ನವದೆಹಲಿ:ಗಂಭೀರ ವಿಷಯಗಳ ಮೇಲೆ ನಮ್ಮ ದೇಶದ ಮುಖಂಡರೆ ವಿಚಿತ್ರ ಹೇಳಿಕೆಗಳನ್ನು ನೀಡುತ್ತಾರೆ ಎಂದು ನೀವೂ ಕೂಡ ಭಾವಿಸಿದ್ದರೆ, ನೀವು ಒಂದು ಬಾರಿ ಬೆಲಾರೂಸ್ ದೇಶದ ರಾಷ್ಟ್ರಪತಿಗಳ ಹೇಳಿಕೆಯನ್ನೂ ಕೂಡ ಒಮ್ಮೆ ಆಲಿಸಬೇಕು. ಒಂದೆಡೆ ಇಡೀ ವಿಶ್ವ ಕೊರೊನಾ ವೈರಸ್ ಪ್ರಕೊಪದಿಂದ ಕಂಗಾಲಾಗಿದ್ದರೆ, ಬೆಲಾರೂಸ್ ದೇಶದ ರಾಷ್ಟ್ರಪತಿ ಅಲೆಕ್ಸಾಂಡರ್ ಲುಕಾಶೇಂಕೋ ತನ್ನಷ್ಟಕ್ಕೆ ತಾನೇ ಧೈರ್ಯಶಾಲಿ ಎಂದು ಸಾಬೀತುಪಡಿಸುವುದಲ್ಲದೆ ತಮ್ಮ ದೇಶದ ಜನರಿಗೂ ಕೂಡ ಫುಜೂಲ್ ಸಲಹೆಗಳನ್ನು ನೀಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಅಲೆಕ್ಸಾಂಡರ್ ಅವರ ರೀತಿಯೇ ಬ್ರೆಜಿಲ್, ಮೆಕ್ಸಿಕೋ ಹಾಗೂ ಅಮೆರಿಕಾದ ಮುಖಂಡರುಗಳು ಕೂಡ ಕೊರೊನಾ ವೈರಸ್ ಗಂಭೀರತೆಯ ಕುರಿತು ತಮಾಷೆಯ ಮಾತುಗಳನ್ನು ಆಡಿದ್ದರು ಹಾಗೂ ಇಂದು ಅದಕ್ಕೆ ಬೆಲೆ ತೆತ್ತುತ್ತಿದ್ದಾರೆ. ಆದರೆ, ಅವರ ಅವಸ್ಥೆಯನ್ನು ನೋಡಿಯೂ ಕೂಡ ಅಲೆಕ್ಸಾಂಡರ್ ಅವರ ವರ್ತನೆಯಲ್ಲಿ ಯಾವುದೇ ಪರಿವರ್ತನೆ ಕಾಣಿಸಿಲ್ಲ. ಅಷ್ಟೇ ಅಲ್ಲ ಕೊರೊನಾ ವೈರಸ್ ಮಹಾಮಾರಿ ಒಂದು 'ಮನೋರೋಗ' ಎಂದು ಹೇಳಿದ್ದಾರೆ.


ತಮ್ಮ ದೇಶದ ರಾಷ್ಟ್ರಪತಿಗಳ ಈ ಹೇಳಿಕೆಗೆ ಬೇಸರ ವ್ಯಕ್ತಪಡಿಸಿರುವ ಬೆಲಾರೂಸ್ ಸ್ವಯಂ ಸೇವಕರು ಕೊರೊನಾ ವೈರಸ್ ವಿರುದ್ಧ ಹೋರಾಡಲು ಮುಂದೆಬಂದಿದ್ದಾರೆ. 'ದಿ ಗಾರ್ಡಿಯನ್'ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಅಲ್ಲಿನ ಸ್ವಯಂ ಸೇವಕರು ಜನಸಾಮಾನ್ಯರಿಂದ ಹಣ ಸಂಗ್ರಹಣೆಯಲ್ಲಿ ತೊಡಗಿದ್ದು, ಮಹಾಮಾರಿಯ ಹಿನ್ನೆಲೆ ದೇಶದ ಮೇಲೆ ಯಾವುದೇ ರೀತಿಯ ಆರ್ಥಿಕ ಸಂಕಟ ತಲೆದೂರಬಾರದು ಎಂಬುದು ಅವರ ಉದ್ದೇಶವಾಗಿದೆ.


ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ಅಲ್ಲಿನ ಅಲೆಕ್ಸಾಂಡರ್ ಸರ್ಕಾರ ಯಾವುದೇ ರೀತಿಯ ವಿಶೇಷ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಅಷ್ಟೇ ಅಲ್ಲ ಮುನ್ನೆಚ್ಚರಿಕಾ ಕ್ರಮವಾಗಿ ಯುರೋಪಿಯನ್ ಫುಟ್ ಬಾಲ್ ಲೀಗ್ ಅನ್ನು ಕೂಡ ರದ್ದುಗೊಳಿಸಲಾಗಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನರು ಫುಟ್ಬಾಲ್ ಮ್ಯಾಚ್ ನೋಡಲು ಸ್ಟೇಡಿಯಂಗೆ ಧಾವಿಸಿದ್ದಾರೆ.ಇನ್ನೊಂದೆಡೆ ಇಡೀ ವಿಶ್ವ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯ ಮೇಲೆ ಹೆಚ್ಚಿನ ಒತ್ತು ನೀಡುತ್ತಿದೆ.


95ಲಕ್ಷ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಇದುವರೆಗೆ ಸುಮಾರು 4200 ಕೊರೊನಾ ವೈರಸ್ ಪ್ರಕರಣಗಳು ಬೆಳಕಿಗೆ ಬಂದಿದ್ದು, ಸುಮಾರು 40 ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.