ಬೀಜಿಂಗ್: ಕೊರೊನಾ ಮಹಾಮಾರಿಯಿಂದ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಚೀನಾ(China) ಇದೀಗ ಹೊಸ ಸಮಸ್ಯೆಯೊಂದರಲ್ಲಿ ಸಿಲುಕಿಕೊಂಡಿದೆ. ವಯಸ್ಸಾದವರ ಜನಸಂಖ್ಯೆಯು ಡ್ರ್ಯಾಗನ್‌ ದೇಶದ ಮುಂದೆ ಹೊಸ ಸವಾಲಾಗಿ ಹೊರಹೊಮ್ಮಿದೆ. ಜನಸಂಖ್ಯೆ ಹೆಚ್ಚಾಗಿ 1980ರ ದಶಕದಲ್ಲಿ ಕುಟುಂಬಕ್ಕೆ ಒಂದೇ ಮಗು ನೀತಿ ಜಾರಿಗೆ ತಂದಿದ್ದ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ ಜನಸಂಖ್ಯೆ(Population) ಕೊರತೆ ಭೀತಿಯಿಂದ ಹೆಚ್ಚು ಮಕ್ಕಳು ಹೆರುವ ಅವಕಾಶ ನೀಡಿತ್ತು. ಆದರೆ ಹೆಚ್ಚು ಮಕ್ಕಳನ್ನು ಹುಟ್ಟು ಹಾಕಲು ಮಾಡಿದ ನೀತಿಯೂ ಕೆಲಸ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಮದುವೆ ದರದಲ್ಲೂ ನಿರಂತರ ಇಳಿಕೆ ಕಂಡು ಬಂದಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯದ ಪ್ರಕಾರ, 2021ರ ಮೊದಲ 3 ತ್ರೈಮಾಸಿಕಗಳಲ್ಲಿ ನವವಿವಾಹಿತ ದಂಪತಿಗಳ ಸಂಖ್ಯೆ ಕಡಿಮೆಯಾಗಿದೆಯಂತೆ


COMMERCIAL BREAK
SCROLL TO CONTINUE READING

ಈಗ ಜೀವನ ಸಂಗಾತಿಯ ಅಗತ್ಯವಿಲ್ಲ


ಸಚಿವಾಲಯದ ಪ್ರಕಾರ, ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಸಿದರೆ 3ನೇ ತ್ರೈಮಾಸಿಕದಲ್ಲಿ ಕೇವಲ 1.72 ಮಿಲಿಯನ್ (ಸುಮಾರು 17 ಲಕ್ಷ) ಜೋಡಿಗಳು ದಾಂಪತ್ಯ ಜೀವನ(Chinese Couples Marriage)ಕ್ಕೆ ಕಾಲಿಟ್ಟಿದ್ದಾರೆ. ‘ರೇಡಿಯೋ ಫ್ರೀ ಏಷ್ಯಾ’ ತನ್ನ ವರದಿಯಲ್ಲಿ ‘COVID-19 ಸಾಂಕ್ರಾಮಿಕ ರೋಗದಿಂದ ಮದುವೆಯ ಕೊರತೆ ಕಂಡುಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಇದು ಸರ್ಕಾರವು ನೀಡಿದ ಭರವಸೆಗಳನ್ನು ಈಡೇರಿಸದಿರುವ ಹಿಂದಿನ ಕಾರಣಗಳಲ್ಲಿ ಒಂದಾಗಿದೆ’ ಎಂದು ಅಭಿಪ್ರಾಯಪಟ್ಟಿತ್ತು. ಇತ್ತೀಚೆಗೆ ಚೀನೀ ಕಮ್ಯುನಿಸ್ಟ್ ಪಕ್ಷದ ಯೂತ್ ಲೀಗ್ (CCP) ನಡೆಸಿರುವ ಸಮೀಕ್ಷೆ ಪ್ರಕಾರ, ಸುಮಾರು 3000 ಜನರು ಇನ್ನು ಮುಂದೆ ಜೀವನ ಸಂಗಾತಿಯ ಅಗತ್ಯವಿಲ್ಲ ಎಂದು ಹೇಳಿದ್ದಾರಂತೆ.


ಇದನ್ನೂ ಓದಿ: Viral News: ಮದುವೆಯಲ್ಲಿ ಸುಂದರವಾಗಿ ಕಾಣಲು ವರ ಮಾಡಿಕೊಂಡ ಈ ಯಡವಟ್ಟು..!


ಮಹಿಳೆಯರು ಮದುವೆಯಾಗಲು ಬಯಸುವುದಿಲ್ಲವಂತೆ!


ಈ ಸಮೀಕ್ಷೆಯ ಪ್ರಕಾರ ಶೇ.43ಕ್ಕಿಂತಲೂ ಹೆಚ್ಚು ಮಹಿಳೆಯರು ತಾವು ಮದುವೆ(Marriage)ಯಾಗುವುದಿಲ್ಲ ಅಥವಾ ಅದರ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರಂತೆ. ಚೀನಾದಲ್ಲಿ ಮದುವೆಯ ಕುರಿತಾದ ಈ ಅನಿಶ್ಚಿತತೆಯು ಆರ್ಥಿಕ ಪರಿಸ್ಥಿತಿಗಳೊಂದಿಗೆ ಸಂಬಂಧ ಹೊಂದಿದೆ. ಏಕೆಂದರೆ ಶ್ರೀಮಂತ ನಗರಗಳಲ್ಲಿನ ಯುವಜನರು ಸಣ್ಣ ನಗರಗಳಿಗಿಂತ ಅವಿವಾಹಿತರಾಗಿ ಬದುಕುತ್ತಾರೆ. ಆರ್ಥಿಕತೆಯು ಹೆಚ್ಚು ಅಭಿವೃದ್ಧಿ ಹೊಂದಿದಷ್ಟೂ ಹೆಚ್ಚು ಜನರು ಏಕಾಂಗಿಯಾಗಿರಲು ಸಕ್ರಿಯವಾಗಿ ಆಯ್ಕೆ ಮಾಡುತ್ತಾರೆ ಎಂದು ವರದಿ ತಿಳಿಸಿದೆ.


ತಜ್ಞರು ಈ ಆತಂಕ ವ್ಯಕ್ತಪಡಿಸಿದ್ದಾರೆ


ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರುವಂತೆ ಮದುವೆಯಾಗದ ಯುವಕರ ಸಂಖ್ಯೆಯು ಹೆಚ್ಚಾಗಬಹುದು ಎಂದು ವರದಿ ಹೇಳಿದೆ. ಈ ವರದಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಕಳವಳವನ್ನು ಹೆಚ್ಚಿಸಿದೆ. ಮೊದಲು ಚೀನಾ ಜನಸಂಖ್ಯೆ(China Population) ನಿಯಂತ್ರಣದ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಆದರೆ ಈಗ ಚೀನೀ ಸರ್ಕಾರ ಜನರು ಹೆಚ್ಚು ಮಕ್ಕಳನ್ನು ಹೆರಬೇಕೆಂದು ಬಯಸುತ್ತಿದೆ. ಸದ್ಯ ಈಗಿರುವ ಟ್ರೆಂಡ್ ಮುಂದುವರಿದರೆ ಮುಂಬರುವ ದಿನಗಳಲ್ಲಿ ಚೀನಾದ ಜನಸಂಖ್ಯೆಯ ಗ್ರಾಫ್ ವೇಗವಾಗಿ ಕುಸಿಯಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Alert! Last Road on Earth: ಇದುವೇ ಭೂಮಿಯ ಕೊನೆಯ ದಾರಿ, ಅಪ್ಪಿ-ತಪ್ಪಿಯೂ ಒಂಟಿಯಾಗಿ ಹೋದರೆ ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.