Farmers Protest : ದೆಹಲಿ ಹಿಂಸಾಚಾರ ಪ್ರಕರಣ ; ಅಮಿತ್ ಷಾ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ, ಪ್ರಧಾನಿ ಭೇಟಿ ಸಾಧ್ಯತೆ

ದೆಹಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, 15 ಎಫ್ಐಆರ್ ದಾಖಲಾಗಿದೆ. ದೆಹಲಿಯ ಹಲವೆಡೆ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.

Written by - Ranjitha R K | Last Updated : Jan 27, 2021, 09:18 AM IST
  • ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, ಗೃಹ ಸಚಿವ ಅಮಿತ್ ಶಾ ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ.
  • ಗೃಹ ಸಚಿವ ಅಮಿತ್ ಶಾ ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಬಹುದು.
  • ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ, 15 ಎಫ್ ಐಆರ್ ದಾಖಲಿಸಲಾಗಿದೆ
Farmers Protest : ದೆಹಲಿ ಹಿಂಸಾಚಾರ ಪ್ರಕರಣ ; ಅಮಿತ್ ಷಾ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಭೆ, ಪ್ರಧಾನಿ ಭೇಟಿ ಸಾಧ್ಯತೆ title=
ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ವೇಳೆ ಹಿಂಸಾಚಾರ (photo Zee News)

ನವದೆಹಲಿ: ಕೃಷಿ ಕಾನೂನು ವಿರೋಧಿಸಿ, ರೈತರು ನಡೆಸಿದ ಟ್ರ್ಯಾಕ್ಟರ್ ಪರೇಡ್ (Tactor Parade) ಹಿಂಸಾರೂಪ ಪಡೆದುಕೊಂಡಿತ್ತು. ತಮ್ಮ ಟ್ರ್ಯಾಕ್ಟರ್ ಗಳೊಂದಿಗೆ ಪ್ರತಿಭಟನಾಕಾರರು (Farmer Protest) ಕೆಂಪುಕೋಟೆಗೆ ಮುತ್ತಿಗೆ ಹಾಕಿದ್ದರು. ಈ ವೇಳೆ ಪೊಲೀಸರೊಂದಿಗೆ  ಘರ್ಷಣೆಯೂ ನಡೆದಿದೆ. ಅಲ್ಲದೆ, ತ್ರಿವರ್ಣಧ್ವಜ ಹಾರಿಸುವ ಸ್ಥಳದಲ್ಲಿ ತಮ್ಮ ಧರ್ಮದ ಧ್ವಜವನ್ನು ಹಾರಿಸಿದ್ದರು.

- ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ,  ಗೃಹ ಸಚಿವ ಅಮಿತ್ ಶಾ (Amith Shah) ಇಂದು ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಗೃಹ ಕಾರ್ಯದರ್ಶಿ ಮತ್ತು ಐಬಿ ನಿರ್ದೇಶಕರು ಕೂಡ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

-ಗೃಹ ಸಚಿವ ಅಮಿತ್ ಶಾ  ಇಂದು ಪ್ರಧಾನಿ ನರೇಂದ್ರ ಮೋದಿ (Narendra Modi)  ಅವರನ್ನು ಭೇಟಿ ಮಾಡಬಹುದು. ಮಂಗಳವಾರ ನಡೆದ ಗೃಹ ಸಚಿವಾಲಯದ ಸಭೆಯಲ್ಲಿ ದೆಹಲಿಯಲ್ಲಿ ಪ್ಯಾರಾ ಮಿಲಿಟರಿ ಫೋರ್ಸ್‌ನ 15 ಹೆಚ್ಚುವರಿ ತುಕಡಿಗಳನ್ನು ನಿಯೋಜಿಸಲು ನಿರ್ಧರಿಸಲಾಗಿತ್ತು.

-ಟ್ರ್ಯಾಕ್ಟರ್ ಪೆರೇಡ್ (Tactor Parade) ಹಿಂಸಾಚಾರಕ್ಕೆ ಸಂಬಂಧಿಸಿದಂತೆ,  15 ಎಫ್ ಐಆರ್  (FIR) ದಾಖಲಿಸಲಾಗಿದೆ.  ದ್ವಾರಕಾ ಜಿಲ್ಲೆಯಲ್ಲಿ 3, ಪೂರ್ವ ದೆಹಲಿಯಲ್ಲಿ 3  ಮತ್ತು ಶಹದಾರ ಜಿಲ್ಲೆಯಲ್ಲಿ ಒಂದು, ಹೀಗೆ  ವಿವಿಧ ಠಾಣೆಗಳಲ್ಲಿ  ಎಫ್ ಐಆರ್ ದಾಖಲಾಗಿದೆ.

- ಕೆಂಪು ಕೋಟೆ ಮೆಟ್ರೋ ನಿಲ್ದಾಣದ (Metro Station) ಪ್ರವೇಶದ್ವಾರವನ್ನು ಮುಚ್ಚಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ ಹೇಳಿದೆ. ದೆಹಲಿ ಮೆಟ್ರೋದ ಇತರ ಎಲ್ಲಾ ನಿಲ್ದಾಣಗಳು ತೆರೆದಿರುತ್ತವೆ ಮತ್ತು ಸಾಮಾನ್ಯ ಸೇವೆಗಳು ಎಲ್ಲಾ ಮಾರ್ಗಗಳಲ್ಲಿ ಲಭ್ಯವಿರುತ್ತದೆ.

ಇದನ್ನೂಓದಿ : Tractor Rally: ಹಿಂಸಾಚಾರದ ಬೆನ್ನಲ್ಲೇ 'ಟ್ರಾಕ್ಟರ್ ರ‍್ಯಾಲಿ' ಹಿಂಪಡೆದ ರೈತ ಸಂಘಟನೆಗಳು..!

ಇಂಟರ್ ನೆಟ್ ಸೇವೆ ಸ್ಥಗಿತ :
ದೆಹಲಿಯ ಹಿಂಸಾಚಾರದ ಕಾರಣ ಮಂಗಳವಾರ ಹಲವು ಭಾಗಗಳಲ್ಲಿ ಇಂಟರ್ ನೆಟ್ (Internet) ಸೇವೆ ಸ್ಥಗಿತಗೊಂಡಿತ್ತು.  ಕೆಲವು ಕಡೆ ಇನ್ನೂ ಕೂಡಾ  ಇಂಟರ್ ನೆಟ್ ಸೇವೆ ಸ್ಥಗಿತವಾಗಿದೆ. ದೆಹಲಿಯ ಪಕ್ಕದ ಹರಿಯಾಣದ ಅನೇಕ ಜಿಲ್ಲೆಗಳಲ್ಲಿ, ಇಂದು ಸಂಜೆ 5 ಗಂಟೆಯವರೆಗೆ ಇಂಟರ್ನೆಟ್ ನಿಲ್ಲಿಸಲು ನಿರ್ಧರಿಸಲಾಗಿದೆ. ವದಂತಿಗಳನ್ನು ನಿಯಂತ್ರಿಸಲು ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸುವ ನಿರ್ಧಾರಕ್ಕೆ ಬರಲಾಗಿದೆ. 

ಕೆಂಪುಕೋಟೆಯಲ್ಲಿ ತಮ್ಮ ಬಾವುಟ ಹಾರಿಸಿದ  ಪ್ರತಿಭಟನಾಕಾರರು :
ರೈತರ ಟ್ರ್ಯಾಕ್ಟರ್ ಪರೇಡ್ ನಿನ್ನೆ  ಉಗ್ರ ಸ್ವರೂಪ  ಪಡೆದಿತ್ತು. ಪೊಲೀಸ್  (Police) ಬ್ಯಾರಿಕೇಡ್ ಮುರಿದು ನುಗ್ಗಿದ ರೈತರು,  ಕೆಂಪುಕೋಟೆ ಪ್ರವೇಶಿಸಿದ್ದರು. ಕೆಂಪುಕೋಟೆಯ (Red Fort) ಗೇಟ್ ಒಡೆದು ನುಗ್ಗಿದ್ದ ಪ್ರತಿಭಟನಾಕಾರರು ಅದರ ಗುಮ್ಮಟವನ್ನೇರಿ ತಮ್ಮ ಧ್ವಜ ಹಾರಿಸಿದದರು.   ಇದೇ ಸ್ಥಳದಲ್ಲಿ ಆಗಸ್ಟ್ 15 ರಂದು ಪ್ರಧಾನಮಂತ್ರಿ ದೇಶದ ಧ್ವಜ ಹಾರಿಸುತ್ತಾರೆ. ಬಳಿಕ ಸುಮಾರು 90 ನಿಮಿಷ ಪ್ರದರ್ಶನಕಾರರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ನಂತರವೇ ಪ್ರತಿಭಟನಾಕಾರರನ್ನು (Protest) ಕೆಂಪುಕೋಟೆಯಿಂದ ತೆರವುಗೊಳಿಸಲಾಯಿತು.  ಅವರು ಹಾರಿಸಿದ್ದ ಧ್ವಜವನ್ನೂ ಕಿತ್ತೊಗೆಯಲಾಯಿತು. 

ಇದನ್ನೂಓದಿ : ಟ್ರ್ಯಾಕ್ಟರ್ ರ್ಯಾಲಿಯಿಂದಾಗಿ ರೈಲುಗಳನ್ನು ತಪ್ಪಿಸಿಕೊಂಡವರಿಗೆ ಹಣ ಹಿಂತಿರುಗಿಸಲು ಮುಂದಾದ ರೈಲ್ವೆ ಇಲಾಖೆ

ಕೃಷಿ ಕಾನೂನು ರದ್ದತಿಗೆ ಪಟ್ಟು ಹಿಡಿದಿರುವ ರೈತರು :
ಕೃಷಿ ಕಾನೂನನ್ನು ರದ್ದುಗೊಳಿಸಬೇಕೆಂದು ರೈತರು (Farmers) ಕಳೆದ 63 ದಿನಗಳಿಂದ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದು, ದೆಹಲಿಯ ಗಡಿಭಾಗದಲ್ಲಿ  ಪ್ರತಿಭಟನೆ ಮುಂದುವರಿಸಿದ್ದಾರೆ. ಎಂಎಸ್ ಪಿಗೆ ಕಾನೂನು ಖಾತರಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News