ನವದೆಹಲಿ : ಗುರುವಾರ ಬೆಳಗ್ಗೆ ಚೀನಾದ ಚಾಂಗ್‌ಕಿಂಗ್‌ನಲ್ಲಿ ಟೇಕ್‌ಆಫ್ ಆಗುತ್ತಿದ್ದಂತೆಯೇ  ಟಿಬೆಟ್ ಏರ್‌ಲೈನ್ಸ್ ವಿಮಾನದಲ್ಲಿ  ಬೆಂಕಿ ಕಾಣಿಸಿಕೊಂಡಿದೆ. ಟೇಕ್ ಆಫ್ ಆಗುತ್ತಿದಂತೆಯೇ ರನ್‌ವೇಯಿಂದ ವಿಮಾನ ಪತನಗೊಂಡಿದೆ. ಘಟನೆ ಸಂಭವಿಸಿದಾಗ ವಿಮಾನ ಟಿಬೆಟ್‌ನ ನೈಂಗ್‌ಚಿಗೆ ಚಾಂಗ್‌ಕಿಂಗ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುತ್ತಿತ್ತು. ಈ ವಿಮಾನದಲ್ಲಿ 122 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ. 10 ವರ್ಷಗಳಷ್ಟು ಹಳೆಯದಾದ ಈ ವಿಮಾನ B-6426 ನೋಂದಣಿ ಕೋಡ್ ಅನ್ನು ಹೊಂದಿದೆ.


COMMERCIAL BREAK
SCROLL TO CONTINUE READING

ಏರ್‌ಲೈನ್ಸ್‌ನ ಹೇಳಿಕೆಯ ಪ್ರಕಾರ, ಎಲ್ಲಾ 113 ಪ್ರಯಾಣಿಕರು ಮತ್ತು 9 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಕೆಲವರಿಗೆ ಕೇವಲ ಸಣ್ಣ ಗಾಯಗಲಾಗಿವೆ ಎನ್ನಲಾಗಿದೆ. ಆದರೆ ಕೆಲವು ವರದಿಗಳ ಪ್ರಕಾರ 40 ಜನರನ್ನು  ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗಳಾಗಿರುವ 40 ಕ್ಕೂ ಹೆಚ್ಚು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚೀನಾ ಗ್ಲೋಬಲ್ ಟೆಲಿವಿಷನ್ ನೆಟ್‌ವರ್ಕ್ ವರದಿ ಮಾಡಿದೆ.


ಇದನ್ನೂ ಓದಿ : Viral Story: ಎಲ್ಲರ ಮುಂದೆಯೇ ಮದುವೆ ನಿಲ್ಲಿಸಿ ವಧು! ಕಾರಣ ಏನು ಗೊತ್ತಾ?


 ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗುತ್ತಿರುವ ವಿಡಿಯೋದಲ್ಲಿ ಟಿಬೆಟ್ ಏರ್‌ಲೈನ್ಸ್ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಕಾಣಬಹುದು. ಪ್ರಯಾಣಿಕರು ಮತ್ತು ಸಿಬ್ಬಂದಿ ವಿಮಾನದಿಂದ ಹೊ ರಬರುತ್ತಿರುವುದು ಕೂಡಾ ಇದರಲ್ಲಿ ಕಾಣಿಸುತ್ತದೆ. ಅಲ್ಲದೆ  ಭಾರೀ ಹೊಗೆ ಮತ್ತು ಬೆಂಕಿಯನ್ನು ಈ ವಿಡಿಯೋದಲ್ಲಿ ಕಾಣಬಹುದು.  ಸ್ಲೈಡ್ ಮೂಲಕ ಜನರು  ಕೆಳಗಿಳಿದು ಬರುತ್ತಿರುವುದನ್ನು ಇಲ್ಲಿ ಗಮನಿಸಬಹುದು. 


ಶ್ರೀಲಂಕಾದಲ್ಲಿ ಗುಂಡು ಹಾರಿಸಿಕೊಂಡು ಸಂಸದ ಆತ್ಮಹತ್ಯೆ: ಕಾರಣ ಏನು ಗೊತ್ತಾ?


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.