ವಾಷಿಂಗ್ಟನ್ : ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (American Academy of Pediatrics)ಸೋಮವಾರ ಪ್ರಕಟಿಸಿದ ಹೊಸ ಅಂಕಿ-ಅಂಶಗಳ ಪ್ರಕಾರ, ಮಕ್ಕಳಲ್ಲಿ Covid-19 ಪ್ರಕರಣಗಳು ಎರಡು ವಾರಗಳಲ್ಲಿ 32% ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ನವೆಂಬರ್ 18 ಕ್ಕೆ ಕೊನೆಗೊಳ್ಳುವ ವಾರದಲ್ಲಿ, ಮಕ್ಕಳು ಪ್ರಕರಣಗಳಲ್ಲಿ ಅಸಮಾನ ಪಾಲನ್ನು ಹೊಂದಿದ್ದಾರೆ. ಕಳೆದ ವಾರದಿಂದ ಎಲ್ಲಾ ಹೊಸ COVID -19 ಪ್ರಕರಣಗಳಲ್ಲಿ ಕಾಲು ಭಾಗಕ್ಕಿಂತ ಹೆಚ್ಚು ಮಕ್ಕಳಲ್ಲಿ ಕಂಡು ಬಂದಿದೆ. US ಜನಸಂಖ್ಯೆಯ 22% ದಷ್ಟು ಮಕ್ಕಳಿದ್ದಾರೆ. 


ಇದನ್ನೂ ಓದಿ : 25 ಪೈಸೆ ನಾಣ್ಯ ನಿಮ್ಮ ಬಳಿಯಿದ್ದರೆ ಬರೀ ಒಂದು ಕ್ಲಿಕ್ ಮೂಲಕ ಆಗಬಹುದು ಲಕ್ಷಾಧಿಪತಿ


2020ರ ಆರಂಭದಲ್ಲಿ ಯುಎಸ್‌ನಲ್ಲಿ ದೃಢಪಡಿಸಿದ ಪ್ರಕರಣಗಳಲ್ಲಿ ಮಕ್ಕಳು 3% ಕ್ಕಿಂತ ಕಡಿಮೆಯಿದ್ದರು. ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ, 6.8 ದಶಲಕ್ಷಕ್ಕೂ ಹೆಚ್ಚು ಮಕ್ಕಳಳಲ್ಲಿ ಕೋವಿಡ್ -19 ಗೆ ಪಾಸಿಟಿವ್ ಕಂಡು ಬಂದಿದೆ.  (Covid-19 cases in children) 


ಲಕ್ಷಾಂತರ ಜನರು ಇನ್ನೂ ಲಸಿಕೆ (Covid-19 vaccine) ಹಾಕದಿರುವ ಕಾರಣ, ಪ್ರಕಣ ಹೆಚ್ಚಲು ಕಾರಣವಾಗಿದೆ. ಈ ವೈರಸ್ ಲಸಿಕೆ ಹಾಕದ ಜನರನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ. ಲಸಿಕೆ (Vaccine) ಹಾಕಿದ ಜನರಲ್ಲಿ ಸೋಂಕು ಹರಡುತ್ತದೆ. ಏಕೆಂದರೆ ಯಾವುದೇ ಲಸಿಕೆ 100% ಪರಿಣಾಮಕಾರಿಯಲ್ಲ ಎಂದು ಯುಎಸ್ ರಾಷ್ಟ್ರೀಯ ಅಲರ್ಜಿ ಮತ್ತು ಸಾಂಕ್ರಾಮಿಕ ರೋಗಗಳ ಸಂಸ್ಥೆಯ ನಿರ್ದೇಶಕ ಡಾ.ಆಂಥೋನಿ ಫೌಸಿ, ಹೇಳಿದ್ದಾರೆ. 


ವಯಸ್ಕರಿಗೆ ಹೋಲಿಸಿದರೆ ಮಕ್ಕಳು ಕೋವಿಡ್ -19 ನೊಂದಿಗೆ  (COVID-19 in children) ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇನ್ನೂ ಕಡಿಮೆಯಿದೆ. ಆದರೆ ಕೋವಿಡ್ -19 ಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾದವರಲ್ಲಿ 1.7% ಮತ್ತು 4.0% ರಷ್ಟು ಮಕ್ಕಳು ಇದ್ದಾರೆ. ಇದು ಸಾಂಕ್ರಾಮಿಕದ ಉದ್ದಕ್ಕೂ ತುಲನಾತ್ಮಕವಾಗಿ ಸ್ಥಿರವಾಗಿ ಉಳಿದಿದೆ. 


ಇದನ್ನೂ ಓದಿ : ಡಿಸೆಂಬರ್ 1 ರಿಂದ ದುಬಾರಿಯಾಗಲಿದೆ SBI ವಹಿವಾಟು, ಎಷ್ಟು ಹೆಚ್ಚಾಗಲಿದೆ Charges


ಕೋವಿಡ್ -19 ಪ್ರಕರಣಗಳಲ್ಲಿ 0.00% - 0.25% ಮಕ್ಕಳ ಸಾವು ಸಂಭವಿಸಿದೆ ಎಂದು ವರದಿ ತಿಳಿಸಿದೆ. ಆದರೆ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೋವಿಡ್ -19 ನಿಂದ 939 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ತಿಳಿಸಿದೆ.


ಕೈಸರ್ ಫ್ಯಾಮಿಲಿ ಫೌಂಡೇಶನ್ ನಡೆಸಿದ ಸಮೀಕ್ಷೆಯ ಪ್ರಕಾರ, ಮೂರನೇ ಎರಡರಷ್ಟು ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ನಿರಾಕರಿಸುತ್ತಿದ್ದಾರೆ ಎಂದು ತೋರಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ