ನವದೆಹಲಿ: Coronavirus Airborne - ಕೊರೊನಾ ವೈರಸ್ ಮಹಾಮಾರಿ ಇಡೀ ವಿಶ್ವಾದ್ಯಂತ ಭಾರಿ ಹಾನಿಯನ್ನುಂಟು ಮಾಡುತ್ತಿದೆ. ಈ ಮಹಾಮಾರಿಯನ್ನು ತಡೆಯಲು ಇದುವರೆಗೆ ಮಾಡಿದಂತಹ ಎಲ್ಲ ಪ್ರಯತ್ನಗಳು ಪರಿಪೂರ್ಣ ಎಂದು ಸಾಬೀತಾಗುತ್ತಿಲ್ಲ. ಈ ಮಧ್ಯೆ ಕೊರೊನಾ ಹರಡುವಿಕೆಗೆ (Coronavirus Transmission)ಇತ್ತೀಚಿಗೆ ಹೊರಬಂದ ಕಾರಣವೊಂದು ತುಂಬಾ ಭಯ ಹುಟ್ಟಿಸಿದೆ. ಇತ್ತೀಚೆಗಷ್ಟೇ ಈ ಕುರಿತು ವರದಿಯೊಂದನ್ನು ನೀಡಿದ್ದ ಲ್ಯಾನ್ಸೆಟ್ (Lancet Journal Report), ಕೊರೊನಾ ವೈರಸ್ ಗಾಳಿಯಿಂದ ಹರಡುತ್ತಿದೆ ಎಂದಿದೆ. ಈ ಕಾರಣದ ಮುಂದೆ ಇತರ ಎಲ್ಲ ಕಾರಣಗಳು ಸಣ್ಣ ಕಾರಣಗಳು ಎಂದು ಸಾಬೀತಾಗುವಂತೆ ತೋರುತ್ತಿದೆ. ಅದರಲ್ಲಿ ವಿಶೇಷವಾಗಿ ಡ್ರಾಪ್ ಲೆಟ್ ಥಿಯರಿ ಜನರಲ್ಲಿ ಮತ್ತಷ್ಟು ಆತಂಕ ನಿರ್ಮಾಣ ಮಾಡಿದೆ.


COMMERCIAL BREAK
SCROLL TO CONTINUE READING

ಭಯವನ್ನು ತೊಡೆದುಹಾಕುತ್ತಿರುವ ತಜ್ಞರು
ಭಾರತದಲ್ಲಿನ ಕೊರೊನಾ ವೈರಸ್ ನ ಎರಡನೇ ಅಲೆ, ಮೊದಲನೆಯ ಅಲೆಗಿಂತ ಅಪಾಯಕಾರಿ ಎಂದೇ ಭಾವಿಸಲಾಗುತ್ತಿದೆ. ಏತನ್ಮಧ್ಯೆ ಗಾಳಿಯಲ್ಲಿ ತೇಲಾಡುವ ಕೊರೊನಾ ಸುದ್ದಿಗಳು (Coronavirus Latest Study) ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿವೆ. ಹೀಗಿರುವಾಗ ಅಮೇರಿಕಾದ ವೈದ್ಯರೊಬ್ಬರು ಜನಜಾಗೃತಿ ಅಭಿಯಾನವೊಂದನ್ನು ನಡೆಸುತ್ತಿದ್ದಾರೆ. ಹೌದು, ಕೊರೊನಾ ಗಾಳಿಯಿಂದ ಹರಡುತ್ತಿದೆ ಎಂದು ಲ್ಯಾನ್ಸೆಟ್ ನೀಡಿರುವ ವರದಿಯಿಂದ (Coronavirus Research) ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ನ ಡಾ. ಕಹೀಂ ಯೂನಸ್ ಅವರ ಅಭಿಪ್ರಾಯವಾಗಿದೆ. ಕೊವಿಡ್ 19 ಹನಿಗಳಿಂದ ಅಂದರೆ ಡಾಪ್ ಲೆಟ್ಸ್ ಗಳಿಂದ ಗಾಳಿಗೆ ಪಸರಿಸುತ್ತದೆ ಎಂಬುದು ಈಗಾಗಲೇ ಜನರಿಗೆ ಮನವರಿಕೆಯಾಗಿದೆ.


Coronavirus) ಹರಡುತ್ತದೆ ಎಂದರೆ ಇಡೀ ಗಾಳಿಯೇ ಸೋಂಕಿತವಾಗಿದೆ ಎಂದು ಅರ್ಥೈಸುವುದು ತಪ್ಪು. ಈ ವೈರಸ್ ಗಾಳಿಯಲ್ಲಿ ಸಾಕಷ್ಟು ಹೊತ್ತು ಇರುತ್ತದೆ ಮತ್ತು ಇದರಿಂದಲೂ ಕೂಡ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂಬುದು ಇದರ ಅರ್ಥ ಎಂದು ತಜ್ಞರು ಹೇಳಿದ್ದಾರೆ.


ಇದನ್ನೂ ಓದಿ- ಒಣಕೆಮ್ಮು ಟೆನ್ಶನ್ ಬಿಡಿ. ಟ್ರೈ ಮಾಡಿ ನೋಡಿ ಈ ಐದು ಮನೆಮದ್ದು.


ಯಾವುದೇ ಶುಲ್ಕ ಇಲ್ಲದೆ ಸಲಹೆ ನೀಡಿ ರಾಮಬಾಣ ಉಪಾಯ
ಡಾ. ಫಯೀಮ್ ಯೂನಸ್ ಸಾಮಾಜಿಕ ಮಾಧ್ಯಮಭಾರಿ ಸಕ್ರೀಯರಾಗಿದ್ದಾರೆ.  ಕೊರೊನಾ ಆರಂಭದಿಂದಲೇ ಅವರು ಟ್ವಿಟ್ಟರ್ ಮೇಲೆ ಜನರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಒಳ್ಳೆಯ ಕಾರ್ಯ ಮಾಡುವಲ್ಲಿ ನಿರತರಾಗಿದ್ದಾರೆ. ಭಾರತದಲ್ಲಿ ವೈದ್ಯರನ್ನು ದೇವರು ಎಂದು ಭಾವಿಸಲಾಗುತ್ತದೆ. ಇಂತಹುದರಲ್ಲಿ ಡಾ. ಫಯೀಮ್ ಟ್ವಿಟ್ಟರ್ ನಲ್ಲಿರುವ ತನ್ನ ಹಿಂಬಾಲಕರಿಂದ ಯಾವುದೇ ರೀತಿಯ ಶುಲ್ಕ ಪಡೆಯದೇ, ಗಡಿಗಳ ಭೇದ ತೊರೆದು ಸಲಹೆಗಳನ್ನು ನೀಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಜನರು ಸರಿಯಾದ ನಿಯಮಗಳನ್ನು ಅನುಸರಿಸಿದರೆ ಯಾವುದೇ ಒಬ್ಬ ವ್ಯಕ್ತಿ ತನ್ನ ಮನೆಯಲ್ಲಿಯೇ ಕೊರೊನಾದಂತಹ ಮಹಾಮಾರಿಯನ್ನು ಸೋಲಿಸಬಹುದು ಎಂಬುದು ಡಾ.ಫಯೀಮ್ ಅಭಿಪ್ರಾಯ. ಮನೆಯಲ್ಲಿಯೇ ಸರಿಯಾದ ಸಲಹೆಗಳನ್ನು ಅನುಸರಿಸಿ ಶೇ.80 ರಿಂದ ಶೇ.90 ರಷ್ಟು ಜನರು ಗುಣಮುಖರಾಗಬಹುದು ಎಂಬ ವಿಶ್ವಾಸ ಅವರು ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ-ಕರೋನಾ ರಕ್ಕಸ ನರ್ತನ, ಒಂದೇ ದಿನ 2.60 ಲಕ್ಷ ಜನರಿಗೆ ಸೋಂಕು, ವೈರಸ್ ಮುಷ್ಟಿಯೊಳಗೆ ರಾಜ್ಯ


ಡಾ. ಫಯೀಮ್ ಹೇಳುವ ಪ್ರಕಾರ ಶಂಕಿತ ರೋಗಿಗಳು ನಿತ್ಯ ತಮ್ಮ ಶರೀರದ ತಾಪಮಾನದ ಕುರಿತು ಗಮನಹರಿಸಬೇಕು. ಇದರ ಜೊತೆಗೆ ಶ್ವಾಸದ ವೇಗ, ಶರೀರದ ಆಕ್ಸಿಜನ್ ಮಟ್ಟ, ನಾಡಿ ಬಡಿತ, ರಕ್ತದೊತ್ತಡವನ್ನು ನಿರಂತರವಾಗಿ ಗಮನಿಸುತ್ತಿರಬೇಕು.  ಒಂದು ವೇಳೆ ಶರೀರದ ಆಕ್ಸಿಜನ್ ಮಟ್ಟ ಶೇ.90 ಕ್ಕಿಂತ ಕೆಳಗೆ ಜಾರಿದರೆ ಮತ್ತು ಬಿಪಿ ಸಿಸ್ಟೋಲಿಕ್ 90 ಕ್ಕಿಂತ ಕೆಳಗೆ ಜಾರಿದರೆ ವೈದ್ಯರನ್ನು ಸಂಪರ್ಕಿಸಿ ಎಂದು ಡಾ. ಫಯೀಮ್ ಹೇಳುತ್ತಾರೆ.


ಇದನ್ನೂ ಓದಿ-Medicine for Corona Virus Patients - ಕೊರೊನಾ ಲಕ್ಷಣಗಳಿವೆಯೇ, ಈ 7 ಔಷಧಿಗಳಿಂದ ಉಪಚಾರ ಆರಂಭಿಸಿ ಎಂದ ಸರ್ಕಾರ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.