CSIR Covid-19 Infection study 2021:ಧೂಮಪಾನಿಗಳು ಹಾಗೂ ಶಾಕಾಹಾರಿಗಳಲ್ಲಿ ಕೊರೊನಾ ಅಪಾಯ ಕಡಿಮೆ - CSIR ಅಧ್ಯಯನ
CSIR Covid-19 Infection study 2021: 140 ವೈದ್ಯರು ಮತ್ತು ಸಂಶೋಧನಾ ವಿಜ್ಞಾನಿಗಳ ತಂಡವು SARS-Covey-2 ವಿರುದ್ಧ ಪ್ರತಿಕಾಯಗಳ ಉಪಸ್ಥಿತಿ ಮತ್ತು ಸೋಂಕಿನ ಅಪಾಯಕಾರಿ ಅಂಶವನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಕಂಡುಹಿಡಿಯಲು ಈ ಅಧ್ಯಯನ ನಡೆಸಿದ್ದಾರೆ.
CSIR Covid-19 Infection study 2021: ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ವತಿಯಿಂದ ಭಾರತ ಸರ್ಕಾರ ನಡೆಸಿರುವ ಸಮೀಕ್ಷೆಯಲ್ಲಿ ಧೂಮಪಾನಿಗಳು ಮತ್ತು ಸಸ್ಯಾಹಾರಿಗಳಲ್ಲಿ ಕೋವಿಡ್ -19 ಸೋಂಕಿನ ಅಪಾಯ ಕಡಿಮೆ ಎಂಬ ಅಂಶ ಬಹಿರಂಗವಾಗಿದೆ. ಕೋವಿಡ್ -19 ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದರೂ ಕೂಡ ಧೂಮಪಾನವು ಅದನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಏಕೆಂದರೆ ಧೂಮಪಾನವು ಲೋಳೆಯ (Mucus) ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಇದು ಫಸ್ಟ್ ಲೈನ್ ಆಫ್ ಡಿಫೆನ್ಸ್ ರೀತಿ ಕಾರ್ಯನಿರ್ವಹಿಸುತ್ತದೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
140 ವೈದ್ಯರು ಹಾಗೂ ಸಂಶೋಧನಾ ವಿಜ್ಞಾನಿಗಳ ಸಂಶೋಧನೆ (140 doctors and research scientists did research)
ಅಷ್ಟೇ ಅಲ್ಲ ಹೇರಳ ಪ್ರಮಾಣದಲ್ಲಿ ನಾರಿನ ಅಂಶ (Fiber) ಹೊಂದಿರುವ ಶಾಕಾಹಾರಿ ಭೋಜನ ಕೂಡ ಕೊವಿಡ್-19 ವಿರುದ್ಧ ರೋಗನಿರೋಧಕ ಶಕ್ತಿ ಒದಗಿಸುತ್ತದೆ ಎಂದು ಈ ಸಮೀಕ್ಷೆಯಲ್ಲಿ ತಿಳಿದುಬಂದಿದೆ. ಏಕೆಂದರೆ ಇದರಲ್ಲಿ ಹೊತ್ತಾಯ ಬ್ಯಾಕ್ಟೀರಿಯಾಗಳಲ್ಲಿ ಬದಲಾವಣೆ ಮಾಡಿ ಆಂಟಿ ಇನ್ಫ್ಲೇಮೆಟರೀ ರೀತಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಇರುತ್ತದೆ. 140 ವೈದ್ಯರು ಮತ್ತು ಸಂಶೋಧನಾ ವಿಜ್ಞಾನಿಗಳ ತಂಡವು SARS-Covey-2 ವಿರುದ್ಧ ಪ್ರತಿಕಾಯಗಳ ಉಪಸ್ಥಿತಿ ಮತ್ತು ಸೋಂಕಿನ ಅಪಾಯಕಾರಿ ಅಂಶವನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಕಂಡುಹಿಡಿಯಲು ಈ ಅಧ್ಯಯನ ನಡೆಸಿದ್ದಾರೆ.
ಸಿಎಸ್ಐಆರ್ (ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್) ನ 40 ಕ್ಕೂ ಹೆಚ್ಚು ಪ್ರಯೋಗಾಲಯಗಳು ಮತ್ತು ಕೇಂದ್ರಗಳಲ್ಲಿ ಕೆಲಸ ಮಾಡುವವರು ಮತ್ತು ನಗರಗಳು ಮತ್ತು ಅರೆ ನಗರ ಪ್ರದೇಶಗಳಲ್ಲಿನ ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 10,427 ಜನರನ್ನು ಈ ಅಧ್ಯಯನ ಒಳಗೊಂಡಿದೆ. ಇವರೆಲ್ಲರೂ ಸ್ವಯಂಪ್ರೇರಣೆಯಿಂದ ಅಧ್ಯಯನದಲ್ಲಿ ಭಾಗವಹಿಸಿದರು. ಈ ಮೊದಲು ಫ್ರಾನ್ಸ್‌ನಲ್ಲಿ ನಡೆದ ಎರಡು ಅಧ್ಯಯನಗಳು ಮತ್ತು ಇಟಲಿ, ನ್ಯೂಯಾರ್ಕ್ ಮತ್ತು ಚೀನಾದಲ್ಲಿ ಇದೇ ರೀತಿಯ ವರದಿಗಳಲ್ಲಿ, ಧೂಮಪಾನಿಗಳಲ್ಲಿ ಕೊವಿಡ್ (Covid-19) ಸೋಂಕಿನ ಅಪಾಯ ಕಡಿಮೆ ಇರುವ ಸಂಗತಿ ವರ್ತಿಸಲಾಗಿತ್ತು.
ಇದನ್ನೂ ಓದಿ- Maharashtra: 18 ವರ್ಷ ಮೇಲ್ಪಟ್ಟವರಿಗೂ ಕೂಡ ಉಚಿತ ವ್ಯಾಕ್ಸಿನ್
ಅಮೇರಿಕಾದಲ್ಲಿಯೂ ಕೂಡ ಇಂತಹ ತಥ್ಯಗಳು ಹೊರಬಂದಿವೆ (Such facts came to light in America as well)
ಅಮೆರಿಕದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (CDC) ನಡೆಸಿದ ಅಧ್ಯಯನದಲ್ಲಿಯೂ ಕೂಡ ಇದೇ ರೀತಿಯ ತಥ್ಯಗಳು ಬಹಿರಂಗಗೊಂಡಿದೆ. ಈ ಅಧ್ಯಯನದಲ್ಲಿ, ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದ 7,000 ಕ್ಕೂ ಹೆಚ್ಚು ಜನರನ್ನು ಸೇರಿಸಲಾಗಿದೆ. ಸಿಡಿಸಿ ವರದಿಯ ಪ್ರಕಾರ, ಅಮೆರಿಕದ ಜನಸಂಖ್ಯೆಯ ಶೇಕಡಾ 14 ರಷ್ಟು ಜನರು ಧೂಮಪಾನ ಮಾಡುತ್ತಿದ್ದರೆ, ಸೋಂಕಿತರಲ್ಲಿ ಕೇವಲ 1.3% ಮಾತ್ರ ಧೂಮಪಾನಿಗಳಾಗಿದ್ದಾರೆ.
ಇದನ್ನೂ ಓದಿ- BIG Announcement: ಮೋದಿ ಸರ್ಕಾರದ ದೊಡ್ಡ ಘೋಷಣೆ, PM CARES Fundನಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಆಕ್ಸಿಜನ್ ಪ್ಲಾಂಟ್
ಬ್ರಿಟನ್ ನಲ್ಲಿ ದೊರತ ಫಲಿತಾಂಶಗಳಿವು (This trend was also found in Britain)
ಇದೆ ರೀತಿ ಯುಸಿಎಲ್ (ಯೂನಿವರ್ಸಿಟಿ ಕಾಲೇಜ್ ಲಂಡನ್) ಶಿಕ್ಷಣ ತಜ್ಞರು ಯುಕೆ, ಚೀನಾ, ಯುಎಸ್ ಮತ್ತು ಫ್ರಾನ್ಸ್‌ನಲ್ಲಿ ಇಂತಹ 28 ಅಧ್ಯಯನಗಳನ್ನು ವಿಶ್ಲೇಷಿಸಿದ್ದಾರೆ, ಕೋವಿಡ್ -19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾದ ರೋಗಿಗಳಲ್ಲಿ ಧೂಮಪಾನಿಗಳ ಪ್ರಮಾಣವು ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಕಂಡುಹಿಡಿದಿದೆ. ಈ ಅಧ್ಯಯನವೊಂದರಲ್ಲಿ, ಯುಕೆ ಯಲ್ಲಿ ಕೋವಿಡ್ -19 ರೋಗಿಗಳಲ್ಲಿ ಧೂಮಪಾನಿಗಳ ಶೇಕಡಾವಾರು ಪ್ರಮಾಣವು ಕೇವಲ ಶೇ.5 ರಷ್ಟು ಮಾತ್ರ ಇತ್ತು ಎಂದು ತಿಳಿದುಬಂದಿದೆ. ಇದು ಅಲ್ಲಿನ ಧೂಮಪಾನಿಗಳ ದರಕ್ಕೆ(ಅಂದರೆ 14.4%) ಹೋಲಿಸಿದರೆ 1/3 ರಷ್ಟಿದೆ . ಫ್ರಾನ್ಸ್‌ನಲ್ಲಿ ನಡೆದ ಎರಡನೇ ಅಧ್ಯಯನವು ಧೂಮಪಾನಿಗಳ ಕೋವಿಡ್ -19 ಸೋಂಕುಗಳ ಪಾಲನ್ನು 7.1% ಎಂದು ತೋರಿಸಿದೆ, ಇದು ರಾಷ್ಟ್ರೀಯ ಸರಾಸರಿ 32% ನ ಕಾಲು ಭಾಗವಾಗಿದೆ. ಚೀನಾದಲ್ಲಿ ನಡೆಸಿದ ಅಧ್ಯಯನವು ಇಲ್ಲಿ ಕೇವಲ 3.8% ರೋಗಿಗಳು ಮಾತ್ರ ಧೂಮಪಾನಿಗಳಾಗಿದ್ದರೆ, ಇಲ್ಲಿ ಅರ್ಧದಷ್ಟು ಜನಸಂಖ್ಯೆಯು ನಿಯಮಿತವಾಗಿ ಸಿಗರೇಟ್ ಸೇದುತ್ತಾರೆ.
ಇದನ್ನೂ ಓದಿ- ಆಸ್ಪತ್ರೆಗಳಲ್ಲಿನ Oxygen, Bed ಮಾಹಿತಿ ಬೇಕೇ? ಈ Corona Helpline ಸಂಖ್ಯೆಗೆ ಡಯಲ್ ಮಾಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.