COVID-19 Guidelines- 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ Masks ಶಿಫಾರಸು ಮಾಡಲಾಗಿಲ್ಲ

ಈ ಮಾರ್ಗಸೂಚಿಯ ಪ್ರಕಾರ, ಮಕ್ಕಳಿಗೆ ರೆಮ್‌ಡೆಸಿವಿರ್ ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಸಹ ತಿಳಿಸಲಾಗಿದೆ.

Written by - Yashaswini V | Last Updated : Jun 10, 2021, 02:45 PM IST
  • ಹೊಸ ಮಾರ್ಗಸೂಚಿಯ ಪ್ರಕಾರ, 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಲ್ಲ
  • ಐಸೊಲೇಶನ್ ನಲ್ಲಿರುವ ಮಕ್ಕಳೊಂದಿಗೆ ಸಕಾರಾತ್ಮಕವಾಗಿ ಮಾತನಾಡುವಂತೆ ಹೆತ್ತವರಿಗೆ ಸೂಚಿಸಲಾಗಿದೆ
  • ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಲ್ಲಿ ಮಕ್ಕಳ ಮೇಲೆ ಸ್ಟೀರಾಯ್ಡ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ
COVID-19 Guidelines- 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ Masks ಶಿಫಾರಸು ಮಾಡಲಾಗಿಲ್ಲ  title=
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ

ನವದೆಹಲಿ: Covid 19 Guidelines- ಕರೋನಾ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಈ ಮಾರ್ಗಸೂಚಿಯ ಪ್ರಕಾರ, ಮಕ್ಕಳಿಗೆ ರೆಮ್‌ಡೆಸಿವಿರ್ (Remdesivir) ನೀಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಫೇಸ್ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಸಹ ತಿಳಿಸಲಾಗಿದೆ. 

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವ್ಯಾಪ್ತಿಗೆ ಬರುವ ಆರೋಗ್ಯ ಸೇವೆಗಳ ನಿರ್ದೇಶನಾಲಯ (ಡಿಜಿಎಚ್‌ಎಸ್) ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕರೋನವೈರಸ್ (Coronavirus) ರೋಗವನ್ನು ತಡೆಗಟ್ಟಲು ಮಾಸ್ಕ್ (Masks) ಗಳನ್ನು ಧರಿಸುವುದನ್ನು ಶಿಫಾರಸು ಮಾಡುವುದಿಲ್ಲ ಎಂದು ಹೇಳಿದೆ.

ಸೌಮ್ಯ ರೋಗಲಕ್ಷಣಗಳಲ್ಲಿ, ಕೋಣೆಯಲ್ಲಿ ಆಮ್ಲಜನಕದ ಶುದ್ಧತ್ವವು  94 ಪ್ರತಿಶತ ಅಥವಾ ಹೆಚ್ಚಿನದಾಗಿರಬಹುದು. ಇದರ ಜೊತೆಗೆ, ಗಂಟಲಿನಲ್ಲಿ ತೊಂದರೆ, ಉಸಿರಾಟದ ತೊಂದರೆ ಮತ್ತು ಕೆಮ್ಮುವಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಅದೇ ಸಮಯದಲ್ಲಿ, ಜ್ವರ ಇದ್ದರೆ, ಪ್ರತಿ 4-6 ಗಂಟೆಗಳಿಗೊಮ್ಮೆ ಪ್ಯಾರಸಿಟಮಾಲ್ ಟ್ಯಾಬ್ಲೆಟ್ ನೀಡಬೇಕೆಂದು, ಕೆಮ್ಮು ನಿವಾರಣೆಗಾಗಿ ಬೆಚ್ಚಗಿನ ನೀರಿನಿಂದ ಗಾರ್ಗ್ಲ್ ಮಾಡುವಂತೆ ಅದರ ಚಿಕಿತ್ಸೆಯ ಬಗ್ಗೆ ತಿಳಿಸಲಾಗಿದೆ. 

ಇದನ್ನೂ ಓದಿ- Vaccination Certificate : ಕರೋನಾ ಲಸಿಕೆ ಹಾಕಿಸಿಕೊಂಡರೆ ಮಾತ್ರ Term Insurance..!

ಇದಲ್ಲದೆ, ಐಸೊಲೇಶನ್ ನಲ್ಲಿರುವ ಮಕ್ಕಳೊಂದಿಗೆ ಸಕಾರಾತ್ಮಕವಾಗಿ ಮಾತನಾಡುವಂತೆ ಹೆತ್ತವರಿಗೆ ಸೂಚಿಸಲಾಗಿದೆ. ಇದರೊಂದಿಗೆ, ಮಕ್ಕಳಲ್ಲಿ ಆಮ್ಲಜನಕದ (Oxygen)  ಶುದ್ಧತ್ವವನ್ನು ಅರ್ಥಮಾಡಿಕೊಳ್ಳಲು 6 ನಿಮಿಷಗಳ ನಡಿಗೆ ಪರೀಕ್ಷೆಯನ್ನು ನಡೆಸಲು ಸೂಚಿಸಲಾಗಿದೆ.

ಮಾಸ್ಕ್ ಧರಿಸುವ ಅಗತ್ಯವಿಲ್ಲ (Mask Not Required):
ಹೊಸ ಮಾರ್ಗಸೂಚಿಯ ಪ್ರಕಾರ, 5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮಾಸ್ಕ್ ಧರಿಸುವುದು ಕಡ್ಡಾಯವಲ್ಲ, ಆದರೆ 6-11 ವರ್ಷ ವಯಸ್ಸಿನ ಮಕ್ಕಳು ಪೋಷಕರ ಮೇಲ್ವಿಚಾರಣೆಯಲ್ಲಿ ಮಾಸ್ಕ್ (Mask) ಗಳನ್ನು ಧರಿಸಬಹುದು. ಅದೇ ಸಮಯದಲ್ಲಿ, 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳು ವಯಸ್ಕರಂತೆಯೇ ಮಾಸ್ಕ್ ಬಳಸಬಹುದು ಎಂದು ಹೇಳಲಾಗಿದೆ.

ಸ್ಟೀರಾಯ್ಡ್‌ಗಳ ಮೇಲೆ ನಿಯಂತ್ರಣ:
ಹೊಸ ಮಾರ್ಗಸೂಚಿಯ  (Covid 19 Guidelines) ಪ್ರಕಾರ, ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಲ್ಲಿ ಮಕ್ಕಳ ಮೇಲೆ ಸ್ಟೀರಾಯ್ಡ್‌ಗಳನ್ನು ಬಳಸದಂತೆ ಸೂಚಿಸಲಾಗಿದೆ. ಸೋಂಕಿನ ಲಕ್ಷಣರಹಿತ ಮತ್ತು ಸೌಮ್ಯ ಪ್ರಕರಣಗಳಲ್ಲಿ ಸ್ಟೀರಾಯ್ಡ್‌ಗಳು ಹಾನಿಕಾರಕವೆಂದು ಡಿಜಿಹೆಚ್ಎಸ್ ಹೊರಡಿಸಿದ ಮಾರ್ಗಸೂಚಿಗಳು ತಿಳಿಸಿವೆ. ಕಟ್ಟುನಿಟ್ಟಾದ ಮೇಲ್ವಿಚಾರಣೆಯಲ್ಲಿ ಆಸ್ಪತ್ರೆಗೆ ದಾಖಲಾದ ಮಧ್ಯಮ ತೀವ್ರ ಮತ್ತು ಗಂಭೀರ ಅನಾರೋಗ್ಯದ COVID-19 ಪ್ರಕರಣಗಳಲ್ಲಿ ಮಾತ್ರ ಡಿಜಿಹೆಚ್ಎಸ್ ಸ್ಟೀರಾಯ್ಡ್‌ಗಳನ್ನು ಶಿಫಾರಸು ಮಾಡಿದೆ.

ಇದನ್ನೂ ಓದಿ- CoWin Portal ಬಳಸುವಾಗ ಈ ವಿಚಾರಗಳ ಬಗ್ಗೆ ಎಚ್ಚರವಿರಲಿ, ತಪ್ಪಿದರೆ ಬ್ಲಾಕ್ ಆದೀತು..!

ಸ್ಟೀರಾಯ್ಡ್‌ಗಳನ್ನು ಸರಿಯಾದ ಸಮಯದಲ್ಲಿ, ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಅವಧಿಗೆ ಬಳಸಬೇಕು. ಸ್ಟೀರಾಯ್ಡ್‌ಗಳ ಸ್ವಯಂ- ಔಷಧಿಗಳನ್ನು ತಪ್ಪಿಸಬೇಕು ಎಂದು ಅದು ಹೇಳಿದೆ. ಮಕ್ಕಳಲ್ಲಿ ರೆಮ್‌ಡೆಸಿವಿರ್ (ತುರ್ತು ಬಳಕೆ ಅಧಿಕೃತ ಔಷಧ) ಶಿಫಾರಸು ಮಾಡುವುದಿಲ್ಲ ಎಂದು ಮಾರ್ಗಸೂಚಿಗಳು ತಿಳಿಸಿವೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರೆಮ್‌ಡೆಸಿವಿರ್‌ಗೆ ಸಂಬಂಧಿಸಿದಂತೆ ಸಾಕಷ್ಟು ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮಾಹಿತಿಯ ಕೊರತೆಯಿದೆ ಎಂದು ಮಾರ್ಗಸೂಚಿಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News