ಕರೋನಾ ರಕ್ಕಸ ನರ್ತನ, ಒಂದೇ ದಿನ 2.60 ಲಕ್ಷ ಜನರಿಗೆ ಸೋಂಕು, ವೈರಸ್ ಮುಷ್ಟಿಯೊಳಗೆ ರಾಜ್ಯ

ನಿಜಕ್ಕೂ ನಡುಕ ಹುಟ್ಟಿಸುವ ಬೆಳವಣಿಗೆ ಇದು. ಕಳೆದ 24 ಗಂಟೆಗಳಲ್ಲಿ ಎರಡು ಲಕ್ಷ 60 ಸಾವಿರದ 778 ಕೇಸ್ ದಾಖಲಾಗಿವೆ. 1495 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ಗಂಟೆಗೆ 1000 ಜನರಿಗೆ ಕರೋನಾ  ಅಂಟುತ್ತಿದೆ.

Written by - Ranjitha R K | Last Updated : Apr 18, 2021, 09:55 AM IST
  • ಕರೋನಾ ಮಹಾಮಾರಿಯ ರಕ್ಕಸ ತಾಂಡವ ಮುಂದುವರಿದಿದೆ.
  • ರಾಜ್ಯದಲ್ಲಿ ನಿನ್ನೆ ಒಂದೇ ದಿನ 17, 489 ಕರೋನಾ ಕೇಸ್ ದಾಖಲಾಗಿವೆ.
  • ದಿನ ದಿನೇ ಹೊರ ಬರುತ್ತಿರುವ ಅಂಕಿ ಅಂಶಗಳು ತಣ್ಣಗೆ ನಡುಕ ಹುಟ್ಟಿಸುತ್ತಿವೆ.
ಕರೋನಾ ರಕ್ಕಸ ನರ್ತನ, ಒಂದೇ ದಿನ 2.60 ಲಕ್ಷ ಜನರಿಗೆ ಸೋಂಕು, ವೈರಸ್ ಮುಷ್ಟಿಯೊಳಗೆ ರಾಜ್ಯ title=
ಕರೋನಾ ಮಹಾಮಾರಿಯ ರಕ್ಕಸ ತಾಂಡವ ಮುಂದುವರಿದಿದೆ. (file photo)

ನವದೆಹಲಿ : ಕರೋನಾ ಮಹಾಮಾರಿಯ (Corona virus) ರಕ್ಕಸ  ತಾಂಡವ ಮುಂದುವರಿದಿದೆ. ವೈರಸ್ ನ ರಕ್ಕಸ ಬಾಯಿ ಸಂಪೂರ್ಣ ದೇಶವನ್ನು ಆಪೋಶನ ತೆಗೆದುಕೊಳ್ಳುವ  ಎಲ್ಲಾ ಲಕ್ಷಣಗಳು ಕಂಡು  ಬರುತ್ತಿದೆ.  ದಿನ ದಿನೇ ಹೊರ ಬರುತ್ತಿರುವ ಅಂಕಿ ಅಂಶಗಳು  ನಡುಕ ಹುಟ್ಟಿಸುತ್ತಿವೆ. 

ಕಳೆದ 24 ಗಂಟೆಗಳಲ್ಲಿ ಬಂದ ಕೇಸ್ ಎಷ್ಟು..?
ನಿಜಕ್ಕೂ ನಡುಕ ಹುಟ್ಟಿಸುವ ಬೆಳವಣಿಗೆ ಇದು. ಕಳೆದ 24 ಗಂಟೆಗಳಲ್ಲಿ ಎರಡು ಲಕ್ಷ 60 ಸಾವಿರದ 778 ಕೇಸ್ ದಾಖಲಾಗಿವೆ. 1495 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯಲ್ಲಿ ಗಂಟೆಗೆ 1000 ಜನರಿಗೆ ಕರೋನಾ (COVID-19) ಅಂಟುತ್ತಿದೆ. ನಿನ್ನೆ ಒಂದೇ ದಿನ 24 ಸಾವಿರ ಮಂದಿಗೆ ಕರೋನಾ ಸೋಂಕಿದೆ.  ಸತತ ಒಂದು ವಾರದಿಂದ ದಿನಕ್ಕೆ ಸರಿಸುಮಾರು 2 ಲಕ್ಷ ಮಂದಿ ಕರೋನಾ (coronavirus) ದಾಳಿಗೆ ಗುರಿಯಾಗುತ್ತಿದ್ದಾರೆ.

ಇದನ್ನೂ ಓದಿ : "ಕಳೆದ ವರ್ಷ ಒಟ್ಟಾಗಿ ಭಾರತವು ಕೋವಿಡ್ ನ್ನು ಸೋಲಿಸಿತ್ತು"

ಕರ್ನಾಟಕ ಅಲ್ಲೋಲ ಕಲ್ಲೋಲ :
ರಾಜ್ಯದಲ್ಲಿ ನಿನ್ನೆ  ಒಂದೇ ದಿನ 17, 489 ಕರೋನಾ ಕೇಸ್ ದಾಖಲಾಗಿವೆ.   ಇದರಲ್ಲಿ ಶೇ. 70 ರಷ್ಟು ಕೇಸ್ ಗಳು ಬೆಂಗಳೂರು (Bengaluru) ಒಂದರಲ್ಲೇ ರೆಕಾರ್ಡ್ ಆಗಿವೆ.  ಮುಖ್ಯಮಂತ್ರಿ ಯಡಿಯೂರಪ್ಪ (BS Yediyurappa), ಖುದ್ದು ಕರೊನಾ ಸೋಂಕಿತರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದುವೆ  ಇತ್ಯಾದಿ ಸಮಾರಂಭಗಳನ್ನು ನಡೆಸಬೇಕಾದರೆ ಜಿಲ್ಲಾಡಳಿತದ ಅನುಮತಿ ಅನಿವಾರ್ಯ.  ಆದರೆ, ಈಗಾಗಲೇ ಹಾಲ್ ಬುಕ್ ಮಾಡಿರುವವರಿಗೆ ಈ ಷರತ್ತು ಅನ್ವಯವಾಗುವುದಿಲ್ಲ.

ಬೆಂಗಳೂರಿನಲ್ಲಿ ಹೆಲ್ತ್ ಎಮರ್ಜೆನ್ಸಿ:
ರಾಜಧಾನಿಯಲ್ಲಿ ಆರೋಗ್ಯ ಮೂಲ ಸೌಕರ್ಯ ದ ತೀರಾ ಒತ್ತಡ ಬೀಳುತ್ತಿದೆ. ಕೊವಿಡ್ ಕೇಸ್ ಗಳು ರಾಕ್ಷಸ ವೇಗದಲ್ಲಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಕಂಡು ಬರುತ್ತಿದೆ. ಆಮ್ಲಜನಕದ ಕೊರತೆ ಕೂಡಾ ತೀವ್ರ ತರದಲ್ಲಿ ಏರುತ್ತಿದೆ. ರೆಮಿಡಿಸಿವರ್ ವ್ಯಾಕ್ಸಿನ್ (Vaccine) ಲಭ್ಯತೆ ಕೂಡಾ ಕಡಿಮೆಯಾಗಿದೆ. ಆರೋಗ್ಯ ಮೂಲ ಸೌಕರ್ಯ ಕುಸಿದು ಬೀಳದಂತೆ ತಡೆಯಲು ಸರ್ಕಾರ ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ. ವ್ಯಾಕ್ಸಿನೇಶನ್ (vaccination) ಶರವೇಗದಲ್ಲಿ ಸಾಗುತ್ತಿದೆ.  ನೈಟ್ ಕರ್ಫೂ ವಿಧಿಸಲಾಗಿದೆ. ವೈರಸ್ ಸರಪಳಿ ಕಟ್ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕುಂಭಮೇಳದಿಂದ (Kumba Mela) ಹಿಂದಿರುಗುವವರು ಕಡ್ಡಾಯ ಆರ್ ಟಿಪಿಸಿಆರ್ (RT PCR) ಪರೀಕ್ಷೆ ಮಾಡಿಕೊಳ್ಳಬೇಕು. 

ಇದನ್ನೂ ಓದಿ : ದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ ಏಮ್ಸ್ ಮುಖ್ಯಸ್ಥ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News