Cobra-Rattlesnake Fight: ಇದ್ದಕ್ಕಿದ್ದಂತೆ ಎದುರಾದ ರಾಟಲ್ ಸ್ನೇಕ್-ಕೋಬ್ರಾ, ಮುಂದೆ ಆಗಿದ್ದೇ ಬೇರೆ!
Cobra-Rattlesnake Fight ಈ ವೀಡಿಯೊ ಭಯಾನಕ ಕಿಂಗ್ ಕೋಬ್ರಾ ಮತ್ತು ರಾಟಲ್ ಸ್ನೇಕ್ ಕಾದಾಟಕ್ಕೆ ಸಂಬಂಧಿಸಿದೆ. ಇಂತಹ ವಿಡಿಯೋವನ್ನು ಸಾಮಾನ್ಯವಾಗಿ ನೋಡಿರಲಿಕ್ಕಿಲ್ಲ. ಈ ವೀಡಿಯೊವನ್ನು ಇಲ್ಲಿಯವರೆಗೆ ಸುಮಾರು ಒಂದೂವರೆ ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
Cobra-Rattlesnake Fight : ಇಂದಿನ ಕಾಲದಲ್ಲಿ ಇಂಟರ್ನೆಟ್ ಅಂತಹ ವೇದಿಕೆಯಾಗಿದ್ದು ಇದರಲ್ಲಿ ಬಹುತೇಕ ಮಂದಿ ಸಕ್ರಿಯರಾಗಿರುತ್ತಾರೆ. ಪ್ರತಿದಿನ ಸಾವಿರಾರು ಮಿಲಿಯನ್ ವೀಡಿಯೊಗಳನ್ನು ಇಲ್ಲಿ ವೀಕ್ಷಿಸಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಲಾಗುತ್ತದೆ. ಇವುಗಳಲ್ಲಿ ಕೆಲವು ವೀಡಿಯೋಗಳು ತುಂಬಾ ವೈರಲ್ (Viral Video) ಆಗುತ್ತವೆ. ಇದೀಗ ಅಂತಹ ಒಂದು ವಿಡಿಯೋ ಎಲ್ಲೆಡೆ ಆವರಿಸಿದೆ. ಈ ವೀಡಿಯೊ ಭಯಾನಕ ಕಿಂಗ್ ಕೋಬ್ರಾ ಮತ್ತು ರಾಟಲ್ ಸ್ನೇಕ್ ಕಾದಾಟಕ್ಕೆ ಸಂಬಂಧಿಸಿದೆ.
ಭಯಾನಕ ಕಿಂಗ್ ಕೋಬ್ರಾ ಮತ್ತು ರಾಟಲ್ ಸ್ನೇಕ್ ಇದ್ದಕ್ಕಿದ್ದಂತೆ ಎದುರಾದಾಗ...!
ಅಪಾಯಕಾರಿ ಕಿಂಗ್ ಕೋಬ್ರಾ ಮತ್ತು ರಾಟಲ್ ಸ್ನೇಕ್ (Cobra-Rattlesnake) ಕಾಡಿನಲ್ಲಿ ಅಲ್ಲೊಂದು ಇಲ್ಲೊಂದು ಓಡಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಇದರಲ್ಲಿ ನಾಗರ ಹಾವು ಗಾಳಿಯಲ್ಲಿ ಸುಮಾರು ಎರಡು ಅಡಿ ಎತ್ತರಕ್ಕೆ ಸೆಡೆಎತ್ತಿ ನಿಂತಿರುವುದನ್ನು ಕಾಣಬಹುದು. ವೀಡಿಯೊದ (Viral Video) ಆರಂಭದಲ್ಲಿ ಎಲ್ಲವೂ ಸಾಮಾನ್ಯವಾಗಿದೆ ಎಂದು ತೋರುತ್ತದೆ, ಆದರೆ ರಾಟಲ್ ಸ್ನೇಕ್ ಬಂದ ತಕ್ಷಣ, ಮುಂದಿನ ಪರಿಸ್ಥಿತಿಯನ್ನು ಊಹಿಸಬಹುದು. ಮತ್ತೊಂದು ಹಾವು ತನ್ನ ಸಮೀಪದಲ್ಲಿದ್ದುದನ್ನು ನೋಡಿದ ನಾಗರಹಾವು ತಕ್ಷಣವೇ ಕಾದಾಡುವ ಭಂಗಿಗೆ ಇಳಿದು ಕ್ಷಣಾರ್ಧದಲ್ಲಿ ರಾಟಲ್ ಸ್ನೇಕ್ ಮೇಲೆ ದಾಳಿ ಮಾಡಿತು.
ಇದನ್ನೂ ಓದಿ- Snake Video: ಹಕ್ಕಿ ಗೂಡಿನ ಮೇಲೆ ದಾಳಿ ಮಾಡಿದ ಹಾವು; ಮುಂದೇನಾಯ್ತು, ನೀವೇ ನೋಡಿ!
ಕಿಂಗ್ ಕೋಬ್ರಾ ಮತ್ತು ರಾಟಲ್ ಸ್ನೇಕ್ ನಡುವೆ ಕಾದಾಟ ಶುರುವಾದ ಕೂಡಲೇ ನಾಗರಹಾವು ಮಧ್ಯದಿಂದ ರಾಟಲ್ ಸ್ನೇಕ್ ಅನ್ನು (Cobra-Rattlesnake Fight) ಬಾಯಿಗೆ ಹಿಡಿದಿದೆ. ರಾಟಲ್ ಸ್ನೇಕ್ ಕೂಡ ಸ್ಪರ್ಧಿಸಲು ಕಷ್ಟಪಟ್ಟು ಪ್ರಯತ್ನಿಸುತ್ತದೆ. ಆದರೆ ನಾಗರಹಾವಿನ ಮುಂದೆ ಎರಡು ನಿಮಿಷಗಳ ಕಾಲ ಉಳಿಯಲು ಸಾಧ್ಯವಾಗಲಿಲ್ಲ. ಅಚ್ಚರಿಯ ಸಂಗತಿ ಎಂದರೆ ರಾಟಲ್ ಸ್ನೇಕ್ ಅನ್ನು ಸೋಲಿಸಿದ ನಾಗರಹಾವು ಅದನ್ನು ಜೀವಂತವಾಗಿ ನುಂಗಿದೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ: Viral Video: ಹಾವು ಮರಿಗೆ ಜನ್ಮ ನೀಡುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲಿದೆ ಅಪರೂಪದ ವೈರಲ್ ವಿಡಿಯೋ
ವೀಡಿಯೊ ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ಆದರೆ ಇದು ಸುಮಾರು ಏಳು ವರ್ಷಗಳ ಹಿಂದೆ ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್‌ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಆಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.