ನವದೆಹಲಿ : ಕರೋನ ವೈರಸ್ ಹೊಸ ರೂಪಾಂತರ ಒಮಿಕ್ರಾನ್ (Omicron) ವಿಶ್ವವನ್ನು ತಲ್ಲಣಗೊಳಿಸುತ್ತಿದೆ. ಕರೋನಾ ವೈರಸ್ ನ ಹೊಸ ರೂಪಾಂತರದ (Coronavirus new variant) ಹರಡುವಿಕೆಯನ್ನು ತಡೆಗಟ್ಟಲು ಭಾರತ ಕತಿನ ಕ್ರಮಕ್ಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಪ್ರಯಾಣದ ನಿಯಮಗಳನ್ನು (Travelling rules) ಬಿಗಿಗೊಳಿಸಲು ಪ್ರಾರಂಭಿಸಿದೆ.
ಕೋವಿಡ್ ವೇರಿಯಂಟ್ (Coronavirus new variant) 'ಓಮಿಕ್ರಾನ್' ಪತ್ತೆಯಾದ ಹಿನ್ನೆಲೆಯಲ್ಲಿ ಕೆಲವು ದೇಶಗಳಿಂದ ಆಗಮಿಸುವ ಪ್ರಯಾಣಿಕರು ಹೆಚ್ಚುವರಿ ಕ್ರಮಗಳನ್ನು ಅನುಸರಿಸಬೇಕಾಗಿ ಭಾರತ ಹೇಳಿದೆ. ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ ಬೋಟ್ಸ್ವಾನಾ, ಚೀನಾ (China), ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಸಿಂಗಾಪುರ್ (Singapore) , ಇಸ್ರೇಲ್, ಹಾಂಗ್ ಕಾಂಗ್, ಯುಕೆ ಸೇರಿದಂತೆ ಯುರೋಪ್ ದೇಶಗಳಿಂದ ಆಗಮಿಸುವ ಪ್ರಯಾಣಿಕರು ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.
ಇದನ್ನೂ ಓದಿ : ಅಂತ್ಯ ಸಂಸ್ಕಾರಕ್ಕೆ ತೆರಳುತ್ತಿದ್ದ ವಾಹನಕ್ಕೆ ಟ್ರಕ್ ಡಿಕ್ಕಿ , 18 ಜನರ ದುರ್ಮರಣ
ಈ ರಾಜ್ಯಗಳು ಪ್ರಯಾಣಿಕರಿಗೆ RT-PCR ಕಡ್ಡಾಯ :
ಗುಜರಾತ್ (Gujrat)
1.ಇತರ ದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ಗುಜರಾತ್‌ನ ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಪರೀಕ್ಷೆಗೆ (RTPCR test) ಒಳಪಡಿಸಲಾಗುವುದು. ಯುರೋಪ್, ಯುಕೆ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ, ಬೋಟ್ಸ್ವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ ಮತ್ತು ಹಾಂಗ್ ಕಾಂಗ್‌ನಿಂದ ಆಗಮಿಸುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದೆ.
2.ಈ ದೇಶಗಳಿಂದ ಆಗಮಿಸುವವರು ಏಳು ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ (Home quarantine) ಒಳಗಾಗಬೇಕಾಗುತ್ತದೆ. ಎಂಟನೇ ದಿನದಂದು ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
3. ಸಂಪೂರ್ಣ ಲಸಿಕೆಯನ್ನು (fully vaccinated) ಪಡೆದಿರುವ ಪ್ರಯಾಣಿಕರು ಕೂಡಾ ಆಗಮಿಸಿದ ನಂತರ 14 ದಿನಗಳವರೆಗೆ ಕ್ವಾರಂಟೈನ್‌ಗೆ ಒಳಗಾಗಬೇಕಾಗುತ್ತದೆ.
ಕರ್ನಾಟಕ :
1.ಹೆಚ್ಚಿನ ಗಡಿ ತಪಾಸಣೆಯೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ (International airport) ತಪಾಸಣೆಯನ್ನು ತೀವ್ರಗೊಳಿಸಲಾಗಿದೆ.
2.ಕೇರಳ ಮತ್ತು ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಯನ್ನು ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ : IMD Alert For Heavy Rainfall: 8 ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಮಹಾರಾಷ್ಟ್ರ :
1.ಮಹಾರಾಷ್ಟ್ರವು ದೇಶೀಯ ಪ್ರಯಾಣಿಕರಿಗೆ RT-PCR ನೆಗೆಟಿವ್ ವರದಿ ಅಥವಾ ಸಂಪೂರ್ಣ ವ್ಯಾಕ್ಸಿನೇಷನ್ ಪುರಾವೆಯನ್ನು ಕಡ್ಡಾಯಗೊಳಿಸಿದೆ.
2.ಯಾವುದೇ ಅಂತಾರಾಷ್ಟ್ರೀಯ ಗಮ್ಯಸ್ಥಾನದಿಂದ ಬರುವ ಎಲ್ಲಾ ಪ್ರಯಾಣಿಕರು, ಭಾರತ ಸರ್ಕಾರದ ನಿರ್ದೇಶನಗಳಿಂದ ನಿಯಂತ್ರಿಸಲ್ಪಡುತ್ತಾರೆ ಎಂದು ಸರ್ಕಾರ ಹೇಳಿದೆ.
3. ಪ್ರಯಾಣಿಕರಲ್ಲಿ COVID-19 ಪಾಸಿಟಿವ್ ಕಂಡು ಬಂದರೆ ಅವರ ಮಾದರಿಗಳನ್ನು ಜೀನೋಮ್ ಸಿಕ್ವೆನ್ಸ್ ಗಾಗಿ ಕಳುಹಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.