ಕರೋನಾ ವೈರಸ್ ಅನ್ನು ನಿಗ್ರಹಿಸಲು, ಅನೇಕ ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಇದೆ ಕಾರಣದಿಂದಾಗಿ ಅನೇಕ ಜನರು ಆಹಾರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಇನ್ನೊಂದೆಡೆ ಅನೇಕ ಜನರು ತಮ್ಮ ಉದ್ಯೋಗಗಳನ್ನೂ ಸಹ ಕಳೆದುಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಒಂದು ದೇಶ ವಿಶಿಷ್ಟವಾದ ಮಾರ್ಗವೊಂದನ್ನು ಕಂಡುಕೊಂಡಿದೆ. ಈ ಮಾರ್ಗದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಆಹಾರ ಸಾಮಗ್ರಿ ವಿತರಣೆ ಎರಡೂ ಉದ್ದೇಶಗಳೂ ಪೂರ್ಣಗೊಳ್ಳುತ್ತಿವೆ.


COMMERCIAL BREAK
SCROLL TO CONTINUE READING

ಹೌದು ನಾವು ಮಾತನಾಡುತ್ತಿರುವುದು ವಿಯೆಟ್ನಾಂ ದೇಶದ ಕುರಿತು, ವಿಯೆಟ್ನಾಂನಲ್ಲಿ ಲಾಕ್‌ಡೌನ್‌ ನಿಂದ ಉದ್ಭವಿಸಿರುವ ಆಹಾರ ಸಮಸ್ಯೆ ನಿವಾರಣೆಗೆ 'ಅಕ್ಕಿ ಎಟಿಎಂ'ಗಳನ್ನು (ಅಕ್ಕಿ ವಿತರಿಸುವ ಯಂತ್ರಗಳು) ಸ್ಥಾಪಿಸಲಾಗಿದೆ, ಬ್ಯಾಂಕ್ ಎಟಿಎಂನಂತೆ ಈ ಯಂತ್ರಗಳಿಂದ ಯಾರು ಬೇಕಾದರೂ ಕೂಡ ಉಚಿತವಾಗಿ ಅಕ್ಕಿಯನ್ನು ಪಡೆಯಬಹುದು. ಈ ಅಕ್ಕಿ ಎಟಿಎಂ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ವಿಯೆಟ್ನಾಂನ ಉದ್ಯಮಿಯೊಬ್ಬರು 'ಅಕ್ಕಿ ಎಟಿಎಂ ಯಂತ್ರವನ್ನು ಸ್ಥಾಪಿಸುವ ಕಾರ್ಯ ಮಾಡಿದ್ದಾರೆ. ಈ ಯಂತ್ರಗಳು ಲಾಕ್ ಡೌನ್ ಸಮಯದಲ್ಲಿ ಅಗತ್ಯವಿರುವ ಜನರಿಗೆ ಸಹಾಯ ಮಾಡಲು ಸಹಕಾರಿಯಾಗಿದ್ದು, ತುಂಬಾ ಪರಿಣಾಮಕಾರಿ ಕೂಡ ಎಂದು ಸಾಬೀತಾಗಿವೆ.


ವಿಯೆಟ್ನಾಂನಲ್ಲಿ ಈವಇದುವರೆಗೆ ಸುಮಾರು 262 ಕರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಆದರೆ, ಇದುವರೆಗೆ ಅಲ್ಲಿ ಯಾವುದೇ ಪ್ರಾಣಹಾನಿಯ ಕುರಿತು ವರದಿಯಾಗಿಲ್ಲ. ಮಾರ್ಚ್ 31 ರಿಂದ ಅಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಜನರು ಸಾಮಾಜಿಕ ದೂರವನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಣ್ಣ ಉದ್ಯಮಗಳು ಸ್ಥಗಿತಗೊಂಡಿವೆ. ಇದೆ ಸಮಯದಲ್ಲಿ, ಸಾವಿರಾರು ಜನರನ್ನು ತಾತ್ಕಾಲಿಕವಾಗಿ ಕೆಲಸದಿಂದ ತೆಗೆದುಹಾಕಲಾಗಿದೆ.


ರಾಯಿಟರ್ಸ್ ಪ್ರಕಟಿಸಿರುವ ಒಂದು ವರದಿಯ ಪ್ರಕಾರ, ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡವರ ಪಟ್ಟಿಯಲ್ಲಿ ಗುಯೆನ್ ಥಿ ಹೆಸರಿನ ಮಹಿಳೆಯ ಪತಿಯೂ ಕೂಡ ಶಾಮೀಲಾಗಿದ್ದಾರೆ ಎನ್ನಲಾಗಿದೆ. ಗುಯೆನ್ ಥಿ ಹೇಳುವ ಪ್ರಕಾರ ಈ 'ರೈಸ್ ATM'ಗಳು ತುಂಬಾ ಸಹಾಯಕವಾಗಿದ್ದು, ಈ ಯಂತ್ರಗಳಿಂದ ಹೊರಬರುವ ಒಂದು ಚೀಲ ಅಕ್ಕಿ ಒಂದು ದಿನಕ್ಕೆ ಸಾಕಾಗುತ್ತದೆ ಎನ್ನುತ್ತಾರೆ. ಅಷ್ಟೇ ಅಲ್ಲ ನಮ್ಮ ಅಕ್ಕಪಕ್ಕದ ಜನರೂ ಕೂಡ ಮನೆಯಲ್ಲಿ ಉಳಿದ ಆಹಾರವನ್ನು ನಮಗೆ ನೀಡುತ್ತಾರೆ ಎಂದು ಮೂರು ಮಕ್ಕಳಿಗೆ ತಾಯಿಯಾಗಿರುವ ಗುಯೆನ್ ಥಿ ಹೇಳುತ್ತಾರೆ. ಹಲವು ಬಾರಿ ನಾವು ನೂಡಲ್ಸ್ ಸೇವಿಸಿ ಕೂಡ ಕಾಲ ಕಳೆಯುತ್ತೇವೆ ಎಂದು ಗುಯೆನ್ ಹೇಳುತ್ತಾರೆ.


ಈ 'ರೈಸ್ ಏಟಿಎಂ'ಗಳಿಂದ ಒಂದು ಬಾರಿಗೆ 1.5 ಕೆ.ಜಿ ಅಕ್ಕಿ ಹೊರಬರುತ್ತದೆ. ಬೀದಿ ಮಾರಾಟಗಾರರು, ಹೌಸ್ ಕೀಪಿಂಗ್, ಲಾಟರಿ ಟಿಕೆಟ್ ಮಾರಾಟಗಾರರು ಹಾಗೂ ಇಂತಹ ಇತರೆ ವ್ಯಕ್ತಿಗಳ ಪಾಲಿಗೆ ಈ 'ರೈಸ್ ATM' ವರದಾನವಾಗಿ ಸಾಬೀತಾಗಿವೆ. ಈ 'ರೈಸ್ ಎಟಿಎಂ' ಗಳನ್ನು  ಹೊವಾಂಗ್ ತುವಾನ್ ಎಂಬ ಉದ್ಯಮಿ ಪ್ರಾರಂಭಿಸಿದ್ದಾರೆ. ಇದಕ್ಕೂ ಮೊದಲು ಅವರು ಮಿನ್ಹ್ ಸಿಟಿ ಆಸ್ಪತ್ರೆಗಳಿಗೆ ಸ್ಮಾರ್ಟ್ ಡೋರ್‌ಬೆಲ್‌ ಗಳನ್ನು ದಾನ ಮಾಡಿದ್ದರು. ರಾಜ್ಯ ಮಾಧ್ಯಮಗಳ ಪ್ರಕಾರ, ಹನೋಯಿ, ಹ್ಯೂ ಮತ್ತು ದಾನಂಗ್‌ ಗಳಂತಹ ಪಟ್ಟಣಗಳಲ್ಲಿ ಇದೇ ರೀತಿಯ 'ಅಕ್ಕಿ ಎಟಿಎಂ'ಗಳನ್ನು ಸ್ಥಾಪಿಸಲಾಗಿದೆ.