ನವದೆಹಲಿ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಬ್ಲೂ ವೇಲ್ ಎಂಬ ಭಯಾನಕ ಗೇಮ್ ಕಥೆ ಮುಗಿಯಿತು ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ, ಇದೀಗ 'ಮೋಮೋ' ಎಂಬ WhatsApp ಗೇಮ್ ಸದ್ದು ಮಾಡುತ್ತಿದೆ. ಮುಗ್ಧರ ಜೀವ ಬಲಿ ತೆಗೆದುಕೊಳ್ಳುವಂತಹ ಜಪಾನ್ ಮೂಲದ ಈ ಗೇಮ್ ಈಗಾಗಲೇ ಅರ್ಜೆಂಟೈನಾದಲ್ಲಿ 12ರ ಹರೆಯದ ಬಾಲಕಿಯನ್ನು ಬಲಿ ಪಡೆದಿದ್ದು, ಭಾರತಕ್ಕೂ ಲಗ್ಗೆ ಇಡಲಿದೆ ಎಂಬ ಸುದ್ದಿ ಎಲ್ಲರಲ್ಲೂ ಗಾಬರಿ ಹುಟ್ಟಿಸಿದೆ.


COMMERCIAL BREAK
SCROLL TO CONTINUE READING

ಏನಿದು ಮೋಮೋ ಚಾಲೆಂಜ್?
ಮೋಮೋ ಚಾಲೆಂಜ್ ಎಂಬುದು WhatsApp ನಲ್ಲಿ ಹರಡುತ್ತಿರುವ ಆತ್ಮಹತ್ಯಾ-ಪ್ರಚೋದಕ ಆಟವಾಗಿದೆ. ಮೋಮೋ ಚಾಲೆಂಜ್ ನಲ್ಲಿ, ಹದಿಹರೆಯದವರಿಗೆ ಸವಾಲುಗಳನ್ನು ಕಳುಹಿಸಲು ಕಲಾಕೃತಿಯ ಚಿತ್ರವನ್ನು ಬಳಸಲಾಗುತ್ತದೆ. ಈ ಗೇಮ್ ಹದಿಹರೆಯದವರಿಗೆ ಸಾಯುವ ಟಾಸ್ಕ್ ನೀಡುತ್ತಿದೆ. ಅಗಲ ಕಣ್ಣುಗಳಿರುವ ಭಯಾನಕ  ಬಾಲಕಿಯೋರ್ವಳ ಮುಖಚರ್ಯೆ ಹೊಂದಿರುವ ಈ ಗೇಮ್ ಟಾರ್ಗೆಟ್ ಹದಿಹರೆಯದ ಮಕ್ಕಳೇ ಆಗಿದ್ದಾರೆ. ಬ್ಲೂ ವೇಲ್ ಗೇಮ್ ನಂತೆಯೇ ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುವಂತಹ ಈ ಗೇಮ್ ಭಾರತಕ್ಕೂ ಕಾಲಿಡುವ ಮುನ್ನ ಎಚ್ಚರಿಕೆ ವಹಿಸಬೇಕಾಗಿರುವುದು ಅತ್ಯಗತ್ಯವಾಗಿದೆ.


ಬ್ಯೂನಸ್ ಐರೆಸ್ ಟೈಮ್ಸ್ನ ವರದಿಯ ಪ್ರಕಾರ, ಮೋಮೋ ಸವಾಲು ಈವರೆಗೆ 12 ವರ್ಷ ವಯಸ್ಸಿನ ಅರ್ಜೈಂಟೈನಾದ ಹುಡುಗಿಯ ಸಾವಿಗೆ ಕಾರಣವಾಗಿದೆ. ಇದರ ನಂತರ ಅರ್ಜೆಂಟೈನಾದ ಪೊಲೀಸರು "ಆ ಸಂದೇಶಗಳನ್ನು ವಿನಿಮಯ ಮಾಡಿದವರಿಗಾಗಿ ಹುಡುಕುತ್ತಿದ್ದಾರೆ." ಜೊತೆಗೆ ಸ್ಪೇನ್ ರಾಷ್ಟ್ರೀಯ ಪೊಲೀಸರು ಪೋಷಕರಿಗೆ 'ಮೋಮೋ' ಚಾಲೆಂಜ್ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸೈಬರ್ ಕ್ರೈಮ್ ಅಧಿಕಾರಿಗಳು ಈ ಆನ್ಲೈನ್ ಸವಾಲುಗಳಿಂದ ತಮ್ಮ ಮಕ್ಕಳನ್ನು ರಕ್ಷಿಸಲು ಪೋಷಕರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ.