ನವದೆಹಲಿ: ಅಮೆರಿಕದಲ್ಲಿ ಇತ್ತೀಚೆಗೆ ಮರಣ ಹೊಂದಿದ ಶೇ. 99ರಷ್ಟು ಜನರು ಕೊರೊನಾ ಲಸಿಕೆ (COVID Vaccine) ಹಾಕಿಸಿಕೊಳ್ಳದವರಾಗಿದ್ದಾರೆ ಎಂಬ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ಅಮೆರಿಕದ ಖ್ಯಾತ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಆಂಥೋನಿ ಫೌಸಿ ( Anthony Fauci) ಅವರೇ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು, ಕೊರೊನಾ (Coronavirus) ಸಾಂಕ್ರಾಮಿಕವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳಲ್ಲಿ ಸಮರೋಪಾದಿಯಲ್ಲಿ ಕೋವಿಡ್-19 ಲಸಿಕೆ (COVID-19) ನೀಡಲಾಗುತ್ತಿದೆ. ಹೀಗಿದ್ದರೂ ಕೆಲವು ಜನರು ಲಸಿಕೆ ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಅವರು ಕೊರೊನಾ ಮಹಾಮಾರಿಗೆ ತುತ್ತಾಗುತ್ತಿದ್ದಾರೆ. ಅಮೆರಿಕದ ಟಿವಿ ನೆಟ್‌ವರ್ಕ್‌ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಡಾ. ಫೌಸಿ, ಜೂನ್ ತಿಂಗಳಲ್ಲಿ ಶೇ.99.2ರಷ್ಟು ಕೊರೊನಾ ವೈರಸ್ ಸಂಬಂಧಿತ ಸಾವು-ನೋವುಗಳು ಲಸಿಕೆ ಹಾಕಿಸಿಕೊಳ್ಳದ ಜನರಲ್ಲಿ ಸಂಭವಿಸಿವೆ ಎಂದು ಹೇಳಿದ್ದಾರೆ. 


ಇದನ್ನೂ ಓದಿ : Foreign Policy: ಮಾಡಿದ್ದುಣ್ಣೋ ಮಹರಾಯ! ಪಾಕ್ ಬಿಟ್ಟರೆ ಚೀನಾ ಬಳಿಯಿಂದ ಯಾರು ಶಸ್ತ್ರಾಸ್ತ್ರ ಖರೀದಿಸುತ್ತಿಲ್ಲವಂತೆ


ಕೊರೊನಾ ಲಸಿಕೆಯ ಎರಡೂ ಡೋಸ್ ಗಳನ್ನು ತೆಗೆದುಕೊಂಡಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸಾಂಕ್ರಾಮಿಕ ಕಾಯಿಲೆಗಳ ನಿರ್ದೇಶಕರಾಗಿರುವ ಡಾ. ಫೌಸಿ, ಅಮೆರಿಕದಲ್ಲಿ ಇತ್ತೀಚೆಗೆ ಸಂಭವಿಸಿರುವ ಕೊರೊನಾ (Coronavirus) ಸಂಬಂಧಿತ ಸಾವು-ನೋವುಗಳಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಕೆಲವು ಭಾಗಗಳಲ್ಲಿ ಜನರು ಸರಿಯಾಗಿ ಫೇಸ್ ಮಾಸ್ಕ್ (Mask) ಧರಿಸದಿರುವುದು ಮತ್ತು ವ್ಯಾಕ್ಸಿನೇಷನ್ ಹಾಕಿಕೊಳ್ಳದೇ  ಇರುವುದರಿಂದ ಕೊರೊನಾ ಪ್ರಕರಣಗಳು ಉಲ್ಭಣಗೊಂಡಿವೆ. ಸರಿಯಾದ ಸಮಯಕ್ಕೆ ಲಸಿಕೆ (Vaccine) ಪಡೆದುಕೊಳ್ಳದ ಜನರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ ಎಂದಿದ್ದಾರೆ. ಜನರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸಬೇಕು. ಕೊರೊನಾ ಲಸಿಕೆಯನ್ನು ಪಡೆದುಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.
 
ದೇಶದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿಸುವುದು ಕೋವಿಡ್-19 ಮತ್ತು ಅದರ ರೂಪಾಂತರಿ ವೈರಸ್ ಗಳಿಂದ ರಕ್ಷಿಸಿಕೊಳ್ಳುವ ಉತ್ತಮ ಮಾರ್ಗವಾಗಿದೆ ಎಂದು ಡಾ.ಫೌಸಿ ಶ್ವೇತಭವನದಲ್ಲಿ ಸಾರ್ವಜನಿಕ ಆರೋಗ್ಯಾಧಿಕಾರಿಗಳು ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ದೇಶಾದ್ಯಂತ ವರದಿಯಾಗಿರುವ ಶೇ.25ರಷ್ಟು SARS-CoV-2 ವೈರಸ್ ಡೆಲ್ಟಾ ರೂಪಾಂತರವಾಗಿದೆ  ಎಂದು ರೋಗ ನಿಯಂತ್ರಣ ಕೇಂದ್ರಗಳ ನಿರ್ದೇಶಕಿ ಡಾ.ರೊಚೆಲ್ ವಾಲೆನ್ಸ್ಕಿ ಇದೇ ವೇಳೆ ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ : Coronavirus Latest Update - ಇನ್ಮುಂದೆ ಮಾಸ್ಕ್ ಮೂಲಕ Corona Positive ಪತ್ತೆಹಚ್ಚಲಾಗುವುದು


ಇನ್ನು ಅಮೆರಿಕದಲ್ಲಿ ಶೇ.67ರಷ್ಟು ವಯಸ್ಕರು ಸೇರಿದಂತೆ ಬರೋಬ್ಬರಿ 180 ಮಿಲಿಯನ್ ಗಿಂತಲೂ ಹೆಚ್ಚು ಜನರು ಮೊದಲ ಡೋಸ್ ಕೊರೊನಾ ಲಸಿಕೆಯನ್ನು ಪಡೆದುಕೊಂಡಿದ್ದಾರೆ.  ಬರೋಬ್ಬರಿ 3.3 ಕೋಟಿಗೂ ಹೆಚ್ಚು ಸೋಂಕಿತರು ಮತ್ತು 6 ಲಕ್ಷ ಸಾವುಗಳು ಸಂಭವಿಸಿರುವ ಅಮೆರಿಕವು ಕೋವಿಡ್-19ನಿಂದಾಗಿ ವಿಶ್ವದಲ್ಲಿಯೇ  ಅತಿಹೆಚ್ಚು ಹಾನಿಗೊಳಗಾಗಿರುವ ದೇಶವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.