ಬೀಜಿಂಗ್: ಕೊರೊನಾದ ಹೊಸ ರೂಪಾಂತರ ವೈರಸ್(New Corona Variant) ಭೀತಿಯ ಮಧ್ಯೆ ಚೀನಾದ ಹೆಚ್ಚಿನ ಭಾಗಗಳ ಮೇಲೆ ಲಾಕ್ ಡೌನ್ ರೀತಿಯ ನಿರ್ಬಂಧ ಹೇರಲಾಗಿದೆ. ಇದಕ್ಕೆ ಕಾರಣ ಹೊಸ ಅಧ್ಯಯನದಲ್ಲಿ ನೀಡಲಾಗಿರುವ ಎಚ್ಚರಿಕೆ. ಇದರಲ್ಲಿ ಕೋವಿಡ್-19 ನಿರ್ಬಂಧಗಳನ್ನು ಏನಾದರೂ ತೆಗೆದುಹಾಕಿದರೆ ಚೀನಾವು ಸಾಂಕ್ರಾಮಿಕ ರೋಗದ ‘ಭಯಾನಕ ಪರಿಸ್ಥಿತಿ’ ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ. ಚೀನಾ(China)ದಲ್ಲಿ ಪ್ರತಿದಿನ 6.30 ಲಕ್ಷಕ್ಕೂ ಹೆಚ್ಚು ಸೋಂಕು ಪ್ರಕರಣಗಳು ವರದಿಯಾಗಬಹುದು ಎಂದು ಹೇಳಲಾಗುತ್ತಿದೆ. ಹೀಗಾಗಿ ಡ್ರ್ಯಾಗನ್ ದೇಶವು ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.


COMMERCIAL BREAK
SCROLL TO CONTINUE READING

ಚೀನಾದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಹಾವಳಿ


ಚೀನಾ ಇತರ ದೇಶಗಳಂತೆ ಪ್ರಯಾಣ ನಿಷೇಧ ತೆಗೆದುಹಾಕಿದರೆ ಮತ್ತು ಕೊರೊನಾ ವೈರಸ್(CoronaVirus)ಸೋಂಕಿನ ಹರಡುವಿಕೆಗೆ ಶೂನ್ಯ ಸಹಿಷ್ಣುತೆಯ ವಿಧಾನವನ್ನು ಕೈಬಿಟ್ಟರೆ ದೇಶದಲ್ಲಿ ಪ್ರತಿದಿನ 6.30 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಬಹುದು ಎಂದು ಪೀಕಿಂಗ್ ವಿಶ್ವವಿದ್ಯಾಲಯದ ತಜ್ಞರ ವರದಿ ಹೇಳಿದೆ.  ‘ತೀವ್ರ ರೋಗ ಹರಡುವ ಸಾಧ್ಯತೆ ಇದ್ದು, ಇದರ ಹೊರೆಯನ್ನು ವೈದ್ಯಕೀಯ ವ್ಯವಸ್ಥೆಯೇ ಹೊರಲು ಸಾಧ್ಯವಿಲ್ಲ’ ಅಂತಾ ಮೌಲ್ಯಮಾಪನದಿಂದ ತಿಳಿದುಬಂದಿದೆ’ ಎಂದು ವರದಿ ಹೇಳಿದೆ. ಚೀನಾದಲ್ಲಿ ಶನಿವಾರ 23 ಹೊಸ ಕೋವಿಡ್-19(COVID 19) ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 20 ಪ್ರಕರಣಗಳು ಇತರ ದೇಶಗಳಿಂದ ಬಂದಿವೆ ಮತ್ತು ಬೀಜಿಂಗ್ ಸೇರಿದಂತೆ ಇತರ ನಗರಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ.


ಇದನ್ನೂ ಓದಿ: 21st Indo-Russia Annual Summit: ಡಿಸೆಂಬರ್ 6 ಕ್ಕೆ ಭಾರತಕ್ಕೆ ರಷ್ಯಾದ ಅಧ್ಯಕ್ಷ ಪುಟಿನ್ ಭೇಟಿ


ಚೀನಾದ ಸಿದ್ಧತೆ ಪರಿಪೂರ್ಣವಾಗಿಲ್ಲ


ಕೋವಿಡ್-19ರ ಮೊದಲ ಪ್ರಕರಣವು 2019ರ ಕೊನೆಯಲ್ಲಿ ಚೀನಾದ ವುಹಾನ್ ನಗರ(Wuhan City)ದಲ್ಲಿ ಪತ್ತೆಯಾಗಿತ್ತು. ಆದರೆ ಜಗತ್ತಿಗೆ ಸಾಂಕ್ರಾಮಿಕ ರೋಗವು ಹರಡುವ ಮೊದಲು ಮಾರಣಾಂತಿಕ ವೈರಸ್ ಸಮಸ್ಯೆ ಎದುರಿಸಲು ಚೀನಾ ಅಗತ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲ. ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಪ್ರಕಾರ, ಚೀನಾದಲ್ಲಿ ಇದುವರೆಗೆ 98,631 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು, 4,636 ರೋಗಿಗಳು ಸಾವನ್ನಪ್ಪಿದ್ದಾರೆ. ಪ್ರಸ್ತುತ 785 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಪರಿಣಾಮಕಾರಿ ವ್ಯಾಕ್ಸಿನೇಷನ್ ಮತ್ತು ವಿಶೇಷ ಚಿಕಿತ್ಸೆ ಇಲ್ಲದೆ ಎಲ್ಲಾ ಸಂದರ್ಶಕರಿಗೆ(foreigners) ಪ್ರತ್ಯೇಕತೆಯನ್ನು ವ್ಯವಸ್ಥೆ ಮಾಡಲು ಚೀನಾ ಸಿದ್ಧವಾಗಿಲ್ಲ’ವೆಂದು ಪೀಕಿಂಗ್ ವಿಶ್ವವಿದ್ಯಾಲಯದ ನಾಲ್ವರು ತಜ್ಞರು ಹೇಳಿದ್ದಾರೆ.


ಪ್ರಸ್ತುತ ಈ ನಿಯಮಗಳು ಚೀನಾದಲ್ಲಿವೆ


ಪ್ರಸ್ತುತ ವಿದೇಶಗಳಿಂದ ಚೀನಾಕ್ಕೆ ಬರುವವರು ಗೊತ್ತುಪಡಿಸಿದ ಹೋಟೆಲ್‌ಗಳಲ್ಲಿ 21 ದಿನಗಳ ಕಾಲ ಪ್ರತ್ಯೇಕವಾಗಿರಬೇಕಾಗುತ್ತದೆ. ಆಗಸ್ಟ್‌ ನಿಂದ ಅಮೆರಿಕ, ಬ್ರಿಟನ್, ಇಸ್ರೇಲ್, ಸ್ಪೇನ್ ಮತ್ತು ಫ್ರಾನ್ಸ್‌ ನ ಡೇಟಾವನ್ನು ವಿಶ್ಲೇಷಿಸುವ ಮೂಲಕ ಚೀನಾ(COVID 19 Pandemic) ಈ ದೇಶಗಳಂತಹ ತಂತ್ರವನ್ನು ಅಳವಡಿಸಿಕೊಂಡರೆ ಅದರ ಪರಿಣಾಮ ಏನಾಗಬಹುದೆಂದು ನಿರ್ಣಯಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದಾರೆ. ಆಗಸ್ಟ್‌ ನಲ್ಲಿ ಈ ಎಲ್ಲಾ ದೇಶಗಳಲ್ಲಿ ವ್ಯಾಕ್ಸಿನೇಷನ್ ಪ್ರಮಾಣವು ಚೀನಾಕ್ಕಿಂತ ಹೆಚ್ಚಿತ್ತು. ಸಾಂಕ್ರಾಮಿಕ ರೋಗವನ್ನು ಎದುರಿಸಲು ಚೀನಾ ಕೂಡ ಅಮೆರಿಕದ ತಂತ್ರವನ್ನು ಅಳವಡಿಸಿಕೊಂಡರೆ ದೈನಂದಿನ ಪ್ರಕರಣಗಳ ಸಂಖ್ಯೆ 6,37,155 ಆಗಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಆದರೆ ಆಗಸ್ಟ್‌ ನಲ್ಲಿ ಪ್ರತಿದಿನ 1,50,098 ಪ್ರಕರಣಗಳು ಕಂಡುಬರುತ್ತಿವೆ.


ಇದನ್ನೂ ಓದಿ: ಓಮಿಕ್ರಾನ್ 'ಎಚ್ಚರಿಕೆಯ ಗಂಟೆ' ಯಾಗಿರಬಹುದು: WHO ವಿಜ್ಞಾನಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.