Coronavirus: ಒಂದು ವೇಳೆ ನೀವು ಈ ಎಚ್ಚರಿಕೆ ವಹಿಸದೆ ಹೋದಲ್ಲಿ ಬಂದ್ ಆಗಲಿದೆಯಂತೆ Internet..!
ಕೊರೊನಾವೈರಸ್ ನಿಂದ ಉಂಟಾಗುವ ಸೋಂಕಿನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಸಂಪೂರ್ಣ ದೇಶದಲ್ಲಿ ಲಾಕ್ ಡೌನ್ ಘೋಷಿಸಲಾಗಿದೆ. ಇದರಿಂದ ದೇಶದ ನಾಗರಿಕರು ಮನೆಯಲ್ಲಿಯೇ ತಮ್ಮನ್ನು ತಾವು ಬಂಧಿಸಿಕೊಂಡಿದ್ದಾರೆ ಹಾಗೂ ಇಂಟರ್ನೆಟ್ ನ ಬಳಕೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ವೃದ್ಧಿಯಾಗಿದೆ. ನೆಟ್ವರ್ಕ್ ಮೇಲೆ ಶೇ.30 ರಿಂದ ಶೇ.40 ರಷ್ಟು ಹೆಚ್ಚುವರಿ ಒತ್ತಡ ಬೀಳಲಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಇಂಟರ್ನೆಟ್ ಸ್ಪೀಡ್ ಕೂಡ ಕಡಿಮೆಯಾಗುತ್ತಿದೆ.
ನವದೆಹಲಿ: ಕೊರೊನಾವೈರಸ್ ಪ್ರಕೋಪದ ನಡುವೆ ಒಂದೆಡೆ ಜನರು ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದಾರೆ ಇನ್ನೊಂದೆಡೆ ಕೋರೋಣ ಇಂಟರ್ನೆಟ್ ಸೇವೆಯನ್ನು ಕೂಡ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆರಂಭಿಸಿದೆ. ವರ್ಕ್ ಫ್ರಮ್ ಹೋಂ, ಸ್ಟಡಿ ಫ್ರಮ್ ಹೋಂ ಹಿನ್ನೆಲೆ ವಿಶ್ವಾದ್ಯಂತ ಇಂಟರ್ನೆಟ್ ಮೇಲೆ ಭಾರಿ ಒತ್ತಡ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಭಾರತದಲ್ಲಿಯೂ ಕೂಡ ಲಾಕ್ ಡೌನ್ ಹಿನ್ನೆಲೆ ಇಂಟರ್ನೆಟ್ ನ ಬಳಕೆ ಶೇ.30 ರಿಂದ ಶೇ. 40 ರಷ್ಟು ಹೆಚ್ಚಾಗಿದೆ. ಇದರಿಂದ ಇಂಟರ್ನೆಟ್ ವೇಗ ಸೊರಗಲಾರಂಭಿಸಿದೆ ತಪ್ಪಾಗಲಾರದು.
ಬೆಂಗಳೂರಿನಂತಹ ನಗರದಲ್ಲಿ ಒಂದೆಡೆ ಪ್ರತಿ ವ್ಯಕ್ತಿ ಇಂಟರ್ನೆಟ್ ಬಳಕೆ ಶೇ.100 ರಷ್ಟು ಹೆಚ್ಚಾಗಿದ್ದರೆ ಇನ್ನೊಂದೆಡೆ ಹೈದರಾಬಾದ್ ನಲ್ಲಿ ಇದರ ದರ ಶೇ.50ರಷ್ಟಿದೆ. ದೆಹಲಿ-NCR ಹಾಗೂ ಮುಂಬೈಗಳಂತಹ ಮಹಾನಗರಗಳಲ್ಲಿ ಇಂಟರ್ನೆಟ್ ನ ಬಳಕೆ ಶೇ.30 ರಿಂದ ಶೇ.40 ರಷ್ಟು ಹೆಚ್ಚಳವಾಗಿದೆ. ಇದನ್ನೆಲ್ಲಾ ಗಮನಿಸುತ್ತಿದ್ದರೆ ಕೊರೊನಾ ವೈರಸ್ ಇದೀಗ ಇಂಟರ್ನೆಟ್ ಅನ್ನು ಕೂಡ ತನ್ನ ತೆಕ್ಕೆಗೆ ಸೆಳೆಯಲಾರಂಭಿಸಿದೆ. ಇದಕ್ಕೆ ಸಂಬಂಧಿಸಿದ ಅತಿ ದೊಡ್ಡ ಸಮಸ್ಯೆ ಎಂದರೆ, ಪ್ರತಿ ವ್ಯಕ್ತಿ ಇಂಟರ್ನೆಟ್ ಬಳಕೆಯಲ್ಲಿ ನಿರಂತರ ಏರಿಕೆಯಾಗುತ್ತಿದೆ. ಅಂದರೆ, ಲಾಕ್ ಡೌನ್ ನಿಂದ ಇಂಟರ್ನೆಟ್ ಮೇಲೆ ಹೆಚ್ಚಿನ ಒತ್ತಡ ನಿರ್ಮಾಣಗೊಳ್ಳುತ್ತಿದೆ.
ಸದ್ಯದ ಸ್ಥಿತಿ ಏನು?
ಇಂಟರ್ನೆಟ್ ಸರ್ವಿಸ್ ಪ್ರೋವೈಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಕಾರ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಸುಮಾರು 68.7 ಕೋಟಿ ಇಂಟರ್ನೆಟ್ ಬಳಕೆದಾರರಿದ್ದು, ಇವರಲ್ಲಿ 66 ಕೋಟಿಗೂ ಅಧಿಕ ಜನರು ವೈಯರ್ ಲೆಸ್ ಬಳಕೆದಾರರಾಗಿದ್ದಾರೆ. ಅಂದರೆ, ಈ ಜನರು ಮೊಬೈಲ್ ಇಂಟರ್ನೆಟ್ ನ ಬಳಕೆ ಮಾಡುತ್ತಾರೆ. ಇವರನ್ನು ಹೊರತುಪಡಿಸಿದರೆ 2.3 ಕೋಟಿ ಇಂಟರ್ನೆಟ್ ಬಳಕೆದಾರರು ವೈಯರ್ಡ್ ಇಂಟರ್ನೆಟ್ ಬಳಕೆದಾರರಾಗಿದ್ದು, ಇವರು ಲ್ಯಾಂಡ್ ಲೈನ್ ಅಥವಾ ಬ್ರಾಡ್ ಬ್ಯಾಂಡ್ ಕೇಬಲ್ ಮೂಲಕ ಇಂಟರ್ನೆಟ್ ಬಳಸುತ್ತಾರೆ ಮತ್ತು 75 ಲಕ್ಷ ಜನರು ಫಿಕ್ಸಡ್ ವೈಯರ್ ಲೆಸ್ ಇಂಟರ್ನೆಟ್ ಬಳಕೆಯನ್ನು ಮಾಡುತ್ತಾರೆ. ವೈಯರ್ ಲೆಸ್ ನೆಟ್ವರ್ಕ್ ಮೇಲೆ ಪ್ರತಿ ಗ್ರಾಹಕ ಪ್ರತಿ ತಿಂಗಳು ಸರಾಸರಿ 10.37 GB ಡೇಟಾ ಬಳಕೆ ಮಾಡುತ್ತಾನೆ.
ಕೊಚ್ಚಿಯಲ್ಲಿ ಹಾಳಾಗಿ ಬಿದ್ದಿದೆ ಸಬ್ ಮರೈನ್ ಕೇಬಲ್
ಈ ಕುರಿತು ಹೇಳಿಕೆ ನೀಡಿರುವ ಪ್ಯಾರಾಮೌಂಟ್ ಕಮ್ಯೂನಿಕೇಶನ್ ಲಿಮಿಟೆಡ್, ಭಾರತದಲ್ಲಿ ಲಾಕ್ ಡೌನ್ ಹಿನ್ನೆಲೆ ಇಂಟರ್ ನೆಟ್ ನ ಬಳಕೆಯಲ್ಲಿ ಶೇ.30 ರಿಂದ ಶೇ.40ರಷ್ಟು ಏರಿಕೆಯಾಗಿದೆ. ಇದರ ಜೊತೆಗೆ ಭಾರತವನ್ನು ವಿಶ್ವದ ಇತರೆ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂರು ಸೇಫ್ ಕೇಬಲ್ ಗಳಲ್ಲಿ ಮತ್ತು ಕೊಚ್ಚಿಯಲ್ಲಿ ಬೀಡುಬಿಟ್ಟಿರುವ ಸಬ್ ಮರೈನ್ ಕೇಬಲ್ ಕಳೆದ ಹಲವು ದಿನಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಇಂಟರ್ನೆಟ್ ಸೇವೆಯಲ್ಲಿ ಬಿರುಕು ಉಂಟಾಗಲು ಪ್ರಾರಂಭಿಸಿದೆ ಎಂದ ಸಂಸ್ಥೆ, ಮುಂದಿನ ಒಂದು ವಾರದಲ್ಲಿ ಇದು ಸರಿಯಾಗುವ ಸಾಧ್ಯತೆ ಇದೆ ಎಂದು ಹೇಳಿದೆ. ಇದು ಒಂದು ವೇಳೆ ಸಾಧ್ಯವಾದರೆ ಭಾರತದಲ್ಲಿನ ಇಂಟರ್ನೆಟ್ ಕ್ಷಮತೆ ಶೇ.20ರಷ್ಟು ವೃದ್ಧಿಯಾಗಲಿದೆ. ಆದರೂ ಸಹಿತ ಲಾಕ್ ಡೌನ್ ನಿಂದ ಭಾರತದಲ್ಲಿ ಇಂಟರ್ನೆಟ್ ಬೇಡಿಕೆ ಎಷ್ಟೊಂದು ಹೆಚ್ಚಾಗಿದೆ ಎಂದರೆ ಮುಂಬರುವ ದಿನಗಳಲ್ಲಿ ಯೋಚಿಸಿ ಇಂಟರ್ನೆಟ್ ಬಳಕೆ ಮಾಡುವ ಸ್ಥಿತಿ ನಿರ್ಮಾಣಗೊಳ್ಳಲಿದೆ ಎನ್ನಲಾಗಿದೆ. ನೆಟ್ ಫ್ಲಿಕ್ಸ್, ಸ್ಟಾರ್, ಅಮೆಜಾನ್ ಗಳಂತಹ ಎಲ್ಲ ಲೈವ್ ಸ್ಟ್ರೀಮಿಂಗ್ ಸೇವೆ ಒದಗಿಸುವ ಕಂಪನಿಗಳು COAI ಮನವಿಯ ಮೇರೆಗೆ ಈಗಾಗಲೇ ತಮ್ಮ ತಮ್ಮ HD ಕಂಟೆಂಟ್ ಅನ್ನು SDಗೆ ಬದಲಾವಣೆ ಮಾಡಿದ್ದು, ಇಂದರಿಂದ ಇಂಟರ್ನೆಟ್ ನ ಕಡಿಮೆ ಬಳಕೆಯಾಗಲಿದೆ.
ಏನು ಮಾಡುವ ಅವಶ್ಯಕತೆ ಇದೆ
ಕೊರೊನಾ ವೈರಸ್ ಹಿನ್ನೆಲೆ ಜನರು ತಮ್ಮ ತಮ್ಮ ಮನೆಯಲ್ಲಿ ಲಾಕ್ ಡೌನ್ ಆಗಿದ್ದಾರೆ. ಈ ನಡುವೆ ಇಂಟರ್ನೆಟ್ ನ ಬಳಕೆಯಲ್ಲಿ ವ್ಯಾಪಕ ವೃದ್ಧಿಯಾಗಿದೆ. ಈ ಸ್ಥಿತಿಯನ್ನು ಪರಿಗಣಿಸಿ ದೇಶದ ನಾಗರಿಕರೂ ಕೂಡ ಇಂಟರ್ನೆಟ್ ನ ಬಳಕೆಯನ್ನು ಯೋಚಿಸಿ ಮಾಡುವ ಅಗತ್ಯತೆ ಇದೆ. ಸಂಕಷ್ಟದ ಈ ಪರಿಸ್ಥಿತಿಯಲ್ಲಿ ಕಮ್ಯೂನಿಕೇಶನ್ ನ ಅತಿ ದೊಡ್ಡ ನೆಟ್ವರ್ಕ್ ಇದೀಗ ಇಂಟರ್ನೆಟ್ ಮಾತ್ರ ಇದ್ದು, ಈ ಸೇವೆ ಸೊರಗಲಾರಂಭಿಸಿದರೆ, ಕೇವಲ ಭಾರತ ಅಷ್ಟೇ ಅಲ್ಲ ಇಡೀ ವಿಶ್ವಾದ್ಯಂತ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ಸಲಹೆಗಳೇನು?
ಸಾಮಾಜಿಕ ಮಾಧ್ಯಮಗಳ ಬಳಕೆ ಕಡಿಮೆ ಮಾಡಿ
ಅತ್ಯಾವಶ್ಯಕ ಎನಿಸಿದರೆ ಮಾತ್ರ ವಿಡಿಯೋಗಳನ್ನು ಕಳುಹಿಸಿ. ಅನಾವಶ್ಯಕವಾಗಿ ವಿಡಿಯೋ ಗಳನ್ನು ಕಳುಹಿಸಬಾರದು.
ಗುಡ್ ಮಾರ್ನಿಂಗ್, ಗುಡ್ ನೈಟ್ ಸಂದೇಶಗಳನ್ನು ಸದ್ಯದ ಮಟ್ಟಿಗೆ ನಿಲ್ಲಿಸಬೇಕು.
ವಿಡಿಯೋ ಶೇರಿಂಗ್ ಕಡಿಮೆ ಮಾಡುವ ಅಗತ್ಯತೆ ಇದೆ.