Alert! Last Road on Earth: ಇದುವೇ ಭೂಮಿಯ ಕೊನೆಯ ದಾರಿ, ಅಪ್ಪಿ-ತಪ್ಪಿಯೂ ಒಂಟಿಯಾಗಿ ಹೋದರೆ ?

E-69 Highway - E-69 ಅನ್ನು ಭೂಮಿಯ ಮೇಲಿನ ಕೊನೆಯ ರಸ್ತೆ (World's Last Road) ಎಂದು ಪರಿಗಣಿಸಲಾಗಿದೆ. ಈ ರಸ್ತೆಯ ಮುಂದೆ ಬೇರೆ ರಸ್ತೆಯೇ ಇಲ್ಲ. ಈ ರಸ್ತೆಯ ನಂತರ ನಿಮಗೆ ಮಂಜುಗಡ್ಡೆ  ಮತ್ತು ಸಮುದ್ರ ಮಾತ್ರ ಗೋಚರಿಸುತ್ತದೆ.

Written by - Nitin Tabib | Last Updated : Nov 14, 2021, 05:48 PM IST
  • ರಸ್ತೆಯ ಉದ್ದ ಸುಮಾರು 14 ಕಿ.ಮೀ.
  • ಇಲ್ಲಿ ಒಂಟಿಯಾಗಿ ಕಳೆದುಹೋಗುವ ಅಪಾಯ ಜಾಸ್ತಿ
  • ಏಕೆಂದರೆ ಇಲ್ಲಿ 6 ತಿಂಗಳವರೆಗೆ ಕಗ್ಗತ್ತಲೆಯೇ ಇರುತ್ತದೆ
Alert! Last Road on Earth: ಇದುವೇ ಭೂಮಿಯ ಕೊನೆಯ ದಾರಿ, ಅಪ್ಪಿ-ತಪ್ಪಿಯೂ ಒಂಟಿಯಾಗಿ ಹೋದರೆ ? title=
Last Road on Earth (File Photo)

World's Last Highway: ಪ್ರಪಂಚದ ಕೊನೆಯ ಬಿಂದು (Last Point of the World) ಯಾವುದು? ಎಂಬ ನಮಗೆಲ್ಲರಿಗೂ ಯಾವುದೋ ಒಂದು ಸಮಯದಲ್ಲಿ ಕಾಡಿರಬಹುದು. ಅಂದರೆ, ಈ ಜಗತ್ತು ಎಲ್ಲಿ ಕೊನೆಗೊಳ್ಳುತ್ತದೆ? ಎಂಬುದು. ಆದರೆ, ನೀವು ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯುವುದು ಕಷ್ಟ. ಆದ್ದರಿಂದ ಇಂದು ನಾವು ನಿಮಗೆ  ಪ್ರಪಂಚದ ಕೊನೆಯ ರಸ್ತೆಯ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಈ ರಸ್ತೆಯ ನಂತರ ಜಗತ್ತು ಕೊನೆಗೊಳ್ಳುತ್ತದೆ ಎಂದು ನಂಬಲಾಗಿದೆ.

E-69  ರಸ್ತೆಯನ್ನು ವಿಶ್ವದ ಕೊನೆಯ ರಸ್ತೆ ಎಂದು ಪರಿಗಣಿಸಲಾಗಿದೆ. ಇದನ್ನು ಪ್ರಪಂಚದ ಕೊನೆಯ ಬಿಂದು ಎಂದೂ ಕೂಡ ಹೇಳಲಾಗುತ್ತದೆ. ಭೂಮಿಯ ಅತ್ಯಂತ ದೂರದ ಬಿಂದು ಇಂದಿಗೂ ಕೂಡ  ಉತ್ತರ ಧ್ರುವ ರಹಸ್ಯ ಎಂದು ಇದಕ್ಕೆ ಕರೆದರೆ ತಪ್ಪಾಗಲಾರದು. ಇಲ್ಲಿ ಭೂಮಿಯ ಅಕ್ಷವು ತಿರುಗುತ್ತದೆ. ಇಲ್ಲಿ ನಾರ್ವೆ (Norway E69 Highway) ದೇಶ ಬೀಳುತ್ತದೆ. ಇಲ್ಲಿಂದ ಹೋಗುವ ರಸ್ತೆಯನ್ನು ವಿಶ್ವದ ಕೊನೆಯ ರಸ್ತೆ ಎಂದು ಕರೆಯಲಾಗುತ್ತದೆ. ಈ ರಸ್ತೆಯ ಮುಂದೆ ಬೇರೆ ರಸ್ತೆಯೇ ಇಲ್ಲ. ಅದರ ಮುಂದೆ ಮಂಜುಗಡ್ಡೆ  ಮತ್ತು ಸಮುದ್ರ ಮಾತ್ರ ಗೋಚರಿಸುತ್ತದೆ.

ಈ ರಸ್ತೆಯಲ್ಲಿ ಏಕಾಂಗಿಯಾಗಿ ಹೋಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ (Weird News)
E-69 ನ ಉದ್ದ ಸುಮಾರು 14 ಕಿಮೀ. ಈ ಹೆದ್ದಾರಿಯಲ್ಲಿ ಏಕಾಂಗಿಯಾಗಿ ಹೋಗುವುದು ಅಥವಾ ಏಕಾಂಗಿಯಾಗಿ ಪ್ರಯಾಣ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ರಸ್ತೆಯಲ್ಲಿ ಹೋಗಲು ನೀವು ಅನೇಕ ಜನರನ್ನು ಕರೆದುಕೊಂಡು ಹೋಗಬೇಕಾಗುತ್ತದೆ. ಇದಾದ ನಂತರವೇ ಈ ರಸ್ತೆಯಲ್ಲಿ ಹೋಗಲು ನಿಮಗೆ ಅವಕಾಶ ಕಲ್ಪಿಸಲಾಗುತ್ತದೆ. ಹಲವಾರು ಕಿಲೋಮೀಟರ್‌ಗಳಷ್ಟು ದಟ್ಟವಾದ ಹಿಮದ ಪದರಿನಿಂದಾಗಿ  ಇಲ್ಲಿ ಜನರು ಕಳೆದುಹೋಗುವ ಅಪಾಯವಿದೆ. ಹೀಗಾಗಿ ಈ ರಸ್ತೆಯಲ್ಲಿ ಒಬ್ಬರೇ ಹೋಗುವಂತಿಲ್ಲ.

ಇದನ್ನೂ ಓದಿ-ATM ಎಂಬ ಕಲ್ಪನೆ ಹೇಗೆ ಬಂದಿದ್ದು ಗೊತ್ತಾ? ಅದಕ್ಕೆ ಸಂಬಂಧಿಸಿದ ಕೆಲವು ಇಂಟೆರೆಸ್ಟಿಂಗ್ ಸ್ಟೋರಿ ಇಲ್ಲಿದೆ

ಆರು ತಿಂಗಳವರೆಗೆ ಸೂರ್ಯನು ನಿರಂತರವಾಗಿ ಗೋಚರಿಸುವುದಿಲ್ಲ (Viral News)
ಈ ರಸ್ತೆಯು ಉತ್ತರ ಧ್ರುವದ ಸಮೀಪದಲ್ಲಿದೆ. ಇದರಿಂದಾಗಿ ಇಲ್ಲಿ ಚಳಿಗಾಲದಲ್ಲಿ  ಇಡೀ ದಿನ ರಾತ್ರಿ ಇರುತ್ತದೆ. ಜೊತೆಗೆ ಬೇಸಿಗೆಯಲ್ಲಿ ಸೂರ್ಯನು ಇಲ್ಲಿ ಎಂದಿಗೂ  ಅಸ್ತನಾಗುವುದಿಲ್ಲ. ಕೆಲವೊಮ್ಮೆ ಇಲ್ಲಿ ಆರು ತಿಂಗಳ ಕಾಲ ನಿರಂತರವಾಗಿ ಸೂರ್ಯನು ಕಾಣಿಸುವುದಿಲ್ಲ ಮತ್ತು ಕತ್ತಲೆ ಕಟ್ಟಲು ಆವರಿಸಿರುತ್ತದೆ. ಇಲ್ಲಿ ತಾಪಮಾನವು ಚಳಿಗಾಲದಲ್ಲಿ ಮೈನಸ್ 43 ಡಿಗ್ರಿ ತಲುಪುತ್ತದೆ. ಆದರೆ ಬೇಸಿಗೆಯಲ್ಲಿ ಇಲ್ಲಿನ ಉಷ್ಣತೆಯು ಶೂನ್ಯ ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿ ಇರುತ್ತದೆ. ಹಗಲು ಮತ್ತು ರಾತ್ರಿಯ ನಡುವೆ ತುಂಬಾ ಚಳಿಯ ನಡುವೆಯೂ ಕೂಡ ಜನರು ಇಲ್ಲಿ ವಾಸಿಸುತ್ತಾರೆ.

ಇದನ್ನೂ ಓದಿ-Viral News: ಚಿನ್ನಕ್ಕಿಂತ ದುಬಾರಿ ಈ ಹಣ್ಣಿನ ಬೆಲೆ , ತಿನ್ನುವ ಮೊದಲು ಯೋಚಿಸಬೇಕು ನೂರು ಬಾರಿ..!

ಜನರು ಇಲ್ಲಿಗೆ ಬರುತ್ತಾರೆ ಮತ್ತು ವಿಭಿನ್ನ ಪ್ರಪಂಚವನ್ನು ಅನುಭವಿಸುತ್ತಾರೆ (North Pole Mystery, Aurora North Pole)
ಮೊದಲು ಇಲ್ಲಿ ಮೀನು ವ್ಯಾಪಾರ ಮಾತ್ರ ನಡೆಯುತ್ತಿತ್ತು. ಆದರೆ, 1930 ರ ನಂತರ, ಈ ಸ್ಥಳವು ಅಭಿವೃದ್ಧಿ ಹೊಂದಲು ಪ್ರಾರಂಭಿಸಿತು ಮತ್ತು 1934 ರಲ್ಲಿ ಪ್ರವಾಸಿಗರನ್ನು ಇಲ್ಲಿಗೆ ಸ್ವಾಗತಿಸಲಾಯಿತು. ಇದರಿಂದ ಇಲ್ಲಿನ ಜನರಿಗೆ ಬೇರೆ ಬೇರೆ ರೀತಿಯ ಸಂಪಾದನೆ ಮಾಡುವ ಅವಕಾಶ ಲಭಿಸಿದೆ. ಈಗ ಇಲ್ಲಿ ಎಲ್ಲಾ ರೀತಿಯ ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ, ಪ್ರಪಂಚದಾದ್ಯಂತದ ಜನರು ಇಲ್ಲಿಗೆ ಭೇಟಿ ನೀಡಲು ಬರುತ್ತಾರೆ. ಇಲ್ಲಿಗೆ ಬಂದರೆ ಜನರು ಬೇರೆಯದೇ ಪ್ರಪಂಚವನ್ನು ಅನುಭವಿಸುತ್ತಾರೆ. ಈ ಸ್ಥಳಕ್ಕೆ ಭೇಟಿ ನೀಡಿ ಸೂರ್ಯಾಸ್ತ  ಮತ್ತು ಧ್ರುವ ದೀಪಗಳನ್ನು ನೋಡುವುದು ತುಂಬಾ ರೋಮಾಂಚಕ ಅನುಭವ ನೀಡುತ್ತದೆ.

ಇದನ್ನೂ ಓದಿ-Dream Job: ಆಹಾರ ಸೇವಿಸಿ ರುಚಿ ತಿಳಿಸಲು ಈ ಕಂಪನಿ ನೀಡುತ್ತೆ ಲಕ್ಷ ಲಕ್ಷ ಸಂಬಳ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News