ನವದೆಹಲಿ: ಪಾಕಿಸ್ತಾನದ ನೆಲದಲ್ಲಿ ಚೀನೀ ಸೈನಿಕರ ಉಪಸ್ಥಿತಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಪೂರಕವಾಗಿ  ಇಸ್ಲಾಮಾಬಾದ್ ಕೂಡಾ ರಾಜಸ್ಥಾನ ಹತ್ತಿರದಲ್ಲಿ ತನ್ನ ಗಡಿಯಲ್ಲಿ ಮಿಲಿಟರಿ ಮೂಲಭೂತಸೌಕರ್ಯವನ್ನು ಹೆಚ್ಚಿಸುವಲ್ಲಿ  ಬೀಜಿಂಗ್ ನೆರವನ್ನು ತೆಗೆದುಕೊಳ್ಳಲಾಗುತ್ತಿದೆ. ಇದರ ಭಾಗವಾಗಿ ಪಾಕಿಸ್ತಾನದಲ್ಲಿ ರಸ್ತೆ ಸಂಪರ್ಕ ಹಾಗೂ ವಾಯುನೆಲೆಗಳನ್ನು ಅಭಿವೃದ್ದಿ ಪಡಿಸುವಲ್ಲಿ ಚೀನಾದ ಪಾತ್ರ ಮಹತ್ವದ್ದಾಗಿದೆ.


COMMERCIAL BREAK
SCROLL TO CONTINUE READING

ಪಾಕಿಸ್ತಾನದ ಕೈರಪುರ್  ವಾಯುಪಡೆಯ ನೆಲೆಯಲ್ಲಿ ಕಳೆದ ಹಲವು ತಿಂಗಳುಗಳಿಂದ ಚೀನಾ ಸೈನ್ಯದ  ಉಪಸ್ಥಿತಿಯ ಮೂಲಕ ಇಲ್ಲಿನ ವಾಯುನೆಲೆಯ ವಿಸ್ತಾರ ಮತ್ತು ಆಧುನೀಕರಣಗಳ ಕಾಮಗಾರಿಯನ್ನು ಭಾರತದ ಗಡಿಗೆ ಹೊಂದಿಕೊಂಡಂತೆ ನಿರ್ಮಿಸಲಾಗುತ್ತಿದೆ. 


ಆದರೆ ಪಾಕಿಸ್ತಾನವು ಈ ಚೀನಾದ ಕಾರ್ಯಗಳನ್ನು ಸಮರ್ಥಿಸಿಕೊಳ್ಳುತ್ತಾ ಚೀನೀ ತೈಲ, ನೈಸರ್ಗಿಕ ಅನಿಲ ಮತ್ತು ಇತರ ಖನಿಜಗಳನ್ನು ಸುಲಭವಾಗಿ ಸಾಗಿಸಲು ಎಂದು ಹೇಳಿಕೊಂಡಿದೆ. ಖೈರ್ಪುರ್ ವಾಯುನೆಲೆಯು ಭಾರತದ ಗಡಿಯಿಂದ ಕೇವಲ 25 ಕಿಮೀ ದೂರದಲ್ಲಿರುವುದು ನಿಜಕ್ಕೂ ಭಾರತದ ಗಡಿ ಭದ್ರತೆಯ ನಿಟ್ಟಿನಲ್ಲಿ ನಿಜಕ್ಕೂ ದೊಡ್ಡ ಸವಾಲಾಗಿ ಪರಿಣಮಿಸಿದೆ.