ಟ್ವಿಟರ್ ಬ್ಲೂ ಟಿಕ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ : ಇನ್ಮೇಲೆ ನೀವು ಹಣ ಪಾವತಿ ಮಾಡ್ಬೇಕು..!

ಟ್ವಿಟರ್ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌. ನೀವು ಟ್ವಿಟರ್‌ ಬಳಕೆದಾರರಾಗಿದ್ದರೆ ಮತ್ತು ನೀಲಿ ಟಿಕ್ ಹೊಂದಿದ್ದರೆ, ಈ ಸುದ್ದಿ ನಿಮಗೆ ಅನ್ವಯಿಸುತ್ತದೆ. ಇನ್ನು ಮುಂದೆ ನೀವು ಬ್ಲೂಟಿಕ್‌ಗಾಗಿ ಹೆಚ್ಚು ಪಾವತಿಸಬೇಕಾಗುತ್ತದೆ. ಟ್ವಿಟರ್ ಬ್ಲೂಟಿಕ್ ಬೆಲೆಯನ್ನು ಹೆಚ್ಚಿಸಿದೆ. ಆಂಡ್ರಾಯ್ಡ್ ಬಳಕೆದಾರರು ಇನ್ನು ಮುಂದೆ ಪ್ರತಿ ತಿಂಗಳು 11 ಡಾಲರ್ ಅಥವಾ 894 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

Written by - Krishna N K | Last Updated : Jan 19, 2023, 09:38 PM IST
  • ಟ್ವಿಟರ್ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌.
  • ನೀವು ಟ್ವಿಟರ್‌ ಬಳಕೆದಾರರಾಗಿದ್ದರೆ ಮತ್ತು ನೀಲಿ ಟಿಕ್ ಹೊಂದಿದ್ದರೆ, ಈ ಸುದ್ದಿ ನಿಮಗೆ ಅನ್ವಯಿಸುತ್ತದೆ.
  • ಇನ್ನು ಮುಂದೆ ನೀವು ಬ್ಲೂಟಿಕ್‌ಗಾಗಿ ಹೆಚ್ಚು ಪಾವತಿಸಬೇಕಾಗುತ್ತದೆ.
 ಟ್ವಿಟರ್ ಬ್ಲೂ ಟಿಕ್‌ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌ : ಇನ್ಮೇಲೆ ನೀವು ಹಣ ಪಾವತಿ ಮಾಡ್ಬೇಕು..! title=

Twitter blue tick : ಟ್ವಿಟರ್ ಬಳಕೆದಾರರಿಗೆ ಶಾಕಿಂಗ್‌ ನ್ಯೂಸ್‌. ನೀವು ಟ್ವಿಟರ್‌ ಬಳಕೆದಾರರಾಗಿದ್ದರೆ ಮತ್ತು ನೀಲಿ ಟಿಕ್ ಹೊಂದಿದ್ದರೆ, ಈ ಸುದ್ದಿ ನಿಮಗೆ ಅನ್ವಯಿಸುತ್ತದೆ. ಇನ್ನು ಮುಂದೆ ನೀವು ಬ್ಲೂಟಿಕ್‌ಗಾಗಿ ಹೆಚ್ಚು ಪಾವತಿಸಬೇಕಾಗುತ್ತದೆ. ಟ್ವಿಟರ್ ಬ್ಲೂಟಿಕ್ ಬೆಲೆಯನ್ನು ಹೆಚ್ಚಿಸಿದೆ. ಆಂಡ್ರಾಯ್ಡ್ ಬಳಕೆದಾರರು ಇನ್ನು ಮುಂದೆ ಪ್ರತಿ ತಿಂಗಳು 11 ಡಾಲರ್ ಅಥವಾ 894 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.

ಪ್ರಸ್ತುತ ಬೆಲೆ ಎಷ್ಟು? : ಇಲ್ಲಿಯವರೆಗೆ ಟ್ವಿಟರ್ ಬ್ಲೂಟಿಕ್ ಬಳಕೆದಾರರು ತಿಂಗಳಿಗೆ 8 ಡಾಲರ್ ಅಂದರೆ 650 ರೂಪಾಯಿ ಅಥವಾ 84 ಡಾಲರ್ ಅಥವಾ 6830 ರೂಪಾಯಿಗಳನ್ನು ವರ್ಷಕ್ಕೆ ಪಾವತಿಸಬೇಕಾಗಿತ್ತು.  ಈ ಯೋಜನೆಯನ್ನು ಪ್ರಸ್ತುತ ಅಮೆರಿಕ, ಕೆನಡಾ, ಯುನೈಟೆಡ್ ಕಿಂಗ್‌ಡಮ್, ಜಪಾನ್, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ವಿದೇಶಾಂಗ ಇಲಾಖೆ ಆಕ್ಷೇಪ

ಇನ್ನು ಸೂಚನೆಯಿಲ್ಲದೆ ಬ್ಲೂ ಟಿಕ್ ಅನ್ನು ತೆಗೆದುಹಾಕಲಾಗುತ್ತದೆ. ಟ್ಟಿಟರ್‌ ಸೇವಾ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ನಿಮ್ಮ ಖಾತೆಯನ್ನು ಅಮಾನತುಗೊಳಿಸಿದರೆ ಯಾವುದೇ ಮರುಪಾವತಿಯನ್ನು ನೀಡದೆ ಯಾವುದೇ ಸಮಯದಲ್ಲಿ ಬ್ಲೂ ಟಿಕ್‌ಅನ್ನು ತೆಗೆದುಹಾಕುವ ಹಕ್ಕನ್ನು ಟ್ವಿಟರ್‌ ಕಾಯ್ದಿರಿಸಿಕೊಂಡಿದೆ. ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಸಂಸ್ಥೆಗಳಿಗಾಗಿ ಟ್ವಿಟರ್ ಪರಿಶೀಲನೆ ಎಂಬ ಹೊಸ ಸೇವೆಯನ್ನು ಪ್ರಾರಂಭಿಸುತ್ತಿದೆ. ಅದರಂತೆ ಅಧಿಕೃತ ವ್ಯವಹಾರ ಖಾತೆಗಳು ಗೋಲ್ಡನ್‌ ಟಿಕ್ ಅನ್ನು ಹೊಂದಿರುತ್ತವೆ.

ಇದರ ಪ್ರಯೋಜನಗಳು : ಬ್ಲೂ ಟಿಕ್‌ ಜೊತೆಗೆ ಟ್ವಿಟರ್‌ ಬ್ಲೂ ವೈಶಿಷ್ಟ್ಯವು ಬಳಕೆದಾರರಿಗೆ ಟ್ಟಿಟರ್‌ನ ಉತ್ತಮ ಮತ್ತು ಹೆಚ್ಚು ಅನುಭವವನ್ನು ನೀಡುತ್ತದೆ. ಇದು ಕಸ್ಟಮ್ ಅಪ್ಲಿಕೇಶನ್ ಐಕಾನ್, ಕಸ್ಟಮ್ ನ್ಯಾವಿಗೇಷನ್, ಹೆಡರ್, ಟ್ವೀಟ್ ರದ್ದುಗೊಳಿಸುವುದು ಅಲ್ಲದೆ, ಹೈ ಕ್ವಾಲಿಟಿ ವೀಡಿಯೊಗಳನ್ನು ಒಳಗೊಂಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News