Coronavirus Vaccine: ಮಹಿಳೆಯರ ಫಲವತ್ತತೆಯ ಮೇಲೆ Corona Vaccine ಪ್ರಭಾವ! ತಜ್ಞರು ಹೇಳುವುದೇನು?
Coronavirus Vaccine: ಕೊರೊನಾ ವ್ಯಾಕ್ಸಿನ್ ಲಸಿಕೆ ಹಾಗೂ ಮಾಸಿಕ ಪಾಳಿಯಲ್ಲಿನ ಬದಲಾವಣೆ ನಡುವೆ ಲಿಂಕ್ ಇರುವುದು ಇನ್ನೂ ಸಾಬೀತಾಗಿಲ್ಲ.
ನವದೆಹಲಿ: Covid-19 Vaccine - ಕೊರೊನಾ ವ್ಯಾಕ್ಸಿನ್ ನ (Corona Vaccine) ಅಡ್ಡ ಪರಿಣಾಮಗಳ ಕುರಿತು ಹಲವು ರೀತಿಯ ಮಾಹಿತಿ ಮುಂದೆ ಬರುತ್ತಿವೆ ಹಾಗೂ ಇದರಿಂದ ಮಾಸಿಕ ಪಾಳಿ ಅಥವಾ ಮಾಸಿಕ ಋತುಚಕ್ರದ (Menstrual Cyble) ಮೇಲೆ ಪ್ರಭಾವ ಉಂಟಾಗುತ್ತದೆ ಎಂದೂ ಕೂಡ ಹೇಳಲಾಗುತ್ತಿದೆ. ಆದರೆ ಈ ಕುರಿತು ಹೇಳಿಕೆ ನೀಡಿರುವ ತಜ್ಞರು, ಕೊವಿಡ್ ವ್ಯಾಕ್ಸಿನ್ ಹಾಕಿಸಿಕೊಂಡ ಬಳಿಕ ಒಂದು ವೇಳೆ ನಿಮ್ಮ Menstrual Cycleನಲ್ಲಿ ಬದಲಾವಣೆ ಕಂಡುಬಂದರೆ, ಇದು ಕೇವಲ ತಾತ್ಕಾಲಿಕವಾಗಿದೆ ಎಂದು ಹೇಳುತ್ತಾರೆ.
Fertility ಮೇಲೆ ಯಾವುದೇ ಪ್ರಭಾವ ಇಲ್ಲ
ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದರಿಂದ ಮಹಿಳೆಯರ ಫಲವತ್ತತೆ (Fertility Risk In Women) ಮೇಲೆ ಇದು ಯಾವುದೇ ಪ್ರಭಾವ ಬೀರುತ್ತದೆ ಎಂಬ ವಾದವನ್ನು ವೈದ್ಯರು ತಳ್ಳಿಹಾಕಿದ್ದಾರೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಮಾಸಿಕ ಋತುಚಕ್ರದಲ್ಲಿ ಸಣ್ಣ-ಪುಟ್ಟ ಬದಲಾವಣೆಗಳಾಗಬಹುದು, ಆದರೆ, ಇದು ಮಹಿಳೆಯರ ಫಲವತ್ತತೆ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ.
ಆದರೆ, ಕೊವಿಡ್ -19 ಲಸಿಕೆ ಹಾಗೂ ಪಿರಿಯಡ್ಸ್ ಗಳಲ್ಲಾಗುವ ಬದಲಾವಣೆಗೆ ಯಾವುದೇ ನೇರ ಲಿಂಕ್ ಇಲ್ಲ. ವೈಜ್ಞಾನಿಕವಾಗಿ ಇದುವರೆಗೆ ಇದು ಸಾಬೀತಾಗಿಲ್ಲ.
ದಿ ಗಾರ್ಡಿಯನ್ ಸೈನ್ಸ್ ವೀಕ್ಲಿ ಪ್ರಕಾರ, ಇಲಿನಾಯ್ಸ್ ವಿಶ್ವವಿದ್ಯಾಲಯದ ಡಾ. ಕೇಟ್ ಕ್ಲಾನ್ಸಿ ಮತ್ತು ವಾಷಿಂಗ್ಟನ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಪೋಸ್ಟ್‌ಡಾಕ್ಟರಲ್ ಸಂಶೋಧಕ ಕ್ಯಾಥರೀನ್ ಲೀ ಅವರು ಕೋವಿಡ್ ವ್ಯಾಕ್ಸಿನೇಷನ್‌ನ ಋತುಚಕ್ರದಲ್ಲಿ ಸಣ್ಣ ಬದಲಾವಣೆಗಳನ್ನು ಸಹ ಗಮನಿಸಿದ್ದಾರೆ, ನಂತರ ಅವರು ಈ ಕುರಿತು ಸಮೀಕ್ಷೆಯನ್ನು ಪ್ರಾರಂಭಿಸಿದ್ದರು. ಆದರೆ, ಸಮೀಕ್ಷೆಯ ಫಲಿತಾಂಶಗಳು ವಿಭಿನ್ನವಾಗಿವೆ.
ಹೆಚ್ಚಿನ ಮಹಿಳೆಯರಲ್ಲಿ ವ್ಯಾಕ್ಸಿನೆಶನ್ ಬಳಿಕ ಯಾವುದೇ ಬದಲಾವಣೆ ಕಂಡುಬಂದಿಲ್ಲ
ಹೆಚ್ಚಿನ ಮಹಿಳೆಯರಲ್ಲಿ ವ್ಯಾಕ್ಸಿನೆಶನ್ (Corona Vaccination) ನಂತರ ಯಾವುದೇ ಬದಲಾವಣೆಯಾಗಿಲ್ಲ. ಇನ್ನೊಂದೆಡೆ ಮಾಸಿಕ ಋತುಚಕ್ರದ ಬದಲಾವಣೆಯ ಬಗ್ಗೆ ಮಾತನಾಡಿದ ಮಹಿಳೆಯರಲ್ಲಿಯೂ ಕೂಡ ಗಂಭೀರ ಪ್ರಕರಣಗಳು ಇರಲಿಲ್ಲ. ಅನೇಕ ಮಹಿಳೆಯರು ತಮ್ಮ ಮಾಸಿಕ ಋತುಚಕ್ರ ಅವಧಿಗೂ ಮೊದಲೇ ಬಂದವು ಎಂದು ಹೇಳಿದ್ದರೆ, ಕೆಲವರು ತಡವಾಗಿ ಬಂದಿವೆ ಎಂದು ಎಂದಿದ್ದಾರೆ. ಹೆವಿ ಪಿರಿಯಡ್ಸ್ ಹಾಗೂ ಲೈಟ್ ಪಿರಿಯಡ್ಸ್ ಪ್ರಕರಣಗಳು ಕೂಡ ಕಂಡುಬಂದಿವೆ ಆದರೆ, ಅವೂ ಕೂಡ ತುಂಬಾ ವಿರಳವಾಗಿವೆ ಎನ್ನಲಾಗಿದೆ.
ಇದನ್ನೂ ಓದಿ-Cheapest Corona Vaccine: ಭಾರತದ ಅತ್ಯಂತ ಅಗ್ಗದ ವ್ಯಾಕ್ಸಿನ್ Corbevax ಶೀಘ್ರದಲ್ಲಿಯೇ ಬಿಡುಗಡೆ
ಒತ್ತಡ ಕೂಡ ಒಂದು ಕಾರಣ
Menstrual Cycle ಮೇಲೆ ಎನ್ವಿರಾನ್ಮೆಂಟ್ ಸ್ಟ್ರೆಸ್ ಪ್ರಭಾವ ಮೇಲೆ ಆಧಾರಿತವಾಗಿರುವ ಕ್ಲೆನ್ಸಿ ಜಿನ್ ಸಂಶೋಧನೆಯ ಪ್ರಕಾರ, ಈ ಬದಲಾವಣೆ ತೀರಾ ಕಡಿಮೆ ಮಹಿಳೆಯರಲ್ಲಿ ಕಂಡುಬಂದಿವೆ ಎನ್ನಲಾಗಿದೆ. ಅಷ್ಟೇ ಅಲ್ಲ ಒಂದು ವೇಳೆ ಬದಲಾವಣೆ ಕಂಡು ಬಂದರೂ ಕೂಡ ಅದು ತುಂಬಾ ಕಡಿಮೆ ಅವಧಿಗೆ ಮಾತ್ರ ಕಂಡುಬಂದಿವೆ ಎನ್ನಲಾಗಿದೆ. ಕೇವಲ ಒಂದಿಬ್ಬರಲ್ಲಿ ಮಾತ್ರ ಈ ಬದಲಾವಣೆಗಳು ಕಂಡುಬಂದಿವೆ ಎಂದು ಕ್ಲೆನ್ಸಿ ಜಿನ್ ಹೇಳಿದ್ದಾರೆ.
ಇದನ್ನೂ ಓದಿ- WHO Big Statement: ಭಾರತದಲ್ಲಿ ಕಂಡುಬಂದ Covid-19ನ 'ಬಿ.1.617 ರೂಪಾಂತರಿ ಕಳವಳ ಹೆಚ್ಚಿಸಿದೆ
ಇದಲ್ಲದೆ ಮಹಾಮಾರಿಯ ಕಾಲದಲ್ಲಿ ಜನರ ಮೇಲಿರುವ ಒತ್ತಡದಿಂದಲೂ ಕೂಡ ಈ ಬದಲಾವಣೆಗಳು ಕಂಡು ಬಂದಿರುವ ಸಾಧ್ಯತೆ ಇದೆ . ಆದರೆ, ಕೊವಿಡ್-19 ವ್ಯಾಕ್ಸಿನ್ ಹಾಗೂ ಪಿರಿಯಡ್ಸ್ ನಲ್ಲಿನ ಬದಲಾವಣೆ ಕುರಿತು ಇನ್ನೂ ಹೆಚ್ಚಿನ ರಿಸರ್ಚ್ ನಡೆಸಬೇಕಾಗುವ ಅವಶ್ಯಕತೆ ಇದೆ ಎಂದು ಕ್ಲೆನ್ಸಿ ಹೇಳಿದ್ದಾರೆ.
ಇದನ್ನೂ ಓದಿ- Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ