನೌಕಾಪಡೆಯ ಸಹಕಾರ ಒಪ್ಪಂದಗಳು ಭಾರತದ ಮೇಲೆ ಹೆಚ್ಚಿನ ನಿಗಾ ಇಡಲು ಪಾಕಿಸ್ತಾನ ಮತ್ತು ಚೀನಾಗೆ ನೆರವಾಗುತ್ತವೆ.
ಇದನ್ನೂ ಓದಿ: ಭಾರತೀಯ ಮಾಧ್ಯಮ ಹಾಗೂ ನ್ಯಾಯ ವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿದ ಮೆಹಬೂಬಾ ಮುಫ್ತಿ ಹೇಳಿದ್ದೇನು?
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಅಧಿಕಾರಕ್ಕಾಗಿ ಭಾರತ ಮತ್ತು ಚೀನಾಗಳು ಕಿತ್ತಾಟ ನಡೆಸಿವೆ. ಅದರೊಡನೆ ಎರಡೂ ರಾಷ್ಟ್ರಗಳು ಹಿಮಾಲಯದ ತಮ್ಮ ಗಡಿಯಲ್ಲೂ ಸೆಣಸಾಟ ಮುಂದುವರಿಸಿವೆ.
ಚೀನಾ ಮತ್ತು ಭಾರತಗಳು ದೀರ್ಘಕಾಲದಿಂದ ತಮ್ಮ ಸುದೀರ್ಘವಾದ 3,488 ಕಿಲೋಮೀಟರ್ (2,167 ಮೈಲಿ) ಗಡಿಯ ಕುರಿತು ಸಾಕಷ್ಟು ತಕರಾರುಗಳನ್ನು ಹೊಂದಿವೆ. ಈ ಗಡಿಯನ್ನು ಇಂದಿಗೂ ಸ್ಪಷ್ಟವಾಗಿ ಗುರುತಿಸಲಾಗಿಲ್ಲ. 2020ರಲ್ಲಿ ಗಡಿ ತಕರಾರುಗಳು ತೀರಾ ಹದಗೆಟ್ಟು, ಸೈನಿಕರು ಸಾವಿಗೀಡಾದರು. ಈಗಲೂ ಎರಡೂ ಪಡೆಗಳು ಸರಣಿ ಮಾತುಕತೆಗಳ ಮೂಲಕ ವಿವಾದಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿವೆ.
ಚೀನಾದ ಸಿಚುವಾನಿನ ಥಿಂಕ್ ಟ್ಯಾಂಕ್ ಚೆಂಗ್ದು ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಅಫೇರ್ಸ್ ಮುಖ್ಯಸ್ಥ ಲಾಂಗ್ ಕ್ಸಿಂಗ್‌ಚುನ್ ಅವರು ಚೀನಾ ಮತ್ತು ಪಾಕಿಸ್ತಾನಗಳ ಮಿಲಿಟರಿ ಸಹಕಾರ ಭಾರತದ ಮೇಲೆ ಯಾವುದೇ ನೇರ ಪರಿಣಾಮ ಬೀರದಿದ್ದರೂ, ನವದೆಹಲಿಯನ್ನು ತಳಮಳಗೊಳ್ಳುವಂತೆ ಮಾಡಬಹುದು ಎಂದಿದ್ದಾರೆ.
"ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಿದರೂ, ಬೀಜಿಂಗ್ ಯಾವ ಕಾರಣಕ್ಕೂ ಭಾರತ ಮತ್ತು ಪಾಕಿಸ್ತಾನಗಳ ಮಧ್ಯ ಮಿಲಿಟರಿ ಸಮರವನ್ನು ಬೆಂಬಲಿಸುವುದಿಲ್ಲ. ಚೀನಾ ಪಾಕಿಸ್ತಾನದ ನೌಕಾಪಡೆಯೊಡನೆ ಹೆಚ್ಚಿನ ನೌಕಾ ಸಹಕಾರ ಹೊಂದಿದರೂ, ಇದರಿಂದ ಚೀನಾ ಮತ್ತು ಭಾರತಗಳ ಗಡಿ ವಿವಾದಗಳ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಯಾಕೆಂದರೆ ಚೀನಾ ಪಾಕಿಸ್ತಾನಕ್ಕೆ ಸಾಗರದಲ್ಲಿ ಸಹಕಾರ ನೀಡಿದರೂ, ಭಾರತದೊಡನೆ ಗಡಿ ವಿವಾದಗಳು ನೆಲದಲ್ಲಿ ನಡೆಯುತ್ತವೆ" ಎಂದು ಲಾಂಗ್ ಅಭಿಪ್ರಾಯ ಪಡುತ್ತಾರೆ.
ಇದನ್ನೂ ಓದಿ: ಇಮ್ರಾನ್ ಖಾನ್ ಬಂಧಿಸದಂತೆ ನಿರ್ಬಂಧ ಹೇರಿದ ಇಸ್ಲಾಮಾಬಾದ್ ಹೈಕೋರ್ಟ್
ಆದರೆ ಭಾರತ ಯಾವುದೇ ರಾಷ್ಟ್ರ ಪಾಕಿಸ್ತಾನದೊಡನೆ ಮಿಲಿಟರಿ ಸಹಕಾರ ಹೊಂದುವುದನ್ನು ವಿರೋಧಿಸುತ್ತದೆ. ಭಾರತ ಮೊದಲಿನಿಂದಲೂ ಅಮೆರಿಕಾ ಅಥವಾ ರಷ್ಯಾ ಪಾಕಿಸ್ತಾನಕ್ಕೆ ಆಯುಧಗಳನ್ನು ಒದಗಿಸುವುದನ್ನು ಸತತವಾಗಿ ವಿರೋಧಿಸುತ್ತಾ ಬಂದಿದೆ. ಚೀನಾ ಪಾಕಿಸ್ತಾನದೊಡನೆ ನೌಕಾ ಸಹಕಾರ ವೃದ್ಧಿಸಿದ ಬಳಿಕ, ಭಾರತ ಇದಕ್ಕೆ ತನ್ನ ಅಸಮಾಧಾನ ಮತ್ತು ವಿರೋಧವನ್ನು ವ್ಯಕ್ತಪಡಿಸಬಹುದು ಎಂದೇ ನಿರೀಕ್ಷಿಸಿದೆ.
ಚೀನಾ ಪಾಕಿಸ್ತಾನದೊಡನೆ ದೀರ್ಘಕಾಲದಿಂದ ಉತ್ತಮ ಸಂಬಂಧ ಹೊಂದಿದೆ. ಪಾಕಿಸ್ತಾನ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯಲ್ಲೂ ಚೀನಾಗೆ ಸಹಯೋಗಿಯಾಗಿದೆ. ಕಳೆದ ವರ್ಷ ಬೀಜಿಂಗ್‌ನಲ್ಲಿ ನಡೆದ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪಾಕಿಸ್ತಾನಿ ಪ್ರಧಾನಿ ಮುಹಮ್ಮದ್ ಶಾಬಾಜ಼್ ಶರೀಫ್ ಅವರ ಬಳಿ ಚೀನಾ ಮತ್ತು ಪಾಕಿಸ್ತಾನಗಳು ಉತ್ತಮ ಸ್ನೇಹಿತರು, ಸಹಯೋಗಿಗಳು ಮತ್ತು ಸಹೋದರರು ಎಂದಿದ್ದರು. ಇತ್ತೀಚಿನ ವರ್ಷಗಳಲ್ಲಿ, ಸತತ ಜಾಗತಿಕ ಬದಲಾವಣೆಗಳು ಮತ್ತು ಅಸ್ಥಿರತೆಯ ಹೊರತಾಗಿಯೂ ಈ ಎರಡೂ ರಾಷ್ಟ್ರಗಳು ಪರಸ್ಪರ ಬೆಂಬಲ ನೀಡಿ, ತಮ್ಮ ಸ್ನೇಹವನ್ನು ಸಾಬೀತುಪಡಿಸಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.