Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO

Covid 19 India Latest Update: ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕರೋನಾ ವೈರಸ್ ರೂಪಾಂತರಿಗಳಾದ  B.1.617.1 ಮತ್ತು B.1.617.2ಗಳನ್ನು ಇನ್ನು ಮುಂದೆ 'ಕಪ್ಪಾ' ಮತ್ತು 'ಡೆಲ್ಟಾ' ('Delta' and 'Kappa') ಎಂದು ಕರೆಯಲಾಗುವುದು.

Written by - Nitin Tabib | Last Updated : Jun 1, 2021, 05:35 PM IST
  • ಕೊರೊನಾ ವೈರಸ್ ರೂಪಾಂತರಿಗಳಿಗೆ ನಾಮಕರಣ ಸೂಚಿಸಿದ WHO.
  • ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ವೈರಸ್ ರೂಪಾಂತರಿಗಳಿಗೆ Delta ಮತ್ತು Kappa ಹೆಸರು
  • ಬ್ರೆಜಿಲ್ ರೂಪಾಂತರಿಗೆ Gama ಹಾಗೂ ದ.ಆಫ್ರಿಕಾ ರೂಪಾಂತರಿಗೆ Beta ಮತ್ತು ಬ್ರಿಟನ್ ರೂಪಾನ್ತರಿಗೆ 'Alpha' ಹೆಸರು.
Corona Virus Nomination By WHO: ಭಾರತದಲ್ಲಿ ದೊರೆತೆ Covid-19 ರೂಪಾಂತರಿಗಳಿಗೆ ನಾಮಕರಣ ಮಾಡಿದ WHO title=
Coronavirus Nomination By WHO(File Photo)

Covid 19 India Latest Update: ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕರೋನಾ ವೈರಸ್ ರೂಪಾಂತರಿಗಳಾದ  B.1.617.1 ಮತ್ತು B.1.617.2ಗಳನ್ನು ಇನ್ಮುಂದೆ  'ಕಪ್ಪಾ' ಮತ್ತು 'ಡೆಲ್ಟಾ' ('Delta' and 'Kappa') ಎಂದು ಕರೆಯಲಾಗುವುದು. ವಾಸ್ತವದಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಕರೋನಾ ವೈರಸ್‌ನ ವಿಭಿನ್ನ ರೂಪಾಂತರಗಳ ನಾಮಕರಣಕ್ಕೆ (Coronavirus Nomination) ಹೊಸ ವ್ಯವಸ್ಥೆಯನ್ನು (Coronavirus Nominiclature) ಘೋಷಿಸಿದೆ. ಇದುವರೆಗೆ ಈ ವಿಭಿನ್ನ ರೂಪಾಂತರಿಗಳನ್ನು ಅವುಗಳ ತಾಂತ್ರಿಕ ಲೆಟರ್-ಸಂಖ್ಯೆಯ ಕೋಡ್ ನಿಂದ ಗುರುತಿಸಲಾಗುತ್ತಿತ್ತು ಅಥವಾ ಆಯಾ ದೇಶದ ವೇರಿಯಂಟ್ ರೂಪದಲ್ಲಿ ಗುರುತಿಸಲಾಗುತ್ತಿತ್ತು.

Coronavirus Nomination: ಈ ನಾಮಕರಣವನ್ನು ತಟಸ್ಥ ಮತ್ತು ಸುಲಭ ಮಾಡಲು ವೈರಸ್‌ನ ಅತ್ಯಂತ 'ಆತಂಕಕಾರಿ' ರೂಪಾಂತರವನ್ನು ಇನ್ಮುಂದೆ ಗ್ರೀಕ್ ಭಾಷೆಯ ಅಕ್ಷರಗಳ (Greek Letters) ಮೂಲಕ ಗುರುತಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದೆ. ಇದೆ ರೀತಿ ಬ್ರಿಟನ್‌ನಲ್ಲಿ ಮೊದಲು ಕಾಣಿಸಿಕೊಂಡ ಮತ್ತು ಇಂದಿಗೂ ಅದನ್ನು ಬಿ .1.1.7 ಕರೆಯಲಾಗುತ್ತಿರುವ ವೈರಸ್ ರೂಪಾಂತರವನ್ನು ಇನ್ಮುಂದೆ  "ಆಲ್ಫಾ" ಸ್ವರೂಪ ಎಂದು ಕರೆಯಲಾಗುವುದು.

ಇದನ್ನೂ ಓದಿ- Sputnik V Vaccines : ಭಾರತಕ್ಕೆ ತಲುಪಿದ 3 ಮಿಲಿಯನ್ ಸ್ಪುಟ್ನಿಕ್ V ಲಸಿಕೆ!

Coronavirus Nominiclature: ವೈರಸ್ ನ B.1.351 ವೇರಿಯಂಟ್ ಅನ್ನು ಇದುವರೆಗೆ ದಕ್ಷಿಣ ಆಫ್ರಿಕಾ ರೂಪಾಂತರಿ ಎನ್ನಲಾಗುತ್ತಿತ್ತು. ಆದರೆ, ಇನ್ಮುಂದೆ ಅದನ್ನು 'ಬೀಟಾ' ಹಾಗೂ ಬ್ರೆಜಿಲ್ ನಲ್ಲಿ ಪತ್ತೆಯಾದ ವೈರಸ್ ರೂಪಾಂತರಿಯನ್ನು 'ಗಾಮಾ' (Gama) ಎಂದು ಕರೆಯಲಾಗುವುದು. ಭಾರತದಲ್ಲಿ ಎಲ್ಲಕ್ಕಿಂತ ಮೊದಲು ಕಂಡುಬಂದ ವೈರಸ್ ಸ್ವರೂಪವನ್ನು 'ಡೆಲ್ಟಾ' (Delta) ಎಂದು ಕರೆಯಲಾಗುವುದು. ಇನ್ನು ಮುಂದೆಯೂ ಕೂಡ ಕಂಡು ಬರುವ ಹೊಸ ಅಪಾಯಕಾರಿ ಸ್ವರೂಪಗಳನ್ನು ಕೂಡ ಇದೆ ಸರಣಿಯಲ್ಲಿ ಹೆಸರನ್ನಿಡಲಾಗುವುದು. ಈ ಹೊಸ ನಾಮಕರಣ ಪದ್ಧತಿ ತಜ್ಞರ  ಗುಂಪಿನ ಕೊಡುಗೆಯಾಗಿದೆ ಎಂದು WHO ಹೇಳಿದೆ.

ಇದನ್ನೂ ಓದಿ-'ಕಣ್ಣಿಗೆ ಬ್ಲಾಕ್ ಫಂಗಸ್ ಬಂದ್ರೆ ಕಣ್ಣು ತೆಗೆಯಲೇ ಬೇಕಾಗುತ್ತದೆ'

ಮೂರು ವಾರಗಳ ಹಿಂದೆ ನಾವೆಲ್ ಕೊರೊನಾ ವೈರಸ್ ನ  B.1.617 ರೂಪಾಂತರಿಯನ್ನು ಮಾಧ್ಯಮಗಳು ಭಾರತೀಯ ಸ್ವರೂಪ ಎಂದು ಕರೆದ ಕಾರಣ ಭಾರತ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಈ ಕುರಿತು ಸ್ಪಷ್ಟೀಕರಣ ನೀಡಿದ್ದ ಕೇಂದ್ರ ಆರೋಗ್ಯ ಸಚಿವಾಲಯ, "ವಿಶ್ವ ಆರೋಗ್ಯ ಸಂಸ್ಥೆ ತನ್ನ ದಾಖಲೆಗಳಿಗೆ ಈ ಸ್ವರೂಪಕ್ಕೆ 'ಭಾರತೀಯ' ಶಬ್ದದ ಪ್ರಯೋಗ ಮಾಡಿಲ್ಲ" ಎಂದಿತ್ತು. ಹೀಗಿರುವಾಗ ಇದೀಗ ವಿಶ್ವ ಆರೋಗ್ಯ ಸಂಸ್ಥೆ ವೈರಸ್ನ B.1.617.1 ರೂಪಾಂತರಿಗೆ 'ಕಪ್ಪಾ' (Kappa) ಎಂಬ ಹೆಸರನ್ನಿಟ್ಟಿದೆ. ವೈರಸ್ ನ ಈ ಎರಡೇ ಸ್ವರೂಪಗಳು ಮೊಟ್ಟಮೊದಲು ಭಾರತದಲ್ಲಿ ಕಂಡುಬಂದಿದ್ದವು.

ಇದನ್ನೂ ಓದಿ- 'Patient Su': ಸಿಕ್ ಹಾಕೊಂಡ್ಲು 'ಪೇಶಂಟ್ ಸೂ', ಇನ್ನು ಚೀನಾ 'ಖೇಲ್ ಖತಂ'

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News