Danger: ಈ ದೇಶದಿಂದ ಬರುವ ಪ್ರಯಾಣಿಕರಿಗೆ 7 ವಿಮಾನ ನಿಲ್ದಾಣಗಳಲ್ಲಿ ನಡೆಯುತ್ತೆ ತನಿಖೆ
ಚೀನಾದಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಥರ್ಮಲ್ ತಪಾಸಣೆಗೆ ಒಳಪಡಿಸಲಾಗುತ್ತದೆ.
ನವದೆಹಲಿ: ಚೀನಾದಿಂದ ಆಗಮಿಸುವ ಪ್ರಯಾಣಿಕರ ತನಿಖೆ ನಡೆಸುವಂತೆ ಇನ್ನೂ ನಾಲ್ಕು ವಿಮಾನ ನಿಲ್ದಾಣಗಳಾದ ಚೆನ್ನೈ, ಬೆಂಗಳೂರು, ಹೈದರಾಬಾದ್ ಮತ್ತು ಕೊಚ್ಚಿನ್ಗಳಿಗೆ ನಾಗರಿಕ ವಿಮಾನಯಾನ ಸಚಿವಾಲಯ (MoCA) ಮಂಗಳವಾರ ತನಿಖೆಯನ್ನು ವಿಸ್ತರಿಸಿದೆ. ನೊವೆಲ್ ಕೊರೊನಾವೈರಸ್(Coronavirus) ಕಾಯಿಲೆ (ಎನ್‌ಸಿಒವಿ) ಬೆದರಿಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈವರೆಗೆ ದೆಹಲಿ, ಮುಂಬೈ ಮತ್ತು ಕೋಲ್ಕತಾ ವಿಮಾನ ನಿಲ್ದಾಣಗಳಲ್ಲಿ ಮಾತ್ರ ತನಿಖೆ ನಡೆಯುತ್ತಿದೆ. ಚೀನಾದ ಹುಬೈ ಪ್ರಾಂತ್ಯದ ವುಹಾನ್ ನಗರದಲ್ಲಿ ನೊವೆಲ್ ಕರೋನಾ ವೈರಸ್(Novel Corona Virus Disease) ಕಾಯಿಲೆಯಿಂದ ನ್ಯುಮೋನಿಯಾ ಹರಡಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ.
ಸಚಿವಾಲಯ ಹೊರಡಿಸಿದ ಸಲಹೆಯಲ್ಲಿ, ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ಉಷ್ಣ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಈ ವಿಮಾನ ನಿಲ್ದಾಣಗಳಲ್ಲಿ ಉಷ್ಣ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರಯಾಣಕ್ಕೂ ಮುನ್ನ ಪ್ರಯಾಣಿಕರನ್ನು ವಿಮಾನಯಾನ ಸಿಬ್ಬಂದಿಗಳು ಆರೋಗ್ಯ ತಪಾಸಣೆಗಾಗಿ ಕೌಂಟರ್‌ಗಳಿಗೆ ಕರೆತರುತ್ತಾರೆ.
ಇನ್ನು ಈ ವೈರಸ್ ಅನ್ನು ಸಾಧ್ಯವಾದಷ್ಟು ಬೇಗ ನಿಯಂತ್ರಿಸಲು ವಿಮಾನದಲ್ಲಿ (ಹಾಂಗ್ ಕಾಂಗ್ ಸೇರಿದಂತೆ ಚೀನಾದ ವಿಮಾನ ನಿಲ್ದಾಣದಿಂದ ಬರುತ್ತಿರುವ) ಪ್ರಯಾಣಿಕರು ಜ್ವರ ಮತ್ತು ಕಫದ ಸಮಸ್ಯೆಯ ಬಗ್ಗೆ ಹೇಳಿಕೊಳ್ಳುವಂತೆ ಘೋಷಿಸಲಾಗುವುದು. ಇದಲ್ಲದೆ ಕಳೆದ 14 ದಿನಗಳಲ್ಲಿ ವುಹಾನ್ ನಗರವನ್ನು ತಲುಪಿದ ಬಳಿಕ ತಮ್ಮ ನಾಗರೀಕರು ಸ್ವತಃ ಮುಂದೆ ಬಂದು ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಆರೋಗ್ಯ ಸಮಸ್ಯೆಯನ್ನು ಹೇಳಿಕೊಳ್ಳುವಂತೆ ಕೇಳಲಾಗುತ್ತಿದೆ.
ವೈರಸ್ ಪೀಡಿತ ನಗರಗಳಿಗೆ ಭೇಟಿ:
ವೈರಸ್ ಪೀಡಿತ ನಗರಗಳಿಗೆ ಭೇಟಿ ನೀಡಲಾಗಿದ್ದು ಪ್ರಯಾಣಿಕರು ಮತ್ತು ಅವರ ಆಗಮನದ ನಂತರ ಯಾವುದೇ ಲಕ್ಷಣಗಳಿಲ್ಲ ಎಂದು ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆದರೆ ಭಾರತಕ್ಕೆ ಆಗಮಿಸಿದ 28 ದಿನಗಳಲ್ಲಿ ಮೇಲಿನ ಲಕ್ಷಣಗಳು ಕಂಡುಬಂದರೆ, ಅವರು ಭಾರತದಲ್ಲಿ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ಅಧಿಕಾರಿಗಳಿಗೆ ಮತ್ತು ಸಂಬಂಧಪಟ್ಟ ವಿಮಾನ ನಿಲ್ದಾಣಗಳಿಗೆ ವರದಿ ಸಲ್ಲಿಸಬೇಕು.