ಬಿಜಿಂಗ್: 59 ಚೀನಾಮೂಲದ ಆ್ಯಪ್‌ಗಳಿಗೆ ಭಾರತ ವಿಧಿಸಿರುವ ನಿಷೇಧದ ಬಗ್ಗೆ ಚೀನಾ ಪ್ರತಿಕ್ರಿಯಿಸಿದೆ. ಚೀನಾದ ವಿದೇಶಾಂಗ ಸಚಿವಾಲಯ ಮಂಗಳವಾರ ಹೇಳಿಕೆ ನೀಡಿ, ಭಾರತದ ನಿರ್ಧಾರ ಚಿಂತೆ ಹೆಚ್ಚಿಸಿದೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಳಗುತ್ತಿದೆ ಎಂದು ಹೇಳಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಝಾವೋ ಲಿಝಿಯಾನ್, "ಚೀನಾ ಸರ್ಕಾರ ಯಾವಾಗಲೂ ತನ್ನ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನುಗಳನ್ನು ಪಾಲಿಸುವಂತೆ ಹೇಳುತ್ತದೆ. ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವುದು ಭಾರತ ಸರ್ಕಾರದ ಜವಾಬ್ದಾರಿಯಾಗಿದೆ. ಈ ಮಾದರಿ ಭಾರತೀಯರ ಹಿತದೃಷ್ಟಿಯಿಂದಲೂ ಸರಿ ಅಲ್ಲ" ಎಂದು ಹೇಳಿದ್ದಾರೆ.


ಚೀನಾದಲ್ಲಿ ಕೋಲಾಹಲ ಸೃಷ್ಟಿಯಾಗಿದೆ
59 ಚೀನೀ ಆ್ಯಪ್‌ಗಳನ್ನು ಭಾರತ ಸರ್ಕಾರ ನಿಷೇಧಿಸಿರುವುದರಿಂದ ಚೀನಾದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಚೀನಾ ಮೂಲದ Weibo ಸಾಮಾಜಿಕ ಮಾಧ್ಯಮದ ಮೇಲೆ ಭಾರತ ವಿಧಿಸಿರುವ ಬ್ಯಾನ್ ಹೊಸ ಟ್ರೆಂಡ್ ಸೃಷ್ಟಿಸಿದೆ  #Indiabans59Chineseapps ಹೆಸರಿನಿಂದ ರಚಿಸಲಾಗಿರುವ ಹ್ಯಾಶ್ ಟ್ಯಾಗ್ ನಿನ್ನೆಯಿಂದಲೇ Weibo ಮೇಲೆ ತನ್ನ ಟ್ರೆಂಡ್ ಆರಂಭಿಸಿದೆ. ಭಾರತ ಕೈಗೊಂಡಿರುವ ನಿರ್ಣಯದಿಂದ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ. ಭಾರತ ಕೈಗೊಂಡ ಈ ನಿರ್ಧಾರದಿಂದ ಚೀನಾದಲ್ಲಿ ನಿರುದ್ಯೋಗ ಸೃಷ್ಟಿಯಾಗುವುದರಿಂದ ಅಲ್ಲಿನ ಜನರು ಇದೀಗ ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಕ್ಯಾನ್ಸರ್ ಗೆ ಸಂಬಂಧಿಸಿದ ಹಲವು ಔಷಧಿ ಗಳನ್ನು ಚೀನಾ ಭಾರತದಿಂದ ಆಮದು ಮಾಡಿಕೊಳ್ಳುತ್ತದೆ. ಈ ಔಷಧಿಗಳನ್ನು ಭಾರತ ತುಂಬಾ ಕಡಿಮೆ ಬೆಲೆಯಲ್ಲಿ ರಫ್ತು ಮಾಡುತ್ತದೆ. ಒಂದು ವೇಳೆ ಭಾರತ ಈ ಔಷಧಿಗಳ ರಫ್ತಿನ ಮೇಲೂ ಕೂಡ ನಿಷೇಧ ವಿಧಿಸಿದರೆ, ಅಲ್ಲಿನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಿದ್ದಾರೆ.


ಭಾರತ ಸರ್ಕಾರದ ಆದೇಶದಿಂದ ಚೀನಾ ಆಪ್ ಗಳ ಮೇಲೆ ತೀವ್ರಗೊಂಡ ಕ್ರಮ
ಭಾರತ ಸರ್ಕಾರದ ಆದೇಶದ ಬಳಿಕೆ, ಚೀನಾ ಆ್ಯಪ್‌ಗಳ ಮೇಲೆ ಕ್ರಮ ತೀವ್ರಗೊಂಡಿದೆ. ಆಪಲ್ ಆಪ್ ಹಾಗೂ ಗೂಗಲ್ ಪ್ಲೇಸ್ಟೋರ್‌ನಿಂದ ಟಿಕ್‌ಟಾಕ್ ಅನ್ನು ತೆಗೆದುಹಾಕಲಾಗಿದೆ. ಈ ಅಪ್ಲಿಕೇಶನ್‌ಗಳಿಗೆ ನೀಡಲಾಗುವ ಸೇವೆಯನ್ನು ತಕ್ಷಣದಿಂದಲೇ ನಿಲ್ಲಿಸುವಂತೆ ಸರ್ಕಾರ ಈ ಕಂಪನಿಗಳಿಗೆ ತಿಳಿಸಿತ್ತು.


ವಿಶೇಷವೆಂದರೆ, ಭಾರತ ಸರ್ಕಾರ ನಿನ್ನೆ ಐತಿಹಾಸಿಕ ಕ್ರಮಕೈಗೊಂಡು, ಟಿಕ್ ಟಾಕ್, ಯುಸಿ ಬ್ರೌಸರ್ ಸೇರಿದಂತೆ ಚೀನಾದಿಂದ 59 ಆ್ಯಪ್‌ಗಳನ್ನು ನಿಷೇಧಿಸಿದೆ. ಚೀನಾದೊಂದಿಗಿನ ಗಡಿ ವಿವಾದದ ಸುಮಾರು ಎರಡು ತಿಂಗಳ ನಂತರ ಭಾರತ ಈ ಕಠಿಣ ಕ್ರಮವನ್ನು ಕೈಗೊಂಡಿದೆ. ಚೀನಾದ ಮೊಬೈಲ್ ಆ್ಯಪ್ ಗಳನ್ನು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ದೊಡ್ಡ ಬೆದರಿಕೆ ಎಂದು ಹೇಳಿರುವ ಭಾರತ ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಂಡಿತು.