Nomination Of Omicron: ವಿಶ್ವ ಆರೋಗ್ಯ ಸಂಸ್ಥೆಯು (World Health Organization) ದಕ್ಷಿಣ ಆಫ್ರಿಕಾದಲ್ಲಿ (South Africa) ಕಂಡುಬಂದ ಕರೋನಾದ ಹೊಸ ರೂಪಾಂತರಿಗೆ (Covid Variant) ನಾಮಕರಣ ಮಾಡಿದ್ದು, ಇದೀಗ ಅದನ್ನು 'ಓಮಿಕ್ರಾನ್' (Omicron) ಎಂದು ಕರೆಯಲಾಗುತ್ತದೆ. ಆದರೆ, ಈ ನಾಮಕರಣದೊಂದಿಗೆ ವಿವಾದ ಭುಗಿಲೆದ್ದಿದೆ. ಏಕೆಂದರೆ ವಾಸ್ತವದಲ್ಲಿ ಸಾಂಕ್ರಾಮಿಕ ರೋಗದ ಆರಂಭದಿಂದಲೂ, WHO ಚೀನಾದ ಒತ್ತಡದಲ್ಲಿ ಕೆಲಸ ಮಾಡಿದೆ ಎಂದು ಆರೋಪಿಸಲಾಗಿದೆ, ಆದರೆ ಇದೀಗ ಹೊಸ ರೂಪಾಂತರಿಯ ಹೆಸರಿನಲ್ಲಿ ಗ್ರೀಕ್ ವರ್ಣಮಾಲೆಯ ಎರಡು ಅಕ್ಷರಗಳನ್ನು ಬಿಟ್ಟಿರುವುದು WHO ಕುರಿತು ಮತ್ತೊಮ್ಮೆ ಪ್ರಶ್ನೆ ಚಿಹ್ನೆಗೆ ಕಾರಣವಾಗಿದೆ
ವಿಶ್ವ ಆರೋಗ್ಯ ಸಂಸ್ಥೆಯು ಗ್ರೀಕ್ ವರ್ಣಮಾಲೆಯ ಅಕ್ಷರಗಳ ಪ್ರಕಾರ ಕರೋನಾದ ಹೊಸ ರೂಪಾಂತರಿಗಳನ್ನೂ ಹೆಸರಿಸುತ್ತದೆ. ಆದರೆ, ಈ ಬಾರಿ WHO ಗ್ರೀಕ್ ವರ್ಣಮಾಲೆಯ Nu ಮತ್ತು Xi ವರ್ಣಮಾಲೆಗಳನ್ನು ಕೈಬಿಟ್ಟಿದೆ. ಇದುವರೆಗೆ WHO ಸರಳ ಭಾಷೆಯಲ್ಲಿ ವೈರಸ್ ಸ್ವರೂಪಗಳನ್ನು ವಿವರಿಸಲು ವರ್ಣಮಾಲೆಯ ಕ್ರಮವನ್ನು (ಆಲ್ಫಾ, ಬೀಟಾ, ಗಾಮಾ, ಡೆಲ್ಟಾ ಇತ್ಯಾದಿ) ಅನುಸರಿಸುತ್ತಿತ್ತು.
ಟೆಲಿಗ್ರಾಫ್ ಯುಕೆ ಸುದ್ದಿ ಪ್ರಕಾರ, ವಿಶ್ವ ಆರೋಗ್ಯ ಸಂಸ್ಥೆಯ ಮೂಲವೊಂದು WHO ಉದ್ದೇಶಪೂರ್ವಕವಾಗಿ ಎರಡೂ ಲೆಟರ್ ಗಳನ್ನು ಬಿಟ್ಟಿದೆ ಎಂದು ದೃಢಪಡಿಸಿದೆ. ವಾಸ್ತವವಾಗಿ, ಚೀನಾದ ಅಧ್ಯಕ್ಷ ಜಿನ್‌ಪಿಂಗ್ (China President Xi Jinping) ಅವರನ್ನು ಅಪಖ್ಯಾತಿಯಿಂದ ರಕ್ಷಿಸಲು WHO ಈ ಲೆಟರ್ ಗಳನ್ನು ಬಿಟ್ಟಿದೆ. ಈಗ ಗ್ರೀಕ್ ವರ್ಣಮಾಲೆಯ ಕ್ರಮದಲ್ಲಿ ಕಾಣಿಸಿಕೊಂಡ ರೂಪಾಂತರವನ್ನು XI ಎಂದು ಹೆಸರಿಸಬೇಕಿತ್ತು. ಆದರೆ, XI ಚೀನಾದ ಅಧ್ಯಕ್ಷರ ಹೆಸರಿನಲ್ಲಿಯೂ ಕಾಣಿಸಿಕೊಳ್ಳುತ್ತದೆ.
ಇದನ್ನೂ ಓದಿ-ಓಮಿಕ್ರಾನ್ 'ಎಚ್ಚರಿಕೆಯ ಗಂಟೆ' ಯಾಗಿರಬಹುದು: WHO ವಿಜ್ಞಾನಿ
ವರದಿಗಳ ಪ್ರಕಾರ, ಶುಕ್ರವಾರ ನಡೆದ ವಿಶ್ವ ಆರೋಗ್ಯ ಸಂಸ್ಥೆಯ ಸಭೆಯಲ್ಲಿ ಈ ವೈರಸ್‌ಗೆ 'Nu' ಎಂಬ ಹೆಸರನ್ನು ನೀಡುವುದಿಲ್ಲ ಎಂದು ನಿರ್ಧರಿಸಲಾಯಿತು ಏಕೆಂದರೆ ಜನರು ಅದನ್ನು 'ನ್ಯೂ' ಎಂದು ಪರಿಗಣಿಸುವ ಸಾಧ್ಯತೆ ಇದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಗೊಂದಲದ ಅಪಾಯವಿರುತ್ತದೆ. ಇದರ ನಂತರ XI ಯನ್ನು ತೊರೆಯಲು ನಿರ್ಧರಿಸಲಾಯಿತು ಏಕೆಂದರೆ ಅದು ನಿರ್ದಿಷ್ಟ ಪ್ರದೇಶದ ಅಪಖ್ಯಾತಿಯ ಭಯ ಇತ್ತು.
ಇದನ್ನೂ ಓದಿ-Dengue ನಿಂದ ಸಿಗಲಿದೆ ಶಾಶ್ವತ ಮುಕ್ತಿ! ಸೊಳ್ಳೆಗಳೇ ನಿಮ್ಮನ್ನು ಡೆಂಗ್ಯೂನಿಂದ ರಕ್ಷಿಸಲಿವೆ
ಶುಕ್ರವಾರವೇ, WHO ಕರೋನಾದ B.1.1.529 ರೂಪಾಂತರವನ್ನು 'ವೇರಿಯಂಟ್ ಆಫ್ ಕನ್ಸರ್ನ್ ' ಎಂದು ಕರೆದಿದೆ. ಈ ರೂಪಾಂತರಿಯ ಮೊದಲ ಪ್ರಕರಣವು ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿದೆ. ಆದರೆ, ಪ್ರಸ್ತುತ ಅದರ ಪ್ರಕರಣಗಳು ಹಾಂಗ್ ಕಾಂಗ್, ಇಸ್ರೇಲ್ ಮತ್ತು ಬೋಟ್ಸ್ವಾನಾದಲ್ಲಿ ಕಂಡುಬಂದಿವೆ. WHO ಪ್ರಕಾರ, ಈ ರೂಪಾಂತರವು ಬಹಳ ವೇಗವಾಗಿ ಹರಡುತ್ತದೆ. ಅದರ ನಿಜವಾದ ಅಪಾಯಗಳು ಇನ್ನೂ ಖಚಿತವಾಗಿಲ್ಲ. ಈ ರೂಪಾಂತರವು ಮರು-ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಪ್ರಸ್ತುತ ದೊರೆತ ಪುರಾವೆಗಳು ಸೂಚಿಸುತ್ತವೆ.
ಇದನ್ನೂ ಓದಿ-Alert! ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಹೊಸ ಕೊರೊನಾ ರೂಪಾಂತರಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.