Delhi Violence : ಭಾರತದ ವಿರುದ್ಧ ವಿಷಕಕ್ಕಿದ ಪಾಕಿಸ್ತಾನ, ವಿಷಯ ಏನು ಗೊತ್ತಾ..?
ಕೆಂಪು ಕೋಟೆಯಲ್ಲಿ ಪ್ರತಿಭಟನಾಕಾರರು ತಮ್ಮ ಬಾವುಟ ಹಾರಿಸಿದ ಬೆನ್ನಲ್ಲೇ ಪಾಕಿಸ್ತಾನ ಭಾರತದ ವಿರುದ್ದ ವಿಷಕಕ್ಕಲು ಶುರು ಮಾಡಿದೆ.
ದೆಹಲಿ : ಕೆಂಪು ಕೋಟೆಯಲ್ಲಿ (Lal quila) ಪ್ರತಿಭಟನಾಕಾರರು ತಮ್ಮ ಬಾವುಟ ಹಾರಿಸಿದ ಬೆನ್ನಲ್ಲೇ ಪಾಕಿಸ್ತಾನ ಭಾರತದ (India) ವಿರುದ್ದ ವಿಷಕಕ್ಕಲು ಶುರು ಮಾಡಿದೆ. ಭಾರತ ಯಾವುದೇ ಆಂತರಿಕ ವಿಷಯದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಪಾಕಿಸ್ತಾನಕ್ಕೆ (Pakistan) ವಿಚಿತ್ರ ಖುಷಿ ಸಿಗುತ್ತದೆ. ಭಾರತ ಯಾವಾಗಲೂ ಏನಾದರೊಂದು ಸಂಕಷ್ಟದಲ್ಲಿ ಇರಲಿ ಎಂಬುವುದೇ ಪಾಕಿಸ್ತಾನದ ಆಸೆ. ಆ ರೀತಿಯ ಯಾವುದೇ ಸನ್ನಿವೇಶ ಸಿಕ್ಕಿದರೂ ಭಾರತದ ವಿರುದ್ಧ ವಿಷ ಕಕ್ಕಲು ಪಾಕಿಸ್ತಾನ ಯಾವುದೇ ವಿಳಂಬ ಮಾಡುವುದಿಲ್ಲ.
ಕೃಷಿ ಆಂದೋಲನದೊಳಗಿಂದ (Farm Bill) ನುಸುಳಿ ಬಂದ ಪ್ರತಿಭಟನಾಕಾರರು ಕೆಂಪು ಕೋಟೆಯ (Redfort) ಮೇಲೆ ಬೇರೊಂದು ಧ್ವಜ ಹಾರಿಸಿದ್ದ ಪ್ರಕರಣದಲ್ಲಿ ಪರಮಸಂತೋಷವಾಗಿದ್ದು ಪಾಕಿಸ್ತಾನಕ್ಕೆ. ಘಟನೆ ಬಗ್ಗೆ ಹೇಳಿಕೆ ನೀಡಿರುವ ಪಾಕಿಸ್ತಾನ ವಿದೇಶ ಮಂತ್ರಿ ಶಾ ಮೆಹಮೂದ್ ಖುರೇಶಿ (Shah Mahmood Qureshi), ರೈತರ ಧ್ವನಿಯನ್ನು ಅಡಗಿಸುವಲ್ಲಿ ಭಾರತ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಂಪೂರ್ಣ ಭಾರತ ರೈತರ ಪರವಾಗಿ ನಿಂತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Farmers Protest : ದೆಹಲಿ ಹಿಂಸಾಚಾರ ಪ್ರಕರಣ ; ಅಮಿತ್ ಷಾ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ, ಪ್ರಧಾನಿ ಭೇಟಿ ಸಾಧ್ಯತೆ
ಈ ನಡುವೆ, ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಫಾವದ್ ಚೌಧರಿ (Fawad Chaudhry) ಕೂಡಾ ಟ್ವೀಟ್ ಮಾಡಿದ್ದಾರೆ. ವಿಶ್ವದ ದೇಶಗಳು ಭಾರತದ ವಿರುದ್ಧ ಧ್ವನಿಯೆತ್ತಬೇಕು ಎಂದು ಒತ್ತಾಯಿಸಿದ್ಧಾರೆ.
ಪಾಕಿಸ್ತಾನ ಮಾಧ್ಯಮಗಳಲ್ಲೂ (Pak media) ನಿನ್ನೆ ಕೆಂಪು ಕೋಟೆಯದ್ದೇ ಸುದ್ದಿ. ಭಾರತೀಯ ರೈತರು (Farmers) ಕೆಂಪುಕೋಟೆಯ ಮೇಲೆ ವಿಜಯ ಸಾಧಿಸಿದ್ದಾರೆ ಎಂದು ಹೇಳಿವೆ. ಭಾರತದ ವಿರುದ್ಧಅಲ್ಲಿನ ಸ್ಥಳೀಯ ಮಾಧ್ಯಮಗಳೂ ವಿಷ ಕಾರುತ್ತಿವೆ.
ಇದನ್ನೂ ಓದಿ :Tractor Rally: ಹಿಂಸಾಚಾರದ ಬೆನ್ನಲ್ಲೇ 'ಟ್ರಾಕ್ಟರ್ ರ‍್ಯಾಲಿ' ಹಿಂಪಡೆದ ರೈತ ಸಂಘಟನೆಗಳು..!
ರೈತರ ಆಂದೋಲನ (Farmer Protest) ಭಾರತದ ಆಂತರಿಕ ವಿಷಯವಾಗಿದೆ. ಈ ವಿಷಯದಲ್ಲಿ ಮೂಗು ತೂರಿಸಲು ಪಾಕಿಸ್ಥಾನಕ್ಕೆ ಯಾವುದೇ ಅಧಿಕಾರವಿಲ್ಲ. ಆದರೂ, ತನ್ನ ಆಂತರಿಕ ಸಮಸ್ಯೆಗಳ ವಿಷಯಾಂತರ ಮಾಡಲು ಪಾಕಿಸ್ತಾನ ತನ್ನ ಜನರಿಗೆ ಭಾರತದ ಸಮಸ್ಯೆಯ ಬಗ್ಗೆ ಪಾಠ ಹೇಳುತ್ತಿದೆ. ಗೊತ್ತಿರಲಿ, ಕಳೆದೆರಡು ತಿಂಗಳುಗಳಿಂದ ಪಾಕಿಸ್ತಾನದ ಪ್ರತಿಪಕ್ಷಗಳು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪಾಕಿಸ್ತಾನ ಪ್ರಮುಖ ನಗರಗಳಲ್ಲಿ ಬೃಹತ್ ಜಾಥಾ ನಡೆಸಿವೆ. ರಾಜಧಾನಿ ಇಸ್ಲಾಮಾಬಾದಿಗೂ ಮುತ್ತಿಗೆ ಹಾಕಿ ಇಮ್ರಾನ್ ಖಾನ್ (Imran Khan) ಸರ್ಕಾರದ ನಿದ್ರೆ ಗೆಡಿಸಿವೆ. ಪಾಕಿಸ್ತಾನದ ಆರ್ಥಿಕವಾಗಿ ದಿವಾಳಿಯೆದ್ದಿದೆ. ಹಣದುಬ್ಬರ ದರ ವಿಪರೀತವಾಗಿದೆ. ಒಂದು ಲೀಟರ್ ಹಾಲಿಗೆ 200 ರೂಪಾಯಿ ನೀಡಬೇಕಾಗಿದೆ. ಒಂದು ಕೆಜಿ ಗೋಧಿ ಹಿಟ್ಟಿಗೆ ನೂರು ರೂಪಾಯಿಗೂ ಹೆಚ್ಚಿಗೆ ಕೊಡಬೇಕಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.