ನವದೆಹಲಿ: ಕೋವಿಡ್ -19 ಪರೀಕ್ಷೆಗಾಗಿ ನೂತನ ಮತ್ತು ಪರಿಣಾಮಕಾರಿ ವಿಧಾನಗಳನ್ನು ರೂಪಿಸುವಲ್ಲಿ ವಿಜ್ಞಾನಿಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಈ ಸರಣಿಯಲ್ಲಿ ಇದೀಗ ವಿಜ್ಞಾನಿಗಳು ಸ್ಮಾರ್ಟ್ ವಾಚ್‌ಗಳ ಸಿದ್ಧಪಡಿಸಿದ್ದು, ಈ ಸ್ಮಾರ್ಟ್ ವಾಚ್ ಕರೋನಾ ವೈರಸ್ ರೋಗ ಲಕ್ಷಣಗಳು ಕಂಡು ಬರುವುದಕ್ಕೂ ಮುನ್ನವೇ ಅದನ್ನು ಕಂಡುಹಿಡಿಯಬಹುದು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಇದಕ್ಕಾಗಿ, ಫಿಟ್‌ಬಿಟ್ (ಸ್ಮಾರ್ಟ್‌ವಾಚ್) ಧರಿಸಿದ ಸುಮಾರು ಒಂದು ಸಾವಿರ ಜನರ ಮೇಲೆ ಅಧ್ಯಯನ ನಡೆಸಲಾಗುತ್ತಿದ್ದು, ಸ್ಮಾರ್ಟ್ ವಾಚ್‌ ಮೂಲಕ ಕರೋನಾ ರೋಗವನ್ನುವನ್ನು ನಿಖರವಾಗಿ ಕಂಡು ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ.


ವಾಸ್ತವವಾಗಿ, ಲಂಡನ್‌ನ ಕಿಂಗ್ಸ್ ಕಾಲೇಜಿನ ವಿಜ್ಞಾನಿಗಳು ಹೃದಯ ಬಡಿತ, ದೈಹಿಕ ಚಟುವಟಿಕೆ ಮತ್ತು ನಿದ್ರೆಯ ಮಾದರಿಗಳಲ್ಲಿನ ಬದಲಾವಣೆಗಳು ಕರೋನಾ ವೈರಸ್ ಪ್ರಕರಣಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ. ಈ ಬದಲಾವಣೆಗಳನ್ನು ಧರಿಸಬಹುದಾದ ಸ್ಮಾರ್ಟ್ ವಾಚ್ ಮೂಲಕ ಪತ್ತೆಹಚ್ಚುವ ಮೂಲಕ, ದೇಹದಲ್ಲಿ ಜ್ವರ, ಕೆಮ್ಮು ಮುಂತಾದ ಲಕ್ಷಣಗಳು ಹೊರಹೊಮ್ಮುವ ಮೊದಲೇ ಸೋಂಕನ್ನು ಕಂಡುಹಿಡಿಯಬಹುದು ಎಂದಿದ್ದಾರೆ.


ಇದಕ್ಕಾಗಿ ವಿಜ್ಞಾನಿಗಳು 'ಮಾಸ್ ಸೈನ್ಸ್' ಹೆಸರಿನ ಉಚಿತ ಆ್ಯಪ್ ಬಳಸಿದ್ದಾರೆ. ಈ ಅಪ್ಲಿಕೇಶನ್ ಅನ್ನು ಸ್ಮಾರ್ಟ್ ವಾಚ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಸ್ಮಾರ್ಟ್ ವಾಚ್ ನಲ್ಲಿ ಅಳವಡಿಸಲಾಗಿರುವ ಅಲರ್ಟ್ ಸಿಸ್ಟಮ್ ಮೂಲಕ ಅಧ್ಯಯನದಲ್ಲಿ ಶಾಮೀಲಾಗಿರುವ ಸಾವಿರಾರು ಜನರ ಸಂಕೇತಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ.


ಕೊರೊನಾ ಸೋಂಕನ್ನು ಹೀಗೆ ಪತ್ತೆ ಹಚ್ಚಲಾಗುವುದು
ಸಾಮಾನ್ಯವಾಗಿ ಕೊರೊನಾ ವೈರಸ್ ಲಕ್ಷಣಗಳು ಹೊರಹೊಮ್ಮಲು ಹಲವು ದಿನಗಳ ಕಾಲಾವಕಾಶ ಬೇಕಾಗುತ್ತದೆ. ಇತಹುದ್ರಕ್ಲ್ಲಿ ಸ್ಮಾರ್ಟ್ ವಾಚ್ ಮೂಲಕ ಸೂಚಿಸಲಾಗಿರುವ ಶರೀರದಲ್ಲಾಗುವ ಬದಲಾವಣೆಯ ಸಾಕ್ಷಾಧಾರಗಳು ಸಮಯಕ್ಕೂ ಮುನ್ನವೇ ಸೋಂಕನ್ನು ಪತ್ತೆಹಚ್ಚಲು ಸಹಕಾರಿಯಾಗಲಿವೆ. ಸ್ಮಾರ್ಟ್ ವಾಚ್ ಧರಿಸಿರುವ ಕೊವಿಡ್ 19 ರೋಗಿಗಳು ಕೆಮ್ಮು, ಜ್ವರ, ರುಚಿ-ವಾಸನೆಯಲ್ಲಿ ಬದಲಾವಣೆ ಇತ್ಯಾದಿ ಲಕ್ಷಣಗಳನ್ನೂ ಕಾಣಿಸಿಕೊಳ್ಳುವ ಕೆಲ ದಿನಗಳು ಮುಂಚಿತವಾಗಿ ತಮ್ಮ ಆರೋಗ್ಯದ ಸಂಕೇತಗಳಲ್ಲಿ ಸಣ್ಣ ಸಣ್ಣ ಬದಲಾವಣೆಯನ್ನು ಗಮನಿಸಿದ್ದಾರೆ. ವಿಜ್ಞಾನಿಗಳ ಪ್ರಕಾರ ಲಕ್ಷಣಗಳು ಆರಂಭವಾಗುವುದಕ್ಕು ಮುನ್ನವೇ ಕೊವಿಡ್ 19 ಪ್ರಕರಣಗಳನ್ನು ಪತ್ತೆಹಚ್ಚಬಹುದಾದ ಈ ಸಾಧನ ಭಾರಿ ಬದಲಾವಣೆ ತರುವ ಸಾಧ್ಯತೆ ಇದೆ ಎಂದಿದ್ದಾರೆ.