ನವದೆಹಲಿ: When will the COVID-19 pandemic end: ಕರೋನಾವೈರಸ್ ಎಂಬ ಕಾಣದ ವೈರಸ್ ಕಳೆದ ಎರಡು ವರ್ಷಗಳಿಂದ ಪ್ರಪಂಚದ ಎಲ್ಲ ದೇಶಗಳಲ್ಲಿ ವಿನಾಶವನ್ನುಂಟುಮಾಡುತ್ತಿದೆ ಮತ್ತು ಭಾರತವೂ ಕೂಡ ಇದಕ್ಕೆ ಹೊರತಾಗಿಲ್ಲ. ಕರೋನಾ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದರೂ, ಅದರ ಅಪಾಯವನ್ನು ಇನ್ನೂ ಸಂಪೂರ್ಣವಾಗಿ ಕಡೆಗಣಿಸುವಂತಿಲ್ಲ ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಆರೋಗ್ಯ ತಜ್ಞರು ಕಾಲಕಾಲಕ್ಕೆ ಅದರ ಬಗ್ಗೆ ಹೊಸ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.


COMMERCIAL BREAK
SCROLL TO CONTINUE READING

ಕರೋನಾ ಬಗ್ಗೆ ಕಳವಳಕಾರಿ ವಿಷಯ ಹೇಳಿದ ಡಬ್ಲ್ಯುಎಚ್‌ಒ:
ಕರೋನಾವೈರಸ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization) ನೀಡಿದ ಇತ್ತೀಚಿನ ಮಾಹಿತಿ ನಿರಾಶಾದಾಯಕವಾಗಿದೆ. ಕರೋನಾವನ್ನು ಈಗ ಸಾಂಕ್ರಾಮಿಕ ವರ್ಗದಲ್ಲಿ ಇರಿಸಲಾಗುವುದು ಎಂದು ಡಬ್ಲ್ಯುಎಚ್‌ಒ ಹೇಳಿದೆ. ಏಕೆಂದರೆ ವೈರಸ್ (Coronavirus) ಅಪಾಯ ಇನ್ನೂ ಕಡಿಮೆಯಾಗಿಲ್ಲ. ಸೋಂಕು ಮತ್ತು ಅದರ ಹೊಸ ರೂಪಾಂತರಗಳು ಅಪಾಯವನ್ನು ಹೆಚ್ಚಿಸುತ್ತಿರುವುದರಿಂದ ಇದೀಗ ಪ್ರಪಂಚವು ನಿರ್ಬಂಧಗಳ ನೆರಳಿನಲ್ಲಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆಯಿಂದ ಸ್ಪಷ್ಟವಾಗಿದೆ.


ಇದನ್ನೂ ಓದಿ- Covid-19 Vaccine For Under 12 Years Old Children: 5 ರಿಂದ 12 ವರ್ಷ ವಯಸ್ಸಿನ ಮಕ್ಕಳಿಗೂ ಕರೋನಾ ಲಸಿಕೆ


ಕೊರೋನಾವೈರಸ್ (Coronavirus) ವಿರುದ್ಧದ ಹೋರಾಟದಲ್ಲಿ ವಿಶ್ವದಾದ್ಯಂತ ಜನರು ಹೆಚ್ಚು ಹೆಚ್ಚು ಲಸಿಕೆ (Corona Vaccine) ಪಡೆದಾಗ ಮತ್ತು ರೋಗನಿರೋಧಕ ಶಕ್ತಿಯನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಿದಾಗ, ಕರೋನಾದಿಂದ ಸಾವಿನ ಸಂಖ್ಯೆ ಸ್ವಯಂಚಾಲಿತವಾಗಿ ಕಡಿಮೆಯಾಗುತ್ತದೆ ಎಂದು WHO ಹೇಳಿದೆ. ಇದರೊಂದಿಗೆ, ವೈರಸ್‌ಗೆ ಸಿಲುಕುವ ಜನರ ಸಂಖ್ಯೆಯೂ ಕಡಿಮೆಯಾಗಲು ಪ್ರಾರಂಭವಾಗುತ್ತದೆ. ಈ ಸ್ಥಿತಿಯನ್ನು ತಲುಪಿದ ನಂತರ, ಕರೋನಾವನ್ನು ಸಾಂಕ್ರಾಮಿಕ ವರ್ಗದಿಂದ ತೆಗೆದುಹಾಕಲಾಗುತ್ತದೆ. ಆದರೆ, ಇಂತಹ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ ಎಂದು ಡಬ್ಲ್ಯುಎಚ್‌ಒ ಸ್ಪಷ್ಟಪಡಿಸಿದೆ.


ಮಕ್ಕಳು ಯಾವಾಗ ಲಸಿಕೆ ಪಡೆಯುತ್ತಾರೆ?
ಭಾರತದಲ್ಲಿ ಕರೋನಾ ತಡೆಗಟ್ಟಲು ಲಸಿಕೆ ಹಾಕುವ ಕಾರ್ಯಕ್ರಮ ಅತ್ಯಂತ ವೇಗವಾಗಿ ನಡೆಯುತ್ತಿದೆ ಮತ್ತು ದೇಶದಲ್ಲಿ 75 ಕೋಟಿಗೂ ಹೆಚ್ಚು ಜನರಿಗೆ ಕರೋನಾ ಲಸಿಕೆ ಡೋಸ್ ನೀಡಲಾಗಿದೆ. ಇದರೊಂದಿಗೆ, ದೇಶದಲ್ಲಿ ಮಕ್ಕಳಿಗೆ ಲಸಿಕೆ (Corona Vaccine For Kids) ಹಾಕಲು ಸಿದ್ಧತೆಗಳು ನಡೆಯುತ್ತಿವೆ ಮತ್ತು ತಿಂಗಳ ಅಂತ್ಯದ ವೇಳೆಗೆ, ಮಕ್ಕಳ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ.


ಇದನ್ನೂ ಓದಿ- Corona in Kids: ಮಕ್ಕಳಲ್ಲಿ ಕೋವಿಡ್ -19 ಪ್ರಕರಣಗಳು ಹೆಚ್ಚಳ, ತಜ್ಞರಿಂದ ಎಚ್ಚರಿಕೆ ಸಂದೇಶ..!


ಮಕ್ಕಳ ಲಸಿಕೆಗಾಗಿ ಜೈಡಸ್ ಕ್ಯಾಡಿಲಾದ ಜಯಕೋವ್ ಡಿ ಅನ್ನು ದೇಶದಲ್ಲಿ ಅನುಮೋದಿಸಲಾಗಿದೆ. ಅವರು ಸೆಪ್ಟೆಂಬರ್ ಅಂತ್ಯದ ವೇಳೆಗೆ ಮಕ್ಕಳಿಗೆ ಲಸಿಕೆ ಹಾಕಬಹುದು ಎಂದು ನಿರೀಕ್ಷಿಸಲಾಗಿದೆ. ಇದು ಸಂಭವಿಸಿದಲ್ಲಿ, ಮಕ್ಕಳಿಗೆ ಲಸಿಕೆ ನೀಡುವ ವಿಷಯದಲ್ಲಿ  ಅಮೆರಿಕ, ಬ್ರಿಟನ್ ಮತ್ತು ಕೆನಡಾ ನಂತರ ಭಾರತವು ನಾಲ್ಕನೇ ರಾಷ್ಟ್ರವಾಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.