ಕೊರೊನಾ ಹುಟ್ಟಿದ್ದು ಭಾರತದಲ್ಲೇ! ಚೀನಾ ಕೊಟ್ಟ `ಶಾಕಿಂಗ್` ಕಾರಣ ಹೀಗಿದೆ!
ಚೀನಾದ ಸಂಶೋಧಕರು ಕೊರೊನಾ ವೈರಸ್ ಹುಟ್ಟಿದ್ದು ಭಾರತದಲ್ಲಿ ಎಂದು ಹೊಸ ವಾದ
ಬೀಜಿಂಗ್: ಇಡೀ ಜಗತ್ತನ್ನೇ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ಹುಟ್ಟಿನ ಬಗ್ಗೆ ಆರೋಪ-ಪ್ರತ್ಯಾರೋಪಗಳ ಸರಣಿ ಮುಂದುವರಿದಿದೆ. ಈವರೆಗೂ ಕೊರೊನಾ ತವರು ಚೀನಾ ಎಂದೇ ಎಲ್ಲರೂ ನಂಬಿದ್ದಾರೆ. ಅದಕ್ಕೆ ಕಾರಣ ವೈರಸ್ ಮೊದಲ ಬಾರಿಗೆ ಕಾಣಿಸಿಕೊಂಡಿದ್ದೇ ಅಲ್ಲಿ. ಆದರೆ, ಚೀನಾ ಮಾತ್ರ ಕೊರೊನಾ ಹುಟ್ಟಿದ್ದು ನಮ್ಮಲ್ಲಲ್ಲ ಎಂದು ಹೇಳುತ್ತಲೇ ಬರುತ್ತಿದೆ. ಅಲ್ಲದೆ, ಈ ಹಿಂದೆ ಅಮೆರಿಕ ವಿರುದ್ಧ ದೂರಿದ್ದ ಚೀನಾ ಇದೀಗ ಭಾರತದತ್ತ ಬೊಟ್ಟು ಮಾಡಿದೆ.
ಹೌದು, ಚೀನಾದ ಸಂಶೋಧಕರು ಕೊರೊನಾ ವೈರಸ್(corona virus) ಹುಟ್ಟಿದ್ದು ಭಾರತದಲ್ಲಿ ಎಂದು ಹೊಸ ವಾದ ಮಂಡಿಸಿದ್ದಾರೆ. ವೈರಸ್ ನಮ್ಮ ಗಡಿಯಿಂದ ಆಚೆಯೇ ಹುಟ್ಟಿ ಬಂದಿದೆ ಎಂದು ಚೀನಾ ಹೊಸ ವರಸೆ ತೆಗೆದಿದೆ.
ಹಲವು ರೋಗಗಳಿಗೆ ರಾಮಬಾಣ ಚಿಕಿತ್ಸೆ Marigold Flower, ಇಲ್ಲಿವೆ 10 ಲಾಭಗಳು
ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ನ ಒಂದು ತಂಡದ ವಾದದ ಪ್ರಕಾರ 2019ರ ಬೇಸಿಗೆ ಕಾಲದಲ್ಲಿ ವೈರಸ್ ಭಾರತದಲ್ಲಿ ಹುಟ್ಟಿದೆ. ಕಲುಷಿತ ನೀರಿನ ಮೂಲಕ ಪ್ರಾಣಿಗಳಿಂದ ಮಾನವನಿಗೆ ಹರಡಿದೆ. ಬಳಿಕ ವುಹಾನ್ಗೆ ವ್ಯಕ್ತಿಯೊಬ್ಬರ ಪ್ರಯಾಣದ ಮೂಲಕ ಹರಡಿದ್ದು, ಅದನ್ನು ಮೊದಲಿಗೆ ಪತ್ತೆಹಚ್ಚಲಾಯಿತು ಎಂದಿದ್ದಾರೆ.
ರೈಲ್ವೆ ಪ್ರಯಾಣಿಕರೇ ಎಚ್ಚರ! ನಿಲ್ದಾಣಕ್ಕೆ ತೆರಳುವ ಮುನ್ನ ನಿಮ್ಮ ಟಿಕೆಟ್ ಅಸಲಿಯೇ/ನಕಲಿಯೇ ಪರಿಶೀಲಿಸಿ
ಆದರೆ, ಇದನ್ನು ಸ್ಕಾಟ್ಲೆಂಡ್ನ ಗ್ಲಾಸ್ಗೋ ಯೂನಿವರ್ಸಿಟಿಯ ಪರಿಣಿತ ಸಂಶೋಧಕ ಡೇವಿಡ್ ರಾಬರ್ಟ್ಸನ್ ಅಲ್ಲಗೆಳೆದಿದ್ದಾರೆ. ಸಂಶೋಧನೆ ದೋಷಪೂರಿತವಾಗಿದೆ ಎಂದಿರುವ ಡೇವಿಡ್, ಇದು ಕೊರೊನಾ ವೈರಸ್ ಬಗೆಗಿನ ನಮ್ಮ ತಿಳುವಳಿಕೆಗೆ ಏನನ್ನೂ ಸೇರಿಸುವುದಿಲ್ಲ ಎಂದು ತೀರ್ಮಾನಿಸಿದ್ದಾರೆ.
ನಾಗಾಲ್ಯಾಂಡ್‌ನಲ್ಲಿ 'ವಜ್ರ' ಪತ್ತೆ, ತನಿಖೆ ನಡೆಸುವಂತೆ ಭೂವಿಜ್ಞಾನಿಗಳಿಗೆ ಆದೇಶಿಸಿದ ಸರ್ಕಾರ