Congo Boat accident : ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (DRC) ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಲುಲೋಂಗಾ ನದಿಯಲ್ಲಿ 200 ಪ್ರಯಾಣಿಕರಿದ್ದ ಮೋಟಾರ್ ಬೋಟ್ ಮುಳುಗಿದೆ. ಈ ದುರ್ಘಟನೆಯಲ್ಲಿ 145 ಮಂದಿ ಜಲಸಮಾಧಿಯಾಗಿದ್ದಾರೆ. 55 ಜನ ಬದುಕುಳಿದಿದ್ದಾರೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಕಾಂಗೋ ದೇಶದ ಲುಲೋಂಗಾ ನದಿಯಲ್ಲಿ ಮೋಟಾರ್ ಬೋಟ್ ಓವರ್‌ಲೋಡ್‌ ಆದ ಪರಿಣಾಮ ಹಡಗು ಮುಳುಗಿದೆ ಎಂದು ಸುದ್ದಿಯಾಗಿದೆ. ಇತ್ತೀಚೆಗಷ್ಟೇ ಕಾಂಗೋದಲ್ಲಿ ಚಂಡಮಾರುತದಿಂದ ಉಂಟಾದ ಭೂಕುಸಿತದಿಂದ ಅನೇಕ ಜನರು ಸಾವನ್ನಪ್ಪಿದ್ದರು. ಇದೀಗ 145 ಜನರ ಸಾವು ಕಾಂಗೋ ಜನರನ್ನು ಭಯ ಬೀತರನ್ನಾಗಿಸಿದೆ. 


ಇದನ್ನೂ ಓದಿ: ಟ್ವಿಟರ್ ಬ್ಲೂ ಟಿಕ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ : ಇನ್ಮೇಲೆ ನೀವು ಹಣ ಪಾವತಿ ಮಾಡ್ಬೇಕು..!


ಪ್ರಯಾಣಿಕರು ತಮ್ಮ ಸರಕು ಮತ್ತು ಜಾನುವಾರುಗಳೊಂದಿಗೆ ಮೋಟಾರು ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾಗ ಬಸಂಕುಸು ಎಂಬ ಪಟ್ಟಣದ ಬಳಿ ಮಂಗಳವಾರ ರಾತ್ರಿ ಅಪಘಾತಕ್ಕೀಡಾಗಿತ್ತು. ದೋಣಿಯಲ್ಲಿ ಪ್ರಯಾಣಿಕರು, ಸರಕುಗಳು ಮತ್ತು ಜಾನುವಾರುಗಳು ಅಧಿಕವಾಗಿ ತುಂಬಿದ್ದದ್ದರು. ಇದರಿಂದಾಗಿ ದೋಣಿ ನದಿಯಲ್ಲಿ ಮುಳುಗಿತು. ಈಜು ಬಾರದವರು ನೀರಿನಲ್ಲಿ ಮುಳುಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈಜಲು ಬಂದವರೂ ಸಹ ಸಾವನ್ನಪ್ಪಿದ್ದಾರೆ. ಈ ಅವಘಡದಲ್ಲಿ 145 ಮಂದಿ ಜಲಸಮಾಧಿಯಾಗಿದ್ದಾರೆ. ಅದೃಷ್ಟವಶಾತ್‌ 55 ಮಂದಿ ಬದುಕುಳಿದಿದ್ದಾರೆ.


ಡಿಆರ್‌ಸಿಯಲ್ಲಿ ದೋಣಿ ಅಪಘಾತಗಳು ಆಗಾಗ ನಡೆಯುತ್ತಿವೆ. ಕಾಂಗೋದಲ್ಲಿ ರಸ್ತೆಗಳಿಲ್ಲದ ಕಾರಣ ಜನರು ದೋಣಿಗಳಲ್ಲಿ ಪ್ರಯಾಣಿಸುತ್ತಾರೆ. ಅಲ್ಲಿನ ಜನರು ಜೀವನೋಪಾಯಕ್ಕಾಗಿ ನಿತ್ಯ ಬೇರೆಡೆಗೆ ಹೋಗುತ್ತಾರೆ. ಈಜು ಗೊತ್ತಿಲ್ಲದಿದ್ದರೂ ದೋಣಿಗಳಲ್ಲಿ ಪ್ರಯಾಣಿಸುವಾಗ ಅಪಘಾತಕ್ಕೀಡಾಗುತ್ತಾರೆ. ಅಪಾಯದ ಅರಿವಾದ ಬಳಿಕ ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ಟೋಬರ್ 2022 ರಲ್ಲಿ ಕಾಂಗೋ ನದಿಯಲ್ಲಿ ಇದೇ ರೀತಿಯ ಘಟನೆ ನಡೆಯಿತು. ದೋಣಿ ಮುಳುಗಿ 40 ಮಂದಿ ಸಾವನ್ನಪ್ಪಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.