Corona Single Dose Vaccine: Sputnik Light ತುರ್ತು ಬಳಕೆಗೆ DCGI ಅನುಮೋದನೆ
Coronavirus India Latest Updates - ಭಾರತದಲ್ಲಿ ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ COVID-19 ಲಸಿಕೆಯ ತುರ್ತು ಬಳಕೆಗೆ DCGI ಅನುಮತಿ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ (Union Health Minister) ಡಾ.ಮನ್ಸುಖ್ ಮಾಂಡವಿಯಾ (Mansukha Mandaviya) ಭಾನುವಾರ ಹೇಳಿದ್ದಾರೆ.
Coronavirus India Latest Updates - ಭಾರತದಲ್ಲಿ ಸಿಂಗಲ್ ಡೋಸ್ ಸ್ಪುಟ್ನಿಕ್ ಲೈಟ್ COVID-19 ಲಸಿಕೆಯ ತುರ್ತು ಬಳಕೆಗೆ DCGI ಅನುಮತಿ ನೀಡಿದೆ ಎಂದು ಕೇಂದ್ರ ಆರೋಗ್ಯ ಸಚಿವ (Union Health Minister) ಡಾ.ಮನ್ಸುಖ್ ಮಾಂಡವಿಯಾ (Mansukha Mandaviya) ಭಾನುವಾರ ಹೇಳಿದ್ದಾರೆ. ಇದು ದೇಶದ 9ನೇ ಕೋವಿಡ್ ಲಸಿಕೆಯಾಗಿದೆ (Covid-19 Vaccine) ಎಂದು ಅವರು ಟ್ವೀಟ್ ಮಾಡಿದ್ದಾರೆ. ಇದು ಸಾಂಕ್ರಾಮಿಕ ರೋಗದ ವಿರುದ್ಧ ದೇಶದ ಸಾಮೂಹಿಕ ಹೋರಾಟವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಮಾಂಡವಿಯಾ ಹೇಳಿದ್ದಾರೆ.
ಅಂಗೈಯಲ್ಲಿರುವ ಕೇತು ಪರ್ವತದ ಮೇಲಿನ ಈ ಚಿಹ್ನೆ ಜೀವನದಲ್ಲಿ ಸಾಕಷ್ಟು ಹಣ ತರುತ್ತದೆ
ಡಾ ರೆಡ್ಡೀಸ್ ಲ್ಯಾಬೊರೇಟರೀಸ್ ಪ್ರಕಾರ, ಅರ್ಜೆಂಟೀನಾ ಮತ್ತು ರಷ್ಯಾ ಸೇರಿದಂತೆ 29 ದೇಶಗಳಲ್ಲಿ ಸ್ಪುಟ್ನಿಕ್ ಲೈಟ್ ಮಾನ್ಯತೆ ಪಡೆದುಕೊಂಡಿದೆ. ನಂತರ ಹಲವು ಶಿವಾರಸ್ಸುಗಳನ್ನು ಅಂತಿಮ ಅನುಮೋದನೆಗಾಗಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಕಳುಹಿಸಲಾಗಿತ್ತು ಎಂದು ಹೇಳಿದೆ.
ಇದನ್ನೂ ಓದಿ-Lucky Zodiac Girls: ಈ ಮೂರು ರಾಶಿಗಳ ಯುವತಿಯರು ತನ್ನ ಸಂಗಾತಿಯ ಭಾಗ್ಯ ಬೆಳಗುತ್ತಾರೆ
ಈ ವ್ಯಾಕ್ಸಿನ್ ಲಾಭವೇನು?
ರಷ್ಯಾ ಅನುಮೋದಿಸಿದ ಸ್ಪುಟ್ನಿಕ್ ವಿ ಲಸಿಕೆಯ ಲಘು ಆವೃತ್ತಿ ಒಂದೇ ಡೋಸ್‌ನಲ್ಲಿ ಕರೋನಾ ವೈರಸ್ ಅಪಾಯಕ್ಕೆ ಅಂತ್ಯಹಾಡುತ್ತದೆ. ಇದುವರೆಗೆ, ಇದಕ್ಕಾಗಿ ಎರಡು ಡೋಸ್ ಲಸಿಕೆಗಳನ್ನು ಅನ್ವಯಿಸುವ ಅವಶ್ಯಕತೆ ಇತ್ತು. ಸ್ಪುಟ್ನಿಕ್ ಲೈಟ್ ಆವೃತ್ತಿಯು ಕರೋನಾ ವೈರಸ್ ವಿರುದ್ಧ 79.4% ಪರಿಣಾಮಕಾರಿ ಎಂದು ಕಂಡುಬಂದಿದೆ. ಇದರ ಬೆಲೆ $10 ಕ್ಕಿಂತ ಕಡಿಮೆ ಅಂದರೆ ಸುಮಾರು ₹730 ಆಗಿದೆ.
ಇದನ್ನೂ ಓದಿ-'ಜಾಗತಿಕ ಬೆಳವಣಿಗೆಗಳಿಂದ ಉಂಟಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಿದ್ಧ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.