Palmistry: ಅಂಗೈಯಲ್ಲಿರುವ ಕೇತು ಪರ್ವತದ ಮೇಲಿನ ಈ ಚಿಹ್ನೆ ಜೀವನದಲ್ಲಿ ಸಾಕಷ್ಟು ಹಣ ತರುತ್ತದೆ, ನಿಮ್ಮ ಕೈಯಲ್ಲಿದೆಯಾ?

Palmistry Palm Ketu Mountain - ಹಸ್ತಸಾಮುದ್ರಿಕ(Palmistry) ಶಾಸ್ತ್ರದಲ್ಲಿ, ಹಸ್ತದ ರೇಖೆಗಳು ಮತ್ತು ಚಿಹ್ನೆಗಳ ಜೊತೆಗೆ, ಪರ್ವತಗಳಿಗೂ ಸಹ ವಿಶೇಷ ಪ್ರಾಮುಖ್ಯತೆ ಇದೆ. ಹಸ್ತದಲ್ಲಿನ ಕೇತು ಪರ್ವತವು (Ketu Mountain) ಸಂತೋಷ, ಮಕ್ಕಳು, ಹಣ, ಕಲೆ ಇತ್ಯಾದಿಗಳ ಬಗ್ಗೆ ಹೇಳುತ್ತದೆ. ಈ ಪರ್ವತದ ಮೇಲಿರುವ ಕೆಲ ವಿಶೇಷ ಚಿಹ್ನೆಗಳು ಶುಭ ಸಂಕೇತಗಳನ್ನು ನೀಡಿದರೆ, ಕೆಲವು ಜೀವನದಲ್ಲಿ ತೊಂದರೆಗಳು ಮತ್ತು ಆರ್ಥಿಕ ನಷ್ಟಕ್ಕೆ ಕಾರಣವಾಗಿವೆ.

Written by - Nitin Tabib | Last Updated : Feb 6, 2022, 09:16 PM IST
  • ಇಂತಹ ಜನರು ಜೀವನದಲ್ಲಿ ಸಾಕಷ್ಟು ಹಣ ಸಂಪಾದಿಸುತ್ತಾರೆ
  • ಕೇತು ಪರ್ವತದ ಮೇಲಿನ ತ್ರಿಭುಜಾಕೃತಿ ಶುಭ ಸಂಕೇತ.
  • ನೌಕರಿಯಲ್ಲಿ ಇವರು ಉನ್ನತ ಸ್ಥಾನಕ್ಕೆ ಏರುತ್ತಾರೆ
Palmistry: ಅಂಗೈಯಲ್ಲಿರುವ ಕೇತು ಪರ್ವತದ ಮೇಲಿನ ಈ ಚಿಹ್ನೆ ಜೀವನದಲ್ಲಿ ಸಾಕಷ್ಟು ಹಣ ತರುತ್ತದೆ, ನಿಮ್ಮ ಕೈಯಲ್ಲಿದೆಯಾ? title=
Palmistry Palm Ketu Mountain (File Photo)

ನವದೆಹಲಿ: ಹಸ್ತರೇಖಾ ಸಾಮುದ್ರಿಕದಲ್ಲಿ ಅಂಗೈಯಲ್ಲಿನ ರೇಖೆಗಳು, ಚಿಹ್ನೆಗಳ ಜೊತೆಗೆ ಪರ್ವತಗಳಿಗೂ ಕೂಡ ವಿಶೇಷ ಮಹತ್ವವಿದೆ. ಅಂಗೈಯಲ್ಲಿನ ಕೇತು ಪರ್ವತ (Ketu Mountain In Palm) ಸುಖ, ಸಂತಾನ, ಹಣ, ಕಲೆ ಇತ್ಯಾದಿಗಳ ಸಂಕೇತಗಳನ್ನು ನೀಡುತ್ತದೆ. ಈ ಪರ್ವತದ ಮೇಲೆ ನಿರ್ಮಾಣಗೊಂಡ ಕೆಲ ವಿಶೇಷ ಚಿಹ್ನೆಗಳು ಶುಭ ಸಂಕೇತಗಳನ್ನು ನೀಡಿದರೆ, ಕೆಲ ಚಿಹ್ನೆಗಳು ಅಶುಭ ಸಂಕೇತಗಳನ್ನು ನೀಡುತ್ತವೆ ಮತ್ತು ಜೀವನದಲ್ಲಿ ಕಷ್ಟಗಳನ್ನು ತರುತ್ತವೆ. ಹೀಗಿರುವಾಗ ಅಂಗೈಯಲ್ಲಿರುವ ಈ ಕೇತು ಪರ್ವತದ ಮೇಲಿರುವ ಚಿಹ್ನೆಗಳು ಯಾವ ಯಾವ ಸಂಕೇತಗಳನ್ನು ನೀಡುತ್ತವೆ ತಿಳಿದುಕೊಳ್ಳೋಣ ಬನ್ನಿ.

ಕೇತು ಪರ್ವತದ ಮೇಲೆ ನಕ್ಷತ್ರದ ಚಿಹ್ನೆ(Star Mark On Ketu Mountain)
ಹಸ್ತಸಾಮುದ್ರಿಕ ಶಾಸ್ತ್ರದ (Palmistry) ಪ್ರಕಾರ, ಹಸ್ತದ ಕೇತು ಪರ್ವತವು ಶಿಕ್ಷಣ ಮತ್ತು ಮಕ್ಕಳಿಗೆ ಸಂಬಂಧಿಸಿದ ಹಲವು ಸಂಕೇತಗಳನ್ನು ನೀಡುತ್ತದೆ. ಕೇತು ಪರ್ವತದ ಮೇಲೆ ನಕ್ಷತ್ರ ಚಿಹ್ನೆ ಇರುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತಮ್ಮ ಅಂಗೈಯಲ್ಲಿ ಈ ಗುರುತು ಹೊಂದಿರುವ ಜನರು ಧಾರ್ಮಿಕ ಸ್ವಭಾವದವರು. ಅಂಥವರಿಗೆ ಧಾರ್ಮಿಕ ಗ್ರಂಥಗಳಲ್ಲಿ ವಿಶೇಷ ಆಸಕ್ತಿ ಇರುತ್ತದೆ. ಅಲ್ಲದೆ ಅವರು ಪ್ರಸಿದ್ಧ ಜ್ಯೋತಿಷಿಗಳಾಗುತ್ತಾರೆ. ಇದಲ್ಲದೆ, ಈ ಗುರುತು ಧನಲಾಭವನ್ನು ಸೂಚಿಸುತ್ತದೆ. ಇಂತಹ ಜನರು ವಿಶೇಷ ಕಲೆಗಳ ಮೂಲಕ ಹಣವನ್ನು ಗಳಿಸುತ್ತಾರೆ.

ಒಂದಕ್ಕಿಂತ ಹೆಚ್ಚು ನಕ್ಷತ್ರಗಳು ಏನನ್ನು ಸೂಚಿಸುತ್ತವೆ?
ಸಾಮಾನ್ಯವಾಗಿ ಕೇತು ಪರ್ವದದ ಮೇಲೆ ಒಂದಕ್ಕಿಂತ ಅಧಿಕ ನಕ್ಷತ್ರಗಳಿರುವುದು ಅಶುಭ  ಎಂದು ಹೇಳಾಗುತ್ತದೆ. ಇಂತಹ ಸಂದರ್ಭದಲ್ಲಿ ಸಂತಾನದಿಂದ ಕಷ್ಟ ಅಥವಾ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಆದರೆ, ಆರಂಭಿಕ 10 ವರ್ಷಗಳವರೆಗೆ ಮಾತ್ರ ಈ ಸಮಸ್ಯೆ ಇರುತ್ತವೆ ನಂತರ  ಅವು ನಿವಾರಣೆಯಾಗುತ್ತವೆ.

ಕೇತು ಪರ್ವತದ ಮೇಲೆ ಕ್ರಾಸ್ ಚಿಹ್ನೆ (Cross On Ketu Mountain)
ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ಕೇತು ಪರ್ವತದ ಮೇಲೆ ಕ್ರಾಸ್ ಚಿಹ್ನೆ ಅಶುಭ ಸಂಕೇತ. ಯಾರ ಅಂಗೈಯಲ್ಲಿ ಈ ರೀತಿ ಇರುತ್ತದೆಯೋ ಅವರ ಶಿಕ್ಷಣ ಪೂರ್ಣಗೊಳ್ಳುವುದಿಲ್ಲ. ಒಂದು ವೇಳೆ ಕೇತು ಪರ್ವತದ ಮೇಲೆ ಕ್ರಾಸ್ ಚಿಹ್ನೆ ಇರುವವರು ವಾಹನ ಚಲಾಯಿಸುವ ವೇಳೆ ಜಾಗ್ರತೆ ವಹಿಸಬೇಕು. 

ಇದನ್ನೂ ಓದಿ-Corona ಬಹು ರೂಪಾಂತರಿ ವಿರೋಧಿ ಲಸಿಕೆ ರೆಡಿ ! ಭಾರತೀಯ ವಿಜ್ಞಾನಿಗಳ ಮತ್ತೊಂದು ಮಹತ್ತರ ಸಾಧನೆ

ಕೇತು ಪರ್ವತದ ಮೇಲೆ ತ್ರಿಭುಜಾಕೃತಿ (Triangle On Ketu Mountain)
ಕೇತು ಪರ್ವತದ ಮೇಲೆ ಸ್ಪಷ್ಟ ಹಾಗೂ ಶುಭ್ರವಾದ ತ್ರಿಭುಜಾಕೃತಿ ಇದ್ದರೆ ಅದನ್ನು ಶುಭ ಎಂದು ಪರಿಗಣಿಸಲಾಗುತ್ತದೆ. ಈ ಜನರಿಗೆ ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಕೊರತೆ ಎದುರಾಗುವುದಿಲ್ಲ. ಈ ಜನರು ರಾಜಕೀಯ ರಂಗದಲ್ಲಿಯೂ ಕೂಡ ಉನ್ನತ ಮಟ್ಟಕ್ಕೆ ಹೋಗುತ್ತಾರೆ. ಆದರೆ, ಕೇತು ಪರ್ವತದ ಮೇಲೆ ಏಕಕಾಲಕ್ಕೆ ಎರಡು ತ್ರಿಭುಜಾಕೃತಿಗಳು ಇರುವುದು ಅಶುಭ ಸಂಗತಿ. ಈ ಜನರು ಆರ್ಥಿಕವಾಗಿ ತುಂಬಾ ಕಷ್ಟ ಅನುಭವಿಸುತ್ತಾರೆ. ಹಲವು ಭಾರಿ ಜೀವನದಲ್ಲಿ ದುರ್ಘಟನೆಯ ಸ್ಥಿತಿ ಉದ್ಭವಿಸುತ್ತದೆ. ಒಂದು ವೇಳೆ ಕೇತು ಪರ್ವತದ ಮೇಲೆ ಇರುವ ತ್ರಿಭುಜಾಕ್ರುತಿಯನ್ನು ಯಾವುದೋ ಒಂದು ಗೆರೆ ಕತ್ತರಿಸಿದರೆ, ಅಂತಹ ಜನರು ಜೀವನದಲ್ಲಿ ತುಂಬಾ ಹಣವನ್ನು ಸಂಪಾದಿಸುತ್ತಾರೆ. ಆದರೆ, ಅಷ್ಟೇ ವೇಗದಲ್ಲಿ ಇವರು ವ್ಯರ್ಥ ಹಣ ವೆಚ್ಚ ಮಾಡುತ್ತಾರೆ.

ಇದನ್ನೂ ಓದಿ-Lucky Zodiac Girls: ಈ ಮೂರು ರಾಶಿಗಳ ಯುವತಿಯರು ತನ್ನ ಸಂಗಾತಿಯ ಭಾಗ್ಯ ಬೆಳಗುತ್ತಾರೆ

(Disclaimer: ಇಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ.

ಇದನ್ನೂ ಓದಿ-ಆಯುಷ್ಮಾನ್ ಭಾರತ್ ಗೋಲ್ಡನ್ ಕಾರ್ಡ್ ತಯಾರಿಸುವುದು ಹೇಗೆ? ಸರ್ಕಾರ ನೀಡುತ್ತಿದೆ ಭಾರಿ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News