China: ಚೀನಾದಲ್ಲಿ ಮತ್ತೆ ಕೊರೊನಾ ಅಬ್ಬರ: ಶಾಂಘೈನಲ್ಲಿ ಅಂಗಡಿಗಳು ಬಂದ್
ಸದ್ಯ ದಿನೇ ದಿನೇ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ
ನವದೆಹಲಿ: ಚೀನಾದಲ್ಲಿ (China)ಕೊರೊನಾ ಅಬ್ಬರ ಮತ್ತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಚೀನಾದಲ್ಲಿ ಲಾಕ್‌ಡೌನ್ (Lockdown)ಘೋಷಿಸಲಾಗಿದ್ದು, ಸೂಪರ್‌ಮಾರ್ಕೆಟ್‌ಗಳನ್ನು ಸಹ ಮುಚ್ಚಲಾಗಿದೆ. ಸದ್ಯ ಲಾಕ್‌ಡೌನ್ ಪರಿಣಾಮವಾಗಿ ಚೀನಾದ ಪ್ರಮುಖ ಹಣಕಾಸು ಕೇಂದ್ರವಾದ ಶಾಂಘೈನಲ್ಲಿ (Shanghai) 26 ದಶಲಕ್ಷಕ್ಕೂ ಹೆಚ್ಚು ನಿವಾಸಿಗಳು ಆಹಾರವನ್ನು ಸಂಗ್ರಹಿಸಲು ಪರದಾಡುತ್ತಿದ್ದಾರೆ.
ಸದ್ಯ ದಿನೇ ದಿನೇ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಶಾಂಘೈನಲ್ಲಿ ಕೋವಿಡ್ -19 ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಶಾಂಘೈನ ಪಶ್ಚಿಮ ಜಿಲ್ಲೆಗಳಲ್ಲಿ ಮಂಗಳವಾರ ಕೊನೆಗೊಳ್ಳಲಿದ್ದ ಎರಡನೇ ಹಂತದ ಲಾಕ್‌ಡೌನ್ ಅನ್ನು ಮತ್ತೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: Corona 4th Wave: ಶಾಂಘೈನಲ್ಲಿ ಕೊರೊನಾ 4ನೇ ಅಲೆಯ ಅಬ್ಬರ: 24 ಗಂಟೆಯಲ್ಲಿ 1,366 ಕೇಸ್ ದಾಖಲು
ಸೂಪರ್ಮಾರ್ಕೆಟ್ ಸೇರಿದಂತೆ ಅಗತ್ಯ ವಸ್ತುಗಳ ಅಂಗಡಿಗಳನ್ನೂ ಬಂದ್ ಮಾಡಿರುವುದರಿಂದ ಜನರು ತಮ್ಮ ಮನೆಗಳಿಗೆ ಆಹಾರ ಮತ್ತು ದಿನನಿತ್ಯದ ವಸ್ತುಗಳನ್ನು ಸಾಗಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ. ಶಾಂಘೈ ನಗರದಲ್ಲಿನ ಪ್ರಮುಖ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲಸ ಮಾಡುವ 11,000 ರೈಡರ್‌ಗಳು ಪ್ರತಿದಿನ ಕೋವಿಡ್ ನೆಗೆಟಿವ್ ನ್ಯೂಕ್ಲಿಯಿಕ್ ಆಸಿಡ್ ಮತ್ತು ಆಂಟಿಜೆನ್ ಪರೀಕ್ಷೆಗಳನ್ನು ಮಾಡಿಸಿಕೊಂಡರೆ ಕೆಲಸಕ್ಕೆ ಹೋಗಬಹುದು ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಔಷಧಿ ಇಲ್ಲದೆಯೇ ಗುಣಪಡಿಸಬಹುದು ಹೃದಯದ ಕಾಯಿಲೆಯನ್ನು, ಮಾಡಬೇಕಾಗಿರುವುದು ಇಷ್ಟೇ ..!
ಶಾಂಘೈನಲ್ಲಿ 16,766 ಹೊಸ ಲಕ್ಷಣರಹಿತ ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಇದು ಚೀನಾದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲೂ ಭಾರೀ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.