Coronavirus Indian Variant: ಇದುವರೆಗೆ 44 ದೇಶಗಳಿಗೆ ತಲುಪಿದ Corona ಭಾರತೀಯ ರೂಪಾಂತರಿ, WHO ಹೇಳಿದ್ದೇನು ?
Coronavirus Indian Variant - ಭಾರತದಲ್ಲಿ ಹಾಕಾಕಾರ ಸೃಷ್ಟಿಸಿದ ಕೊರೊನಾ ವೈರಸ್ ನ ಹೊಸ ರೂಪಾಂತರಿ ಇದೀಗ ವಿಶ್ವದ ಅನ್ಯದೇಶಗಳಲ್ಲೂ ಕೂಡ ಪಾದ ಚಾಚುತ್ತಿದೆ ಹಾಗೂ ಇದುವರೆಗೆ WHOನ ಎಲ್ಲ 6 ಕ್ಷೇತ್ರಗಳ 44 ದೇಶಗಳಲ್ಲಿ ಈ ಹೊಸ ರೂಪಾಂತರಿ ವೈರಸ್ ಪತ್ತೆಯಾಗಿದೆ.
ಜಿನೇವಾ (ಸ್ವಿಟ್ಜರ್ಲ್ಯಾಂಡ್): Coronavirus Indian Variant - ಭಾರತದಲ್ಲಿ ಕೊರೊನಾ ವೈರಸ್ ನ ಹಾಹಾಕಾರ ಮುಂದುವರೆದಿದೆ ಹಾಗೂ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಗುರುತಿಸಲ್ಪಟ್ಟಿರುವ ಕೊವಿಡ್-19 ವೈರಸ್ ನ ಹೊಸ ರೂಪಾಂತರಿ ಇದೀಗ ವಿಶ್ವದ ಇತರ ದೇಶಗಳಿಗೂ ಕೂಡ ಹರಡುತ್ತಿದೆ. ಭಾರತದಲ್ಲಿ ಯಾವ ಕೊರೊನಾ ವೈರಸ್ ರೂಪಾಂತರಿಯಿಂದ ಪರಿಸ್ಥಿತಿ ಬಿಗಡಾಯಿಸಿದೆಯೋ, ಇದೀಗ ಆ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
44 ದೇಶಗಳಲ್ಲಿ ದೊರೆತ ಕೊರೊನಾ ವೈರಸ್ ನ ಭಾರತೀಯ ರೂಪಾಂತರಿ
ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಭಾರತದಲ್ಲಿ ಕಳೆದ ವರ್ಷ ಅಕ್ಟೋಬರ್ ನಲ್ಲಿ ಕಂಡು ಬಂದ ಕೊರೊನಾ ವೈರಸ್ ನ ಹೊಸ ರೂಪಾಂತರಿ B.1.617, ಇದೀಗ WHO ನ ಎಲ್ಲ 6 ಕ್ಷೇತ್ರಗಳ 44 ದೇಶಗಳಲ್ಲಿ ಪತ್ತೆಯಾಗಿದ್ದು, ಈ ವೇರಿಯಂಟ್ ನ ಸುಮಾರು 4500 ಹೆಚ್ಚು ಸ್ಯಾಂಪಲ್ ಗಳು ದೊರೆತಿವೆ ಎಂದು ಹೇಳಿದೆ.
ಭಾರತದ ಬಳಿಕೆ ಬ್ರಿಟನ್ ನಲ್ಲಿ ಅತಿ ಹೆಚ್ಚು ಪ್ರಕರಣಗಳ ಪತ್ತೆ
ಕೊರೊನಾ ವೈರಸ್ ನ ಈ ಹೊಸ ಮಾದರಿಯ ಪ್ರಕರಣಗಳು ಭಾರತದ ಬಳಿಕ ಬ್ರಿಟನ್ ನಲ್ಲಿ ಹೆಚ್ಚು ಪತ್ತೆಯಾಗಿವೆ. ಈ ವಾರದ ಆರಂಭದಲ್ಲಿ ಈ ಕುರಿತು ಘೋಷಣೆ ಮಾಡಿದ್ದ WHO, B.1.617 ತನ್ನ ಮ್ಯೂಟೆಶೇನ್ ಹಾಗೂ ವಿಶೇಷತೆಗಳ ಕಾರಣ 'ಚಿಂತೆ ಹೆಚ್ಚಿಸುವ ಒಂದು ಪ್ರಕಾರ'ದ ರೂಪದಲ್ಲಿ ಪರಿಗಣಿಸಲಾಗುವುದು ಎಂದಿತ್ತು. ಇದೇ ಕಾರಣದಿಂದ ಇದನ್ನು ಮೊದಲ ಬಾರಿಗೆ ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾಗಳಲ್ಲಿ ಕೊವಿಡ್-19 (Covid-19)ನ ಇತರ ಮೂರು ವೇರಿಯಂಟ್ ಗಳ ಪಟ್ಟಿಯಲ್ಲಿ ಶಾಮೀಲುಗೊಳಿಸಲಾಗಿತ್ತು.
ಇದನ್ನೂ ಓದಿ- Chinese Vaccine: ಚೀನೀ ಲಸಿಕೆ ಬಳಸಿ ವಿಷಾದಿಸುತ್ತಿದೆ ಈ ದೇಶ
ಹೆಚ್ಚು ಮಾರಕವಾಗಿದೆ ಕೊರೊನಾ ವೈರಸ್ ನ ಭಾರತೀಯ ರೂಪಾಂತರಿ (Coronavirus Indian Variant)
ಭಾರತದ ಈ ಹೊಸ ರೂಪಾಂತರಿಗೆ ವೈಜ್ಞಾನಿಕವಾಗಿ B.1.617 ಎಂದು ಗುರುತಿಸಲಾಗಿದೆ. ಇದರಲ್ಲಿ ಎರಡು ರೀತಿಯ ಮ್ಯೂಟೆಶನ್ (E484Q ಹಾಗೂ L452R)ಗಳಿವೆ. ಅಂದರೆ ಇದರ ಜಿನೋಮ್ ನಲ್ಲಿ ಎರಡು ಬಾರಿ ಬದಲಾವಣೆಯಾದ ವೈರಸ್ ನ ರೂಪಾಂತರಿ ಇದಾಗಿದೆ. ಭಾರತದಲ್ಲಿ ಹರಡುತ್ತಿರುವ ಡಬಲ್ ಮ್ಯೂಟೆಂಟ್ E484Q ಹಾಗೂ L452R ಒಂದುಗೂಡಿ ನಿರ್ಮಾಣಗೊಂಡಿದೆ. L452R ಸ್ತ್ರೈನ್ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಕಂಡುಬಂದರೆ, E484Q ಭಾರತದಲ್ಲಿ ಕಂಡುಬರುತ್ತದೆ. ಇದು ತುಂಬಾ ಅಪಾಯಕಾರಿಯಾಗುವುದರ ಜೊತೆಗೆ ವೇಗವಾಗಿ ಪಸರಿಸುತ್ತದೆ.
ಇದನ್ನೂ ಓದಿ-ಯುವತಿಗೆ ಒಂದೇ ಸಲ ಕರೋನಾ ವ್ಯಾಕ್ಸಿನ್ ನ ಆರು ಡೋಸ್ ಕೊಟ್ಟ ನರ್ಸಮ್ಮ..!
ಭಾರತದಲ್ಲಿ (Coronavirus In India) ಕಳೆದ 24 ಗಂಟೆಗಳಲ್ಲಿ 348421 ಹೊಸ ಪ್ರಕರಣಗಳ ಪತ್ತೆ
ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 3 ಲಕ್ಷ 48 ಸಾವಿರ 421 ಜನರು ಕರೋನವೈರಸ್ (Coronavirus) ಸೋಂಕಿಗೆ ಒಳಗಾಗಿದ್ದರೆ, ಈ ಅವಧಿಯಲ್ಲಿ 4205 ಜನರು ಸಾವನ್ನಪ್ಪಿದ್ದಾರೆ. ಇದರ ನಂತರ, ಭಾರತದಲ್ಲಿ ಒಟ್ಟು ಕರೋನಾ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ 2 ಕೋಟಿ 33 ಲಕ್ಷ 40 ಸಾವಿರ 938 ಕ್ಕೆ ತಲುಪಿದ್ದರೆ, 2 ಲಕ್ಷ 54 ಸಾವಿರ 197 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 3 ಲಕ್ಷ 55 ಸಾವಿರ 338 ಜನರನ್ನು ಗುಣಪಡಿಸಲಾಗಿದೆ, ನಂತರ ಕೋವಿಡ್ -19 ನಿಂದ ಚೇತರಿಸಿಕೊಳ್ಳುವವರ ಸಂಖ್ಯೆ 1 ಕೋಟಿ 93 ಲಕ್ಷ 82 ಸಾವಿರ 642 ಕ್ಕೆ ತಲುಪಿದೆ. ಇದರೊಂದಿಗೆ, ದೇಶಾದ್ಯಂತ ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕುಸಿತ ಕಂಡುಬಂದಿದೆ (ಭಾರತದಲ್ಲಿ ಕೊರೊನಾವೈರಸ್ ಸಕ್ರಿಯ ಪ್ರಕರಣಗಳು) ಮತ್ತು ದೇಶಾದ್ಯಂತ 37 ಲಕ್ಷ 4 ಸಾವಿರ 99 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ- 5 ವರ್ಷ ಹಿಂದೆಯೇ ಕೊರೊನಾವನ್ನು ಶಸ್ತ್ರಾಸ್ತ್ರವಾಗಿ ಬಳಸಿಕೊಳ್ಳುವುದರ ಬಗ್ಗೆ ಚರ್ಚಿಸಿದ್ದ ಚೀನಾ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.