Covishield: ಕೋವಿಶೀಲ್ಡ್‌ನ ಬೂಸ್ಟರ್ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು?

ಕೋವಿಡ್ ಲಸಿಕೆಯ  (Covid Vaccine) ಬೂಸ್ಟರ್ ಡೋಸ್‌ಗೆ (Booster Dose) ಸಂಬಂಧಿಸಿದಂತೆ, ಎಸ್‌ಐಐ ಅಧ್ಯಕ್ಷ ಸೈರಸ್ ಪೂನವಲ್ಲ ಕೋವಿಡ್ ಲಸಿಕೆಯ 2 ಡೋಸ್ ಪೂರ್ಣಗೊಂಡ 6 ತಿಂಗಳ ನಂತರ ಬೂಸ್ಟರ್ ಡೋಸ್ (ಮೂರನೇ ಡೋಸ್) ಅನ್ವಯಿಸಲು ಸಲಹೆ ನೀಡಿದ್ದಾರೆ.

Written by - Yashaswini V | Last Updated : Aug 14, 2021, 01:45 PM IST
  • 6 ತಿಂಗಳ ನಂತರ ಬೂಸ್ಟರ್ ಡೋಸ್ ಪಡೆಯಿರಿ
  • ಮೊದಲ 2 ಡೋಸ್‌ಗಳ ನಡುವಿನ ಸೂಕ್ತ ಮಧ್ಯಂತರವು 2 ತಿಂಗಳುಗಳು
  • ತಮ್ಮ 2 ಡೋಸ್‌ಗಳನ್ನು ಪೂರ್ಣಗೊಳಿಸಿದವರು, 6 ತಿಂಗಳ ನಂತರ ಬೂಸ್ಟರ್ ಡೋಸ್ ತೆಗೆದುಕೊಳ್ಳುವಂತೆ ಪೂನವಲ್ಲಾ ಮನವಿ
Covishield: ಕೋವಿಶೀಲ್ಡ್‌ನ ಬೂಸ್ಟರ್ ಡೋಸ್ ಅನ್ನು ಯಾವಾಗ ತೆಗೆದುಕೊಳ್ಳಬೇಕು? title=
Covishield Booster Dose

ನವದೆಹಲಿ: ಕರೋನಾವೈರಸ್‌ನ ಹೆಚ್ಚುತ್ತಿರುವ ಭೀತಿಯ ನಡುವೆ, ಅನೇಕ ದೇಶಗಳು ಕೋವಿಡ್ ಲಸಿಕೆಯ ಮೂರನೇ ಬೂಸ್ಟರ್ ಡೋಸ್ ಅನ್ನು ಅನುಮೋದಿಸಲು ಆರಂಭಿಸಿವೆ. ಭಾರತದಲ್ಲಿ ಇದುವರೆಗೆ ಈ ವಿಷಯದಲ್ಲಿ ಯಾವುದೇ ಘೋಷಣೆಯನ್ನು ಮಾಡಿಲ್ಲ. ಆದಾಗ್ಯೂ, ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಅಧ್ಯಕ್ಷ ಸೈರಸ್ ಪೂನವಲ್ಲ (Cyrus Poonawalla), ಕೋವಿಡ್ -19 ಲಸಿಕೆಯ ಮೂರನೇ ಡೋಸ್ ಅನ್ನು 6 ತಿಂಗಳ ನಂತರ ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.  ಕೋವಿಶೀಲ್ಡ್‌ (Covishield) ಲಸಿಕೆಯ 2 ಡೋಸ್‌ಗಳ ನಡುವಿನ ಸೂಕ್ತ ಮಧ್ಯಂತರವು 2 ತಿಂಗಳುಗಳು ಎಂದು ಹೇಳಲಾಗಿದೆ.

ಪ್ರತಿಕಾಯಗಳು ಕಡಿಮೆ:
ದಿ ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಸ್ವಲ್ಪ ಸಮಯದ ನಂತರ ಕೋವಿಡ್‌ಶೀಲ್ಡ್‌ನ (Covishield) ಪ್ರತಿಕಾಯಗಳು ಕೋವಿಡ್ ವಿರುದ್ಧ ಕಡಿಮೆಯಾಗುತ್ತವೆ ಎಂದು ಹೇಳಲಾಗಿದೆ. ಈ ಬಗ್ಗೆ ಸೈರಸ್ ಪೂನವಲ್ಲ (Cyrus Poonawalla) ಅವರನ್ನು ಕೇಳಿದಾಗ, 'ಇದು ನಿಜ, ಆದರೆ ನೆನಪಿನ ಕೋಶಗಳು ಇರುತ್ತವೆ' ಎಂದು ಹೇಳಿದರು.

ಇದನ್ನೂ ಓದಿ- Vaccine Mixing And Matching - Covishield ಹಾಗೂ Covaxin ಮಿಕ್ಸ್ ಲಸಿಕೆ ಹಾಕಿಸಿಕೊಂಡವರಲ್ಲಿ ಉತ್ತಮ ಪರಿಣಾಮ ಗಮನಿಸಲಾಗಿದೆ: ICMR

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಎಸ್‌ಐಐ ತಯಾರಿಸಿದ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಲಸಿಕೆಯ ಆವೃತ್ತಿ ಕೋವಿಶೀಲ್ಡ್. ಅಲ್ಲದೆ, ಈ ವರ್ಷದ ಆರಂಭದಲ್ಲಿ ಭಾರತ ಸರ್ಕಾರವು ತುರ್ತು ಬಳಕೆಗೆ ಅನುಮತಿಸಿದ ಮೊದಲ ಎರಡು ಕೋವಿಡ್ ಲಸಿಕೆಗಳಲ್ಲಿ (Covid Vaccine) ಕೋವಿಶೀಲ್ಡ್ ಕೂಡ ಒಂದು. ಇದರ ನಂತರ, ಕೋವಿಡ್ ಅನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಸಿಕೆ ಹಾಕುವಲ್ಲಿ ಕೋವಶೀಲ್ಡ್ ಜೊತೆಗೆ ಕೋವ್ಯಾಸಿನ್ ಅನ್ನು ವ್ಯಾಪಕವಾಗಿ ಬಳಸಲಾಯಿತು.

ಮೂರನೇ ಡೋಸ್ ತೆಗೆದುಕೊಂಡ ಪೂನವಲ್ಲ :
SII ನ ಅಧ್ಯಕ್ಷ ಸೈರಸ್ ಪೂನವಲ್ಲಾ, '6 ತಿಂಗಳ ನಂತರ ಪ್ರತಿಕಾಯಗಳು ಕಡಿಮೆಯಾಗುತ್ತವೆ, ಹಾಗಾಗಿ ನಾನು ಮೂರನೇ ಡೋಸ್ ತೆಗೆದುಕೊಂಡಿದ್ದೇನೆ. ನಮ್ಮ ಸುಮಾರು 8 ಸಾವಿರ ಉದ್ಯೋಗಿಗಳಿಗೆ ನಾವು ಮೂರನೇ ಡೋಸ್ ಕೂಡ ನೀಡಿದ್ದೇವೆ. ತಮ್ಮ 2 ಡೋಸ್‌ಗಳನ್ನು ಪೂರ್ಣಗೊಳಿಸಿದವರು, 6 ತಿಂಗಳ ನಂತರ ಬೂಸ್ಟರ್ ಡೋಸ್ (Booster Dose) ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ ಎಂದರು.

ಇದನ್ನೂ ಓದಿ- Covishield ಹಾಗೂ Covaxin ಲಸಿಕೆಗಳ Mix And Match ಅಧ್ಯಯನಕ್ಕೆ DCGI ಅನುಮತಿ

ಮತ್ತೊಂದೆಡೆ, ಲಸಿಕೆಯ 2 ಡೋಸ್‌ಗಳ ನಡುವಿನ ಆದರ್ಶ ವ್ಯತ್ಯಾಸದ ಬಗ್ಗೆಯೂ ಮಾಹಿತಿ ನೀಡಿದ ಸೈರಸ್ ಪೂನವಲ್ಲಾ, 'ಲಸಿಕೆಯ ಕೊರತೆಯಿಂದಾಗಿ, ಕೇಂದ್ರ ಸರ್ಕಾರವು ಕರೋನಾ ಲಸಿಕೆಯ ಅಂತರವನ್ನು 3 ತಿಂಗಳುಗಳಿಗೆ ಹೆಚ್ಚಿಸಿತು, ಆದರೆ 2 ಡೋಸ್‌ಗಳ ನಡುವೆ 2 ತಿಂಗಳ ಅಂತರವು ಸೂಕ್ತವಾಗಿದೆ' ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News