US Clears Covid Boosters For All Adults:18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲಾ ಜನರಿಗೆ ಕೋವಿಡ್ ಲಸಿಕೆಯ ಬೂಸ್ಟರ್ ಡೋಸ್ ಅನ್ನು ಯುನೈಟೆಡ್ ಸ್ಟೇಟ್ಸ್ ಶುಕ್ರವಾರ ಅನುಮೋದಿಸಿದೆ. ಲಸಿಕೆ ತಯಾರಕ ಕಂಪನಿಗಳಾಗಿರುವ ಫೈಜರ್ ಮತ್ತು ಮಾಡರ್ನಾ (Pfizer And Moderna) ಹೊರಡಿಸಿದ ಹೇಳಿಕೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ. "ನಾವು ಚಳಿಗಾಲ ಪ್ರವೇಶಿಸುತ್ತಿರುವ ಹಿನ್ನೆಲೆ ಈ ತುರ್ತು ಬಳಕೆಯ ಅನುಮತಿ ನಿರ್ಣಾಯಕವಾಗಿದೆ ಮತ್ತು ಈ ಋತುವಿನ COVID-19 ಮತ್ತು ಆಸ್ಪತ್ರೆಗಳಲ್ಲಿ ರೋಗಿಗಳ ಭರ್ತಿಯಾಗುವ ಸಂಖ್ಯೆಯಲ್ಲಿ ಏರಿಕೆಯಾಗುತ್ತದೆ" ಎಂದು ಮಾಡರ್ನಾ ಸಿಇಒ ಸ್ಟೀಫನ್ ಬ್ಯಾನ್ಸೆಲ್ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ವಯಸ್ಕರಿಗೆ ಮಾಡರ್ನಾ ಮತ್ತು ಫಿಜರ್‌ನ COVID ಲಸಿಕೆಯ (Covid-19 Booster Shot) ಬೂಸ್ಟರ್ ಶಾಟ್‌ಗಳನ್ನು ಅಧಿಕೃತಗೊಳಿಸಿದೆ. ಈ ನಿರ್ಧಾರವು ಸಾಮಾನ್ಯ ಜನರಿಗೆ ಹೆಚ್ಚುವರಿ ಪ್ರಮಾಣವನ್ನು ನೀಡುವ ಬಿಡೆನ್ ಆಡಳಿತದ ಯೋಜನೆಯ ನಿರ್ಣಾಯಕ ಭಾಗವನ್ನು ಪೂರ್ಣಗೊಳಿಸಲಿದೆ. 


ಇದನ್ನೂ ಓದಿ-Taliban: ಅಫ್ಘಾನ್ ಹುಡುಗಿಯರಿಗೆ ಸಿಹಿ ಸುದ್ದಿ, ಭೀಕರ ದೌರ್ಜನ್ಯದ ನಡುವೆ ಉತ್ತಮ ಕೆಲಸ ಮಾಡಿದ ತಾಲಿಬಾನ್


ಎರಡು ತಿಂಗಳ ವಿಳಂಬದ ನಂತರ ಮನ್ನಣೆ ದೊರೆತಿದೆ
ಸುಮಾರು ಎರಡು ತಿಂಗಳ ವಿಳಂಬದೊಂದಿಗೆ ಈ ಮನ್ನಣೆ ದೊರೆತಿದೆ ಎಂಬುದು ಇಲ್ಲಿ ಗಮನಾರ್ಹ. FDA ಗೆ ಸಲಹೆ ನೀಡುವ ವಿಜ್ಞಾನಿಗಳು ಸೆಪ್ಟೆಂಬರ್ 20 ರ ವಾರದಲ್ಲಿ ಎಲ್ಲಾ ವಯಸ್ಕರಿಗೆ ಬೂಸ್ಟರ್ ಅನ್ನು ವಿತರಿಸುವ ಆಡಳಿತದ ಮೂಲ ಯೋಜನೆಗಳನ್ನು ದತ್ತಾಂಶದ ಕೊರೆತೆಯ ಹಿನ್ನೆಲೆ ತಿರಸ್ಕರಿಸಿದ್ದರು. ಮೂರನೇ ಡೋಸ್ ಅನ್ನು ಬೆಂಬಲಿಸುವ ಡೇಟಾದ ಕೊರತೆಯನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದ್ದರು.  FDA ಆಕ್ಟಿಂಗ್ ಕಮಿಷನರ್ ಜಾನೆಟ್ ವುಡ್‌ಕಾಕ್ ಅವರೂ ಕೂಡ ಕಂಪನಿಗಳು ಸಲ್ಲಿಸಿದ ಹೊಸ ಡೇಟಾವನ್ನು ಪರಿಶೀಲಿಸಲು ಸಾಮಾನ್ಯ ಸಾರ್ವಜನಿಕ ಸಭೆಯಿಲ್ಲದೆ ಕಳೆದ ವಾರ ಪೂರಕಗಳನ್ನು ಅನುಮೋದಿಸಿದ್ದಾರೆ. ಮಾಡರ್ನಾ ಎರಡು ದಿನಗಳ ಹಿಂದೆ ತನ್ನ ಅರ್ಜಿಯನ್ನು ಮತ್ತೆ ಸಲ್ಲಿಸಿದೆ. ಶುಕ್ರವಾರ ಬೆಳಗ್ಗೆ ಕಂಪನಿಗಳು  ತನ್ನ ಈ ನಿರ್ಧಾರವನ್ನು ಪ್ರಕಟಿಸಿವೆ. 


ಇದನ್ನೂ ಓದಿ-OMG: ಈ ಕುರ್ಚಿ ಮೇಲೆ ಕುಳಿತ ತಕ್ಷಣ ಸಾವು ಸಂಭವಿಸುತ್ತದೆ, ಅದಕ್ಕೆ ಗೋಡೆಗೆ ನೇತುಹಾಕಲಾಗಿದೆ!


ಸಾಂಕ್ರಾಮಿಕ ರೋಗವು ಮುಂದುವರೆದಂತೆ ಸಾರ್ವಜನಿಕರನ್ನು ರಕ್ಷಿಸಲು ಏಜೆನ್ಸಿ ಹೆಚ್ಚು ಕಾರ್ಯನಿರ್ವಹಿಸಿದೆ ಎಂದು ವುಡ್‌ಕಾಕ್ ಹೇಳಿದ್ದಾರೆ. ಕೋವಿಡ್‌ನಿಂದ ಜನರು ಆಸ್ಪತ್ರೆಗೆ ದಾಖಲಾಗುವುದು ಅಥವಾ ಸಾಯುವುದನ್ನು ತಡೆಯಲು ಬೂಸ್ಟರ್ ಶಾಟ್‌ಗಳು ಉತ್ತಮ ಮಾರ್ಗವಾಗಿದೆ ಎಂದು ಅವರು ಹೇಳಿದ್ದಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಇನ್ನೂ ಬೂಸ್ಟರ್ ಡೋಸ್‌ಗಳ ವಿತರಣೆಯನ್ನು ಅಧಿಕೃತಗೊಳಿಸಬೇಕಾಗಿದೆ. ಜನರಿಗೆ ಶೀಘ್ರದಲ್ಲೇ ಬೂಸ್ಟರ್ ಡೋಸ್‌ಗಳನ್ನು ಅನ್ವಯಿಸುವ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. 


ಇದನ್ನೂ ಓದಿ-HIV AIDS:8 ವರ್ಷಗಳ ಹಿಂದೆ AIDSಗೆ ಗುರಿಯಾದಾಗ ಎಲ್ಲವು The End ಅನಿಸಿತು, ಆದ್ರೆ, ಯಾವುದೇ ಔಷಧಿ ಇಲ್ಲದೆ HIV ಸೋಲಿಸಿದ ಮಹಿಳೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.