ನವದೆಹಲಿ: WHO On Ivermectin Use For Corona Treatment - ಭಾರತದಲ್ಲಿ, ಕೊರೊನಾ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆಯ ಪ್ರೋಟೋಕಾಲ್ ಅಡಿಯಲ್ಲಿ ವೈದ್ಯರು ಕರೋನಾ (Covid-19)ಚಿಕಿತ್ಸೆಗಾಗಿ ಹಲವಾರು ಔಷಧಿಗಳನ್ನು ಶಿಫಾರಸು ಮಾಡುತ್ತಿದ್ದಾರೆ. ಅವುಗಳಲ್ಲಿ ಐವರ್ಮೆಕ್ಟಿನ್ (Ivermectin-12mg) ಕೂಡ ಒಂದು. ಈ ಔಷಧಿಗೆ ಕಳೆದ ತಿಂಗಳು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ರಾಷ್ಟ್ರೀಯ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ವೈದ್ಯಕೀಯ ಸಂಶೋಧನಾ ಮಂಡಳಿಯು ಅನುಮೋದಿಸಿದೆ. ಈಗ ವಿಶ್ವ ಆರೋಗ್ಯ ಸಂಸ್ಥೆ (WHO) ಈ ಔಷಧಿಯನ್ನು ಬಳಸದಂತೆ ಸಲಹೆ ನೀಡುತ್ತಿದೆ.
ಐವರ್ಮೆಕ್ಟಿನ್ ಪರಾವಲಂಬಿ ವಿರೋಧಿ (Antiparasitic Drug) ಔಷಧಿಯಾಗಿದೆ. ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ ಮಾತ್ರೆಯನ್ನು ತೆಗೆದುಕೊಳ್ಳಲು ಭಾರತೀಯ ವೈದ್ಯರು ಜನರಿಗೆ ಸಲಹೆ ನೀಡುತ್ತಿದ್ದಾರೆ. ಗೋವಾ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೂಡ ರಕ್ಷಣಾ ತಂತ್ರವಾಗಿ 5 ದಿನಗಳ ಕಾಲ ಈ ಔಷಧಿಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದೆ. ಆದರೆ, ಮಂಗಳವಾರ WHO ಹಿರಿಯ ವಿಜ್ಞಾನಿಯಾಗಿರುವ ಸೌಮ್ಯಾ ಸ್ವಾಮಿನಾಥನ್. ಕ್ಲಿನಿಕಲ್ ಟ್ರಯಲ್ ಅನ್ನು ಹೊರತುಪಡಿಸಿ, ಕೊವಿಡ್ ರೋಗಿಗಳಿಗೆ ಈ ಔಷಧಿ ನೀಡಬಾರದು ಎಂದು WHO ಸಲಹೆ ನೀಡುತ್ತದೆ ಎಂದು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಯಾವುದೇ ಹೊಸ ಲಕ್ಷಣಗಳಿರುವಾಗ ಒಂದು ಔಷಧಿಯ ಬಳಕೆ ಮಾಡುತ್ತೇವೆ ಎಂದರೆ, ಆ ಔಷಧಿಯಿಂದ ರಕ್ಷಣೆ ಹಾಗೂ ಪ್ರಭಾವದ ಬಗ್ಗೆ ಗಮನಹರಿಸುವುದು ತುಂಬಾ ಮುಖ್ಯ ಎಂದು ಅವರು ಹೇಳಿದ್ದಾರೆ.
ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ ಡಾ.ಸೌಮ್ಯಾ ಸ್ವಾಮಿನಾಥನ್
ಸೌಮ್ಯಾ ಈ ಔಷಧಿ ತಯಾರಕ ಕಂಪನಿಯ ಸ್ಟೇಟ್ಮೆಂಟ್ ಕೂಡ ಟ್ವೀಟ್ ಮಾಡಿದ್ದಾರೆ. ಕಂಪನಿ ಇದೆ ವರ್ಷ ಮಾರ್ಚ್ ನಲ್ಲಿ ಈ ಸ್ಟೇಟ್ಮೆಂಟ್ ಜಾರಿಗೊಳಿಸಿತ್ತು. ಕಂಪನಿಯ ಹೇಳಿಕೆಯ ಪ್ರಕಾರ ಪ್ರೀ-ಕ್ಲಿನಿಕಲ್ ಟ್ರಯಲ್ ಅಧ್ಯಯನದಲ್ಲಿ ಕೊವಿಡ್-19 ಚಿಕಿತ್ಸೆಯಲ್ಲಿ ಈ ಔಷಧಿಯ ಚಿಕಿತ್ಸಾತ್ಮಕ ಪ್ರಭಾವದ ಯಾವುದೇ ವೈಜ್ಞಾನಿಕ ಆಧಾರ ಇಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ- Good News: ವ್ಯಾಕ್ಸಿನ್ ಹಾಕಿಸಿಕೊಂಡ್ರಾ? ಇಲ್ಲ ಎಂದಾದರೆ ಮೊದಲು ಈ ಮಾಹಿತಿ ತಿಳಿದುಕೊಳ್ಳಿ
Safety and efficacy are important when using any drug for a new indication. @WHO recommends against the use of ivermectin for #COVID19 except within clinical trials https://t.co/dSbDiW5tCW
— Soumya Swaminathan (@doctorsoumya) May 10, 2021
ರಕ್ಷಣಾ ತಂತ್ರವಾಗಿ ಗೋವಾದಲ್ಲಿ ಈ ಔಷಧಿ ಬಳಕೆಯಾಗಲಿದೆ
ಸೋಮವಾರ ಈ ಕುರಿತು ಹೇಳಿದೆ ನೀಡಿದ್ದ ಗೋವಾ ಆರೋಗ್ಯ ಸಚಿವ ವಿಶ್ವಜೀತ್ ರಾಣೆ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರಿಗೆ ಐದು ದಿನಗಳ ಅವಧಿಗೆ 12 mg Ivermectin ಔಷಧಿ ನೀಡಬೇಕು ಎಂದು ಸೂಚಿಸಿದ್ದಾರೆ. ಈ ವೇಳೆ ಅವರು ಯುಕೆ, ಇಟಲಿ, ಸ್ಪೇನ್ ಹಾಗೂ ಜಪಾನ್ ತಜ್ಞರು ಕೂಡ ಈ ಔಷಧಿಯಿಂದ ಕೊರೊನಾ (Coronavirus) ರೋಗಿಗಳು ಬೇಗ ಗುಣಮುಖರಾಗಿದ್ದಾರೆ ಮತ್ತು ಮೃತ್ಯು ದರ ಇಳಿಕೆಯಾಗಿದೆ ಎಂದೂ ಕೂಡ ಹೇಳಿದ್ದರು. ಇದೇ ವೇಳೆ ಈ ಔಷಧಿ ಸೋಂಕನ್ನು ತಡೆಯುವುದಿಲ್ಲ ಆದರೆ, ಆ ಸೋಂಕಿನ ಗಂಭೀರತೆಯನ್ನು ಕಡಿಮೆ ಮಾಡುತ್ತದೆ ಎಂದು ಮಂತ್ರಿಗಳು ಹೇಳಿದ್ದರು.
ಇದನ್ನೂ ಓದಿ- CSIR Research: ಈ ಎರಡು Blood Group ಹೊಂದಿರುವ ಜನರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚು
ಸಂಶೋಧನೆ ಕೂಡ ಈ ಮಾತನ್ನು ಹೇಳಿದೆ
ಇತ್ತೀಚೆಗಷ್ಟೇ ನಡೆಸಲಾಗಿರುವ ಒಂದು ಸಂಶೋಧನೆ ಕೂಡ ಐವರ್ಮ್ಯಾಕ್ಟೀನ್ (Ivermectin Tablets) ಔಷಧಿ ಕೊರೊನಾ ಮಹಾಮಾರಿಯ ಅಂತ್ಯದಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಲಿದೆ ಎಂದು ಹೇಳಿತ್ತು. 'ಅಮೇರಿಕನ್ ಜರ್ನಲ್ ಆಫ್ ಥೆರೆಪ್ಯುಟಿಕ್ಸ್' ನ ಮೇ-ಜೂನ್ ಸಂಚಿಕೆಯಲ್ಲಿ ಪ್ರಕಟಗೊಂಡ ಈ ಸಂಶೋಧನಾ ವರದಿಯಲ್ಲಿ Ivermectin ಬಳಕೆಯ ಕುರಿತು ಪಡೆಯಲಾಗಿರುವ ಅಂಕಿ-ಅಂಶಗಳ ಕುರಿತು ಸೂಕ್ಷ್ಮ ಅಧ್ಯಯನ ನಡೆಸಲಾಗಿದೆ.
ಇದನ್ನೂ ಓದಿ- Cow dung for Covid Cure: ಕೊರೊನಾದಿಂದ ಪಾರಾಗಲು ಹಸುವಿನ ಸಗಣಿ ಬಳಸುವ ಮುನ್ನ ಈ ಸುದ್ದಿ ಓದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.