ಔಷಧಿ ಇಲ್ಲದೆಯೇ ಗುಣಪಡಿಸಬಹುದು ಹೃದಯದ ಕಾಯಿಲೆಯನ್ನು, ಮಾಡಬೇಕಾಗಿರುವುದು ಇಷ್ಟೇ ..!

 ಫಿಟ್ ಆಗಿರಲು, ಉತ್ತಮ ಆಹಾರದ ಜೊತೆಗೆ, ದಿನಚರಿಯನ್ನು ಕೂಡಾ  ಬದಲಾಯಿಸಬೇಕಾಗುತ್ತದೆ. ಹಾಗಾದರೆ ಔಷಧಿಗಳಿಲ್ಲದೆ ಹೃದ್ರೋಗಗಳನ್ನು ಹೇಗೆ ಗುಣಪಡಿಸಬಹುದು ಎಂದು ತಿಳಿಯೋಣ.

Written by - Ranjitha R K | Last Updated : Apr 6, 2022, 03:07 PM IST
  • ಮಾರ್ನಿಂಗ್ ವಾಕ್ ಅಭ್ಯಾಸ ಮಾಡಿಕೊಳ್ಳಿ
  • ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ
  • ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ
ಔಷಧಿ ಇಲ್ಲದೆಯೇ ಗುಣಪಡಿಸಬಹುದು ಹೃದಯದ ಕಾಯಿಲೆಯನ್ನು,  ಮಾಡಬೇಕಾಗಿರುವುದು ಇಷ್ಟೇ ..! title=
how to control heart diseae (file photo)

ಬೆಂಗಳೂರು : ಬದಲಾಗುತ್ತಿರುವ ಜೀವನಶೈಲಿಯಿಂದ ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ (Heart attack) . ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆರೋಗ್ಯದ ಬಗ್ಗೆ ನೀವು ಹೆಚ್ಚು ಜಾಗೃತರಾಗಿರಬೇಕು. ಫಿಟ್ ಆಗಿರಲು, ಉತ್ತಮ ಆಹಾರದ ಜೊತೆಗೆ, ದಿನಚರಿಯನ್ನು ಕೂಡಾ  ಬದಲಾಯಿಸಬೇಕಾಗುತ್ತದೆ. ಹಾಗಾದರೆ ಔಷಧಿಗಳಿಲ್ಲದೆ ಹೃದ್ರೋಗಗಳನ್ನು ಹೇಗೆ ಗುಣಪಡಿಸಬಹುದು ಎಂದು ತಿಳಿಯೋಣ.

1. ಮಾರ್ನಿಂಗ್ ವಾಕ್ ಅಭ್ಯಾಸ ಮಾಡಿಕೊಳ್ಳಿ :
ಮೊದಲನೆಯದಾಗಿ, ನಿಮ್ಮ ದಿನಚರಿಯಲ್ಲಿ ಮಾರ್ನಿಂಗ್ ವಾಕ್ ಸೇರಿಸಿಕೊಳ್ಳಿ (Morning walk for goiod health). ಪ್ರತಿದಿನ 30 ರಿಂದ 40 ನಿಮಿಷಗಳ ಕಾಲ ನಡೆಯುವುದರಿಂದ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದು. ಹೀಗೆ ಮಾಡುವುದರಿಂದ ಹೃದಯಾಘಾತದ (Heart attack) ಅಪಾಯ ಕಡಿಮೆಯಾಗುತ್ತದೆ.

ಇದನ್ನೂ ಓದಿ : ಮನೆಯಲ್ಲಿಯೇ ಇರುವ ಈ ಮೂರು ವಸ್ತುಗಳಿಂದ ಬಿಳಿ ಕೂದಲಿನ ಸಮಸ್ಯೆ ಸಂಪೂರ್ಣ ನಿವಾರಣೆಯಾಗುತ್ತದೆ

2. ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬೇಡಿ : 
ಒತ್ತಡವನ್ನು(Stress) ತೆಗೆದುಕೊಳ್ಳುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಏನೇ ಸಮಸ್ಯೆ ಬಂದರೂ ಹೆಚ್ಚು ಒತ್ತಡವನ್ನು ತೆಗೆದುಕೊಳ್ಳಬಾರದು. ಜೀವನದ ಒತ್ತಡವನ್ನು ಕಡಿಮೆ ಮಾಡಲು, ವಾರದಲ್ಲಿ ಒಮ್ಮೆಯಾದರೂ ನಿಮ್ಮ ಸ್ನೇಹಿತರನ್ನು ಭೇಟಿ ಮಾಡಲು ಪ್ರಯತ್ನಿಸಿ.  ಯಾವ ಕೆಲಸ್ದದಿಂದ ನಿಮ್ಮ ಮನಸ್ಸಿಗೆ ನೆಮ್ಮದಿ, ಸಂತೋಷ ಸಿಗುತ್ತದೆಯೋ ಅದೇ  ಕೆಲಸ ಮಾಡಿ. 

3. ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸಿ : 
ನಿಮ್ಮ ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳನ್ನು ಸೇರಿಸುವುದನ್ನು ಮರೆಯಬೇಡಿ.  ಹಣ್ಣುಗಳು ಮತ್ತು ತರಕಾರಿಗಳು ಸಾಕಷ್ಟು ಫೈಬರ್ ಅನ್ನು ಹೊಂದಿರುತ್ತವೆ (Benefits of fruits and vegetables). ಇದು ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ಜೀವಕೋಶಗಳನ್ನು ಸಾಯದಂತೆ ರಕ್ಷಿಸುತ್ತದೆ. ಮಧುಮೇಹ ಮತ್ತು ಹೃದಯ ಕಾಯಿಲೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಇದನ್ನೂ ಓದಿ : ಮೊಟ್ಟೆಗಳನ್ನು ತಿನ್ನುವುದರಿಂದ ಹೆಚ್ಚಾಗಲಿದೆಯೇ ಡಯಾಬಿಟೀಸ್ ? ಬಯಲಾಗಿದೆ ಆಘಾತಕಾರಿ ಸತ್ಯ

4. ಡಯಟ್‌ನಲ್ಲಿ ಡ್ರೈ ಫ್ರೂಟ್ಸ್  ಸೇರಿಸಿ :
 ಡ್ರೈ ಫ್ರೂಟ್ಸ್ ಸೇವನೆಯಿಂದ ಹೃದಯವನ್ನೂ ರಕ್ಷಿಸಿಕೊಳ್ಳಬಹುದು.  ಇದರಲ್ಲಿ ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಲ್ಕು ಇರುತ್ತವೆ. ಇದು ದೇಹದಿಂದ ಕೆಟ್ಟ ಕೊಲೆಸ್ಟ್ರಾಲ್ (Cholesterol)  ಅನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

5. ಪ್ರತಿದಿನ ಉತ್ತಮ ನಿದ್ರೆ ಮಾಡಿ :
ಹೃದಯವನ್ನು ಸುರಕ್ಷಿತವಾಗಿರಿಸಲು ಉತ್ತಮ ನಿದ್ರೆ ಮಾಡುವುದು ಕೂಡಾ ಅಗತ್ಯವಾಗಿದೆ. ನೀವು 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಿದರೆ ಫಿಟ್ ಆಗಿರುತ್ತೀರಿ. ರಾತ್ರಿ 10 ಗಂಟೆಯ ಮೊದಲೇ ಮಲಗುವ ಅಭ್ಯಾಸ ಇಟ್ಟುಕೊಳ್ಳಿ. ಎಷ್ಟು ಹೊತ್ತು ಮಲಗುತ್ತೀರಿ ಎನ್ನುವುದು ಕೂಡಾ ಆರೋಗ್ಯ ಕಾಪಾಡುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.  

 

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಈ ಪ್ರಿಸ್ಕ್ರಿಪ್ಷನ್‌ಗಳನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News